ಸಹಿ ಸಂಗ್ರಹ ಚಳವಳಿ ವರದಿ ಶೀಘ್ರ ಸಿಎಂಗೆ ಸಲ್ಲಿಕೆ


Team Udayavani, Jul 8, 2021, 10:48 PM IST

8-19

ಬಳ್ಳಾರಿ: ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌, ಡಿಪ್ಲೊಮಾ ವಿದ್ಯಾರ್ಥಿಗಳ ಸೆಮಿಸ್ಟರ್‌ ಪರೀಕ್ಷೆಗಳಿಗೆ ಸಂಬಂ ಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಜುಲೈ 4,5,6 ರಂದು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಚಳವಳಿಯ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಜೆ.ಪಿ.ರವಿಕಿರಣ್‌ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡೂ¾ರು ವಾರಗಳಿಂದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಹಿಂದಿನ ಸೆಮಿಸ್ಟರ್‌ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಲಭಿಸಿಲ್ಲ.

ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ರಾಜ್ಯಮಟ್ಟದ ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಎಐಡಿಎಸ್‌ಒ ರಾಜ್ಯ ಸಮಿತಿ ಜುಲೈ 4, 5, 6ರಂದು 3 ದಿನಗಳ ಕಾಲ ರಾಜ್ಯದಾದ್ಯಂತ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿತ್ತು ಎಂದು ವಿವರಿಸಿದರು. ಆನ್‌ಲೈನ್‌ ಹಾಗೂ ಆಫ್‌ಲೈನ್‌ ಸಮೀಕ್ಷೆಯಲ್ಲಿ 1,10,000 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.

ಈ ಪೈಕಿ ಶೇ.90 ರಷ್ಟು ಜನರು ಹಿಂದಿನ ಸೆಮಿಸ್ಟರ್‌ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಕುರಿತ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಬೇಡಿಕೆಗಳ ಮನವಿ ಹಾಗೂ ಸಹಿ ಸಂಗ್ರಹದ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದರು.

ಸಹಿ ಸಂಗ್ರಹದ ಅಭಿಯಾನದಲ್ಲಿ ನಿವೃತ್ತ ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರು, ಮಾಜಿ ಕುಲಪತಿ ಪ್ರೊ| ಡಾ| ಎಂ.ವಿ. ನದಕರ್ಣಿ, ಡಾ| ಎಂ.ಎಸ್‌.ತಿಮ್ಮಪ್ಪ, ಪ್ರೊ|ಡಾ| ಆರ್‌.ಎನ್‌. ಶ್ರೀನಿವಾಸ ಗೌಡ, ಕನ್ನಡ ಲೇಖಕ ಪ್ರೊ| ಪಿ.ವಿ. ನಾರಾಯಣ, ನಿವೃತ್ತ ಪ್ರಾಧ್ಯಾಪಕ ಪ್ರೊ| ಚಂದ್ರ ಪೂಜಾರಿ, ಪ್ರೊ| ರಾಜೇಂದ್ರ ಚೆನ್ನಿ ಭಾಗವಹಿಸಿದ್ದರು ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕೆ.ಈರಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಉಪಾಧ್ಯಕ್ಷೆ ಜೆ.ಸೌಮ್ಯ, ಜಿಲ್ಲಾ ಸೆಕ್ರೆಟರಿಯಟ್‌ ಸದಸ್ಯರಾದ ಕೆ. ಈರಣ್ಣ, ಎಂ.ಶಾಂತಿ, ಸಿದ್ದು, ನಿಹಾರಿಕಾ ಮತ್ತು ವಿದ್ಯಾರ್ಥಿಗಳ ಹೋರಾಟ ಸಮಿತಿ ಸದಸ್ಯರು ಇದ್ದರು.

ಟಾಪ್ ನ್ಯೂಸ್

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

santhosh

Sushasana Day: ಕಾಂಗ್ರೆಸ್‌ ಆಡಳಿತದಲ್ಲಿ ಜಂಗಲ್‌ ರಾಜ್‌ ಸೃಷ್ಟಿ: ಬಿ.ಎಲ್‌.ಸಂತೋಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.