ಮಕ್ಕಳ ಆರೋಗ್ಯ ರಕ್ಷಣೆಗಾಗಿ ಯೋಗಾಸನ


Team Udayavani, Jul 9, 2021, 6:10 AM IST

ಮಕ್ಕಳ ಆರೋಗ್ಯ ರಕ್ಷಣೆಗಾಗಿ ಯೋಗಾಸನ

“ಯೋಗ’ ನಮ್ಮ ಪೂರ್ವಜರು ಮನುಕುಲಕ್ಕೆ ಕೊಟ್ಟ ಬಲುದೊಡ್ಡ ಕೊಡುಗೆ. ಇದು ಶಾಂತಿ ಹಾಗೂ ಅಭಿವೃದ್ಧಿಗಾಗಿ ಒಂದು ರಹದಾರಿ ಎನ್ನಬಹುದು. ಲೌಕಿಕ ಸುಖಗಳು ನಿಜವಾದ ಸಂತೋಷವನ್ನು ಕೊಡುವುದಿಲ್ಲ. ನಮ್ಮ ಆಶೋತ್ತರಗಳನ್ನು ಈಡೇರಿಸುವುದಕ್ಕೆ ಎಣೆಯೇ ಇಲ್ಲ. ನಮ್ಮ ದೈನಂದಿನ ಕಾರ್ಯಗಳನ್ನು ನಿಷ್ಕಾಮವಾಗಿ ಮಾಡುವುದೇ ಯೋಗ. ಈ ಒಂದು ನಿಷ್ಪಕ್ಷವಾದ ಧೋರಣೆಯನ್ನು ಹೊಂದಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದೇ ಯೋಗ.

ಇದಕ್ಕೆ ಬೇಕಾದ ಸಾಧನಗಳು – ದೇಹ/ಶರೀರ (ಸ್ವಸ್ಥ), ಮನಸ್ಸು (ಶುದ್ಧ), ಬುದ್ಧಿ (ಸಮರ್ಪಕವಾಗಿ ವಿವೇಚನಯುಕ್ತ).

ಆದರೆ ಈಗಿನ ಪರಿಸ್ಥಿತಿ: ದೇಹ (ಸ್ವಸ್ಥ  ಇಲ್ಲ ),

ಮನಸ್ಸು (ಶುದ್ಧವಿಲ್ಲ), ಬುದ್ಧಿ (ವಿವೇಚನಾ ರಹಿತ) ಯೋಗವು ಇವೆಲ್ಲವನ್ನು ಸರಿಪಡಿ ಸಲು ಸಹಾಯಕ. ಯೋಗಾಸನವು ಬರೀ ಅವಯವಗಳ ಬಾಗಿ ಸುವಿಕೆ /ತಿರುಚುವಿಕೆಯ ಪ್ರದರ್ಶನವಲ್ಲ. ಇದು ಎಲ್ಲ ವಯೋಮಿತಿಯವರಿಗೂ ಅನ್ವಯಿ ಸುತ್ತದೆ. ಒಬ್ಬ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯವನ್ನು ಒದಗಿಸುತ್ತದೆ.

ಮಕ್ಕಳಲ್ಲಿ  ಯೋಗದ ವಿವಿಧ ಸಾಧನಗಳಿಂದ ಆಗುವ ಲಾಭಗಳು :

  1. ಮಂತ್ರ: ಮಂತ್ರಗಳ ಉಚ್ಚಾರಣೆಯಿಂದ ಆಗುವ ತರಂಗಗಳ ಉತ್ಪತ್ತಿ ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಭಾಷೆ ಬೆಳವಣಿಗೆಗೆ ಉಪಯುಕ್ತವಾಗುತ್ತದೆ. ಬೇರೆ ಯವರ ಜತೆ ಬೆರೆಯುವಾಗ, ಕಣ್ಣಲ್ಲಿ ನೇರವಾಗಿ ನೋಡಿ ಮಾತನಾಡುವುದು ಇತ್ಯಾದಿ.
  2. ಉಸಿರಾಟ: ದೀರ್ಘ‌ ಶ್ವಾಸದಿಂದ ಹಿತ ವಾದ ಅನುಭವ/ಪರಿಣಾಮ ಉಂಟಾ ಗುತ್ತದೆ. ಮಕ್ಕಳು ಒತ್ತಡವನ್ನು ಎದುರಿಸಿದಾಗ ಅವರಿಗೆ ನಯವಾಗಿ ದೀರ್ಘ‌ ಶ್ವಾಸವನ್ನು ತೆಗೆ ದುಕೊಳ್ಳುವಂತೆ ತರಬೇತಿ ಕೊಡಬಹುದು. ಸರಿ ಯಾದ ಉಸಿರಾಟ (ಮನಃಪೂರ್ವಕವಾಗಿ) ಮಾತನಾಡುವುದರಿಂದ ದೈಹಿಕ ಹಾಗೂ ಮಾತಿನ ಸಮ ತೋಲನ ಕಾಯ್ದುಕೊಳ್ಳಬಹುದು.
  3. ಆಸನಗಳು: ಸರ್ವಾಂಗಿಣ ಬೆಳವಣಿಗೆ, ದೇಹದ ಅರಿವು.
04. ಗಾಢ ವಿಶ್ರಾಂತಿ: ಸ್ವಲ್ಪ (ಅತ್ಯಲ್ಪ) ಸಮಯದ ಗಾಢ ವಿಶ್ರಾಂತಿಯಿಂದ ಮಕ್ಕಳಿಗೆ

peractive children especially)ತುಂಬ ಲಾಭವಾಗುತ್ತದೆ & Done by using risulalization techniques.


  1. ಧ್ಯಾನದ ಸಾಧನಗಳು:
    ಏಕಾಗ್ರತೆಯನ್ನು ವೃದ್ಧಿಸುತ್ತದೆ. ಒಂದು ಕಡೆ ಕುಳಿತು ಕೆಲಸ ಮಾಡುವುದಕ್ಕೆ ಸಹಾಯವಾಗುತ್ತದೆ. ಸಕಾರಾತ್ಮಕ ಭಾವನೆಗಳಿಗೆ ಒತ್ತು ಕೊಟ್ಟು, ಸರಳವಾದ ಸಂಕಲ್ಪವನ್ನು ಮನನ ಮಾಡಿಸುವುದರಿಂದ ತುಂಬಾ ಉಪಯೋಗವಿದೆ.

 ಶಿಶುಗಳಲ್ಲಿ  ಯೋಗ :

  • ಹೆತ್ತವರೊಂದಿಗೆ interaction
  • ಕೈಕಾಲುಗಳಿಗೆ ಸೈಕ್ಲಿಂಗ್‌ ಚಲನೆ ಮಾಡಿಸುವುದು./ 5ರಿಂದ 15 ನಿಮಿಷ.
  • ಕೈಗಳ ಚಲನೆ.
  • ಹಾಡುಗಳು – ಭಾವದೊಂದಿಗೆ.

Toddlers upto 3yrs: ವರ್ಷಕ್ಕಿಂತ ಮೇಲೆ – ಮೂರು ವರ್ಷಗಳವರೆಗೆ

  • ಸರಳವಾದ stretching
  • ಪ್ರಾಣಿಗಳ ಅನುಕರಣೆ
  • “ನಾನು ಮಾಡಬಲ್ಲೆ’ ಎಂಬ ಸಕಾರಾತ್ಮಕ ಸಂಕಲ್ಪ / 5-10 ನಿಮಿಷ. 30-60 ಸೆಕೆಂಡ್‌ ವಿಶ್ರಾಂತಿ.

Preschooler (4-6 yrs) :

  • ಯೋಗದ ಬಗ್ಗೆ ಸ್ವಲ್ಪ ಮಾಹಿತಿ  ಕೊಡುವುದು. /15-25 ನಿಮಿಷ
  • ಆಲೋಚನ ಲಹರಿಗೆ ಅವಕಾಶ ಮಾಡಿ ಕೊಡುವುದು. / 15-25 ನಿಮಿಷ
  • ಒಂದೆಡೆ ಕುಳಿತುಕೊಂಡು ಅಂತರ್ಮುಖೀ ಆಗುವುದು. / 15-25 ನಿಮಿಷ
  • ಸರಳ ಆಸನಗಳು / 15-25 ನಿಮಿಷ, 1-2 ನಿಮಿಷ ವಿಶ್ರಾಂತಿ.

ಸಾಮಾನ್ಯ ಮಾಹಿತಿಗಳು:

  • ಯೋಗ ಸ್ಪರ್ಧಾತ್ಮಕ ಅಲ್ಲ: ಶುಭ್ರ ಗಾಳಿ ಇರುವ ಸ್ಥಳ ಆಯ್ಕೆ.
  • ಆಹಾರ ಸೇವಿಸುವ ಮೊದಲು ಆಸನಗಳ ಅಭ್ಯಾಸ.
  • ಸರಳವಾದ ಆಸನಗಳು ಮೃದುವಾಗಿ ಮಾಡಿಸುವುದು.
  • ಉಸಿರಾಟದ ಕಡೆ ಗಮನ ಕೊಡುವುದಕ್ಕೆ ಒತ್ತು.
  • ವಿಶ್ರಾಂತಿಯೊಂದಿಗೆ ಮುಗಿಸುವುದು.
  • ಪ್ರಾರಂಭಕ್ಕೆ ಪ್ರಾರ್ಥನೆ ಮತ್ತು ಕೊನೆಗೆ ಶಾಂತಿ ಪಾಠ.
  1. 7 ವರ್ಷ ಮೇಲ್ಪಟ್ಟವರಿಗೆ:

ಅವರ ಸಾಮರ್ಥ್ಯಕ್ಕೆ ತಕ್ಕಂತೆ ನಿಯಮಿತ ಸ್ಥಳ, ಸಮಯವನ್ನು ನಿಗದಿಪಡಿಸಿ ಯೋಗಸಾಧನಗಳನ್ನು ಮಾಡಿಸುವುದು.

  • 30 ನಿಮಿಷ
  • 3-5 ನಿಮಿಷ ವಿಶ್ರಾಂತಿ.

ಯೋಗಾಸನದ ಲಾಭಗಳು :

  1. ಶಾರೀರಿಕ ಸಮತೋಲನ ಮತ್ತು ನಮ್ಯತೆ
  2. ಹೃದಯದ ಸಮರ್ಪಕ ಕಾರ್ಯನಿರ್ವಹಿಸುವಿಕೆ.
  3. ಸರಿಯಾದ ಪಚನ ಕ್ರಿಯೆ.
  4. ಹೊಟ್ಟೆಯ ಸ್ನಾಯುಗಳ ಬಲವೃದ್ಧಿ.
  5. ಅವಯವದ ಸ್ನಾಯುಗಳು ಬಲಿಷ್ಠಗೊಳ್ಳುವುದು.
  6. ತೂಕ ನಿರ್ವಹಣೆ.
  7. ಶಕ್ತಿಯ ಪ್ರಮಾಣ ಹೆಚ್ಚಿಸುವುದು.
  8. ರೋಗ ನಿರೋಧಕ ಶಕ್ತಿ ಬಲಪಡಿಸುವಿಕೆ. ಶಕ್ತಿ (ಸಮತೋಲನ ಮತ್ತು ಅಗತ್ಯಕ್ಕೆ ತಕ್ಕಂತೆ).

ಮಾನಸಿಕ ಲಾಭಗಳು :

1. ಅತಿಯಾದ ಒತ್ತಡದಿಂದ ನಿವಾರಣೆ

  1. ಒತ್ತಡಗಳಿಂದ ಬರುವಂಥ ಕಾಯಿಲೆಗಳನ್ನು

ದೂರ ಇಡುವುದು.

  1. ಬುದ್ಧಿಮತ್ತೆಯ ಬೆಳವಣಿಗೆ.

ಹೇಗೆ ಒತ್ತಡ ಮುಕ್ತಗೊಳಿಸುತ್ತದೆ? :

  1. ನಮ್ಮ ಸ್ನಾಯುಗಳ, ರಕ್ತನಾಳಗಳ, ನರಗಳ ಇತ್ಯಾದಿ ಮೇಲೆ ಮಸಾಜ್‌ ಮಾಡಿದಂತಾಗಿ ಮುದ ನೀಡುತ್ತದೆ.
  2. ಮನಸ್ಸಿಗೆ ಖುಷಿ ಕೊಡುವಂಥ Happy Hormones (Endorphins)) ಬಿಡುಗಡೆಯಾಗುತ್ತದೆ.
  3. Sympathetic & Parasympathetic ಚಟುವಟಿಕೆಯ ಸಮತೋಲನ.
  4. ಯಾವುದೇ ಕಾರ್ಯ ನಿರ್ವಹಿಸುವಾಗ ಏಕಾಗ್ರತೆಯನ್ನು ಒದಗಿಸುತ್ತದೆ. (ಆಸನಗಳ ಅಭ್ಯಾಸ‌, ಪ್ರಾಣಾಯಾಮ, ಧ್ಯಾನದ ಸಾಧನಗಳಿಂದ).

 

-ಡಾ| ದಿನೇಶ್‌ ಎಂ. ನಾಯಕ್‌

ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಮಕ್ಕಳ ವಿಭಾಗ,

ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.