ಅತ್ಯಾಧುನಿಕ ವಿನ್ಯಾಸ; ಟಾಟಾದ ಡಾರ್ಕ್ ರೇಂಜ್ ರಿಲೀಸ್
ಮಾರುಕಟ್ಟೆಗೆ ಬಿಡುಗಡೆಯಾದ ವಾಹನಗಳು ಹಲವು ಶ್ರೇಣಿಗಳಲ್ಲಿ ಲಭಿಸಲಿವೆ.
Team Udayavani, Jul 9, 2021, 3:56 PM IST
ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಟಾಟಾ ಮೋಟರ್ಸ್ ಬುಧವಾರ ಡಾರ್ಕ್ ರೇಂಜ್‌ನ ವಾಹನಗಳನ್ನು ಬಿಡುಗಡೆ ಮಾಡಿದೆ. ಆಲ್ಟ್ರೋಜ್, ನೆಕ್ಸಾನ್, ನೆಕ್ಸಾನ್ ಇ.ವಿ., ಹ್ಯಾರಿಯರ್ ವಾಹನಗಳು ಈ ಶ್ರೇಣಿಯಲ್ಲಿ ಲಭ್ಯವಾಗಲಿವೆ. ಆಲ್ಟ್ರೋಜ್ ಡಾರ್ಕ್‌ಗೆ 8.71
ಲಕ್ಷ ರೂ.ಗಳಿಂದ ದರ ಶ್ರೇಣಿ ಶುರುವಾಗಲಿದೆ.
ಇದನ್ನೂ ಓದಿ:ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ 4 ಸಚಿವ ಸ್ಥಾನ : ಪ್ರಧಾನಿಯವರಿಗೆ ರಾಜ್ಯ ಬಿಜೆಪಿ ಅಭಿನಂದನೆ
ನೆಕ್ಸಾನ್‌ಗೆ 10.41 ಲಕ್ಷ ರೂ., ನೆಕ್ಸಾನ್ ಇ.ವಿಗೆ. 15.99 ಲಕ್ಷ ರೂ., ಹ್ಯಾರಿಯರ್ ಡಾರ್ಕ್‌ಗೆ 18.04 ಲಕ್ಷ ರೂ. (ಎಕ್ಸ್-ಶೋರೂಮ್ ನವದೆಹಲಿ) ದರ ನಿಗದಿ ಪಡಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾದ ವಾಹನಗಳು ಹಲವು ಶ್ರೇಣಿಗಳಲ್ಲಿ ಲಭಿಸಲಿವೆ.
ಜತೆಗೆ ಹಲವಾರು ಅತ್ಯಾಧುನಿಕ ವಿನ್ಯಾಸಗಳು, ಫೀಚರ್‌ಗಳನ್ನು ಹೊಂದಿವೆ. ಹಬ್ಬರ ಋತುವಿನಲ್ಲಿ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಪ್ರಯತ್ನ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಶೇ.28ರಷ್ಟು ಲಾಭಗಳಿಸಿದ ಟಿಸಿಎಸ್
ದೇಶದ ಅತಿ ದೊಡ್ಡ ಸಾಫ್ಟ್ವೇರ್ ರಫ್ತುದಾರ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), 2021-22ರ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕ ವರದಿಯನ್ನು (ಏಪ್ರಿಲ್‌ನಿಂದ ಜೂನ್‌ವರೆಗೆ) ಪ್ರಕಟಿಸಿದ್ದು ಈ ಅವಧಿಯಲ್ಲಿ ಶೇ. 28.5ರಷ್ಟು ಲಾಭ ಮಾಡಿರು ವುದಾಗಿ ತಿಳಿಸಿದೆ.
ಈ ಅವಧಿಯಲ್ಲಿ ಕಂಪನಿಯು 9,008 ಕೋಟಿ ರೂ.ಗಳಷ್ಟು ಲಾಭ ಮಾಡಿದ್ದು, 2020-21ರ ಮೊದಲ ತ್ತೈಮಾಸಿಕದಲ್ಲಿ ಕಂಪನಿ, 7,008 ಕೋಟಿ ರೂ. ಲಾಭ ಮಾಡಿತ್ತೆಂದು ಹೇಳಿದೆ. ಕೋವಿಡ್ ನಿರ್ಬಂಧಗಳಿಂದಾಗಿ, ವಿವಿಧ ಕಾರ್ಪೊರೇಟ್ ಸಂಸ್ಥೆಗಳು ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನ ಮೊರೆಹೋದ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಸಾಫ್ಟ್ವೇರ್‌ಗಳ ಉತ್ಪಾದನೆಗೆ ಅವಕಾಶ ಸಿಕ್ಕಿದ್ದು ಲಾಭ ಏರಿಕೆಗೆ ಕಾರಣ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.