11 ಎಕರೆಯಲ್ಲಿ 17 ಬೆಳೆ ಬೆಳೆಯುವ ರೈತ
ಬಹುಬೆಳೆ ಪದ್ಧತಿ ಅನುಸರಿಸಿ ಯಶಸ್ವಿ|ಪ್ರತಿವರ್ಷ 9 -10 ಲಕ್ಷ ರೂ.ಆದಾಯ|ಜಾನುವಾರು ಸಾಕಣೆ
Team Udayavani, Jul 9, 2021, 7:57 PM IST
ವರದಿ: ಮಂಜುನಾಥ ಮಹಾಲಿಂಗಪುರ
ಕುಷ್ಟಗಿ: ತಾಲೂಕಿನ ಹಂಚಿನಾಳ ವ್ಯಾಪ್ತಿಯಲ್ಲಿರುವ ರೈತ ದೊಡ್ಡಪ್ಪ ರಸರಡ್ಡಿ ಅವರು 11 ಎಕರೆ ಜಮೀನಿನಲ್ಲಿ ಪ್ರತಿ ವರ್ಷವೂ ಪ್ರತಿ ಹಂಗಾಮಿಗೆ 16ರಿಂದ 17 ಬೆಳೆ ಬೆಳೆಯುತ್ತಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಏಕ ಬೆಳೆಯ ಬದಲಿಗೆ, ಬಹು ಬೆಳೆ ಪದ್ಧತಿಯ ಸಮಗ್ರ ಕೃಷಿ ಪದ್ಧತಿಯನ್ನು ಅಕ್ಷರಶಃ ಅಳವಡಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಹೆಸರು 1 ಎಕರೆ, ಈರುಳ್ಳಿ-2, ಹತ್ತಿ-2, ಗರ್ಕಿನ್ (ಮಿಡಿ ಸವತೆ)-1, ಟೊಮ್ಯಾಟೋ-2, ಬದನೆ-1, ಬೆಂಡೆ-1, ಎಳ್ಳು ಅರ್ಧ ಎಕರೆ ಸೇರಿದಂತೆ ಮೆಣಸಿನಕಾಯಿ, ಉದ್ದು ಇತ್ಯಾದಿ ಬೆಳೆ ಬೆಳೆದಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ, ಗೋಧಿ, ಶೇಂಗಾ, ಅಲಸಂದಿ, ಸೂರ್ಯಕಾಂತಿ ಬೆಳೆಯುತ್ತಿದ್ದಾರೆ. ಒಂದು ಬೆಳೆ ಕೊಯ್ಲು ನಂತರ ಇನ್ನೊಂದು ಬೆಳೆ ನಾಟಿಗೆ ಸಿದ್ಧವಾಗಿರುತ್ತದೆ.
ಇವರ ಹೊಲದಲ್ಲಿ ಇನ್ನೊಂದು ಗಮನಾರ್ಹ ಅಂಶ ಏನೆಂದರೆ ಬೆಳೆಗಳ ಪರಿವರ್ತನೆ ಮಾಡುತ್ತಾರೆ. ಇದರಿಂದ ಇಳುವರಿ ನಿರೀಕ್ಷೆಯಂತೆ ಬರುತ್ತಿದೆ. ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಟೊಮ್ಯಾಟೋ ಉತ್ತಮ ಇಳುವರಿ ಇದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಆದಾಯ ತಂದು ಕೊಡಲಿಲ್ಲ. ಆದರೂ ಧೃತಿಗೆಡದ ರೈತ ಕುಟುಂಬ ಯಾವುದೇ ಕಾರಣಕ್ಕೂ ಜಮೀನು ಖಾಲಿ ಬಿಟ್ಟಿರುವ ಉದಾಹರಣೆ ಇಲ್ಲ. ಈ ನಡುವೆಯೂ ಜಾನುವಾರುಗಳ ಸಾಕಾಣಿಕೆಗೆ ಮೇವು ಸಹ ನಾಟಿ ಮಾಡಿದ್ದಾರೆ. ಪ್ರತಿ ವರ್ಷ ಸರಾಸರಿ 9ರಿಂದ 10 ಲಕ್ಷ ರೂ. ಆದಾಯ ಗಳಿಸುವ ಈ ರೈತ ಮನೆಗೆ ಬೇಕಾದ ಆಹಾರಧಾನ್ಯ, ತರಕಾರಿಯನ್ನೂ ಬೆಳೆಯುತ್ತಾನೆ.
ಎರೆಹುಳು ಗೊಬ್ಬರ: ಕಳೆ, ಕಸ, ಕೊಯ್ಲು ನಂತರದ ತ್ಯಾಜ್ಯ ಸುಡಲ್ಲ. ಅದನ್ನು ಎರೆಹುಳು ಗೊಬ್ಬರಕ್ಕೆ ಬಳಸಲಾಗುತ್ತದೆ. ಕೀಟ ಬಾಧೆ ವಿಪರೀತವಾದಾಗ ಮಾತ್ರ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಕ್ರಿಮಿನಾಶಕ ಸಿಂಪಡಿಸುತ್ತಾರೆ.
ಹಂಚಿಕೊಂಡು ಕೆಲಸ: ಕೂಡಿ ಬಾಳ್ಳೋಣ, ಸೇರಿ ದುಡಿಯೋಣ ಎನ್ನುವ ಮಾತಿಗೆ ದೊಡ್ಡಪ್ಪ ರಸರಡ್ಡಿ ಅವರ ಅವಿಭಕ್ತ ಕುಟುಂಬ ಅನ್ವರ್ಥಕವಾಗಿದೆ. ಇವರ ಕುಟುಂಬ ಕೃಷಿ ಬಗ್ಗೆ ಅಪಾರ ಪ್ರೀತಿ ಹೊಂದಿದೆ. ಕೃಷಿ ಕಾರ್ಮಿಕರ ಸಮಸ್ಯೆ ನೀಗಿಸುವ ಹಿನ್ನೆಲೆಯಲ್ಲಿ ಮೂವರು ಸಹೋದರರು ಅವರ ಪರಿವಾರ ಒಟ್ಟಿಗೆ ವಾಸವಾಗಿದ್ದಾರೆ. ಪರಸ್ಪರ ಕೆಲಸ ಹಂಚಿಕೊಂಡು ನಿರ್ವಹಿಸುತ್ತಿದ್ದಾರೆ. ತಮ್ಮ ಕೃಷಿ ಚಟುವಟಿಕೆಗಳ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಮರೆತಿಲ್ಲ. ಮಾರುಕಟ್ಟೆಗೆ ಕೃಷಿ ಉತ್ಪನ್ನ ಸಾಗಿಸಲು ಟಾಟಾ ಏಸ್ ವಾಹನ, ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್, ರಾಶಿ ಮಾಡಲು ಒಕ್ಕಣಿಕೆ ಯಂತ್ರವಿದ್ದು, ನಾಲ್ಕು ಎತ್ತು, ಹಸು, ಐದಾರು ಕುರಿಗಳನ್ನು ಸಾಕಿಕೊಂಡಿದ್ದಾರೆ. ಜಮೀನಿನ ದಡದಲ್ಲಿ ತೆಂಗು, ನಿಂಬೆ, ಹುಣಸೆ, ಕರಿಬೇವು ಇತ್ಯಾದಿ ಗಿಡಗಳನ್ನೂ ಬೆಳೆಸಿಕೊಂಡಿದ್ದಾರೆ. ಎರಡು ಕೊಳವೆಬಾವಿ ಕೊರೆಯಿಸಿಕೊಂಡಿದ್ದು, ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಸಂಪೂರ್ಣ ನೀರಾವರಿ ಸಾಧ್ಯವಾಗಿಲ್ಲ.
ಹಳ್ಳ ಪಕ್ಕದಲ್ಲಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಜಿನಗು ನೀರು ಹಾಗೂ ಕೊಳವೆಬಾವಿ ನೀರು ತೆರೆದ ಬಾವಿಯಲ್ಲಿ ಸಂಗ್ರಹಿಸಿಕೊಂಡು ಅಗತ್ಯವೆನಿಸಿದಾಗ ಬಳಸಿಕೊಳ್ಳುತ್ತಾರೆ. ಮಳೆ ಅಭಾವವೆನಿಸಿದಾಗ ಸ್ಪಿಂಕ್ಲರ್ (ತುಂತುರು ನೀರಾವರಿ) ಸಾಂದರ್ಭಿಕವಾಗಿ ಬಳಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.