ಇಂಡೋ ಪೆಸಿಫಿಕ್ ಕೈವಶಕ್ಕೆ ಚೀನ ಹುನ್ನಾರ
ಜಗತ್ತಿನ ಅತೀ ದೊಡ್ಡ ಸಮರ ನೌಕೆ ಸಿದ್ಧಪಡಿಸುತ್ತಿರುವ ಡ್ರ್ಯಾಗನ್ ರಾಷ್ಟ್ರ
Team Udayavani, Jul 10, 2021, 7:25 AM IST
ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ ಸಮರ ನೌಕೆಯನ್ನು ಚೀನ ಸಿದ್ಧಪಡಿಸುತ್ತಿದೆ. ವರ್ಷಾಂತ್ಯದೊಳಗೆ ಅದರ ನಿರ್ಮಾಣ ಪೂರ್ಣಗೊಳಿಸುವ ಸಾಧ್ಯತೆಗಳಿವೆ. ದೈತ್ಯ ಯುದ್ಧ ನೌಕೆಗಳ ಮೂಲಕ ಇಂಡೋ ಪೆಸಿಫಿಕ್ ವ್ಯಾಪ್ತಿಯಲ್ಲಿ ಚೀನ ತನ್ನ ಅಧಿಪತ್ಯ ಸಾಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.
ಹೊಸ ಯುದ್ಧ ನೌಕೆಗೆ “003′ ಎಂಬ ಹೆಸರು ಇರಿಸಲಾಗಿದ್ದು, 85 ಸಾವಿರ ಟನ್ ತೂಕ ಇರಲಿದೆ. ಅದರಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಏರ್‌ಕ್ರಾಫ್ಟ್ ಲಾಂಚ್ ಸಿಸ್ಟಮ್ (ಇಎಂಎಎಲ್‌ಎಸ್) ವ್ಯವಸ್ಥೆ ಇರಲಿದೆ. ಇಂಥ ವ್ಯವಸ್ಥೆ ಮೂಲಕ ಬದಲಿ ಇಂಧನ ಬಳಕೆ ಮಾಡಿ ಹಾರಿಸುವ ಯುದ್ಧ ವಿಮಾನವನ್ನೂ ಶತ್ರು ರಾಷ್ಟ್ರಗಳತ್ತ ಹಾರಿಸಲು, ತನ್ನ ವಿರುದ್ಧ ನಿಂತ ರಾಷ್ಟ್ರಗಳ ಮೇಲೆ ನೆಲದಿಂದಷ್ಟೇ ಅಲ್ಲ, ಸಮುದ್ರದಿಂದಲೂ ಆಕ್ರಮಣ ಮಾಡುವ ಅನುಕೂಲ ಚೀನಕ್ಕೆ ಸಿಗಲಿದೆ ಎಂದು ಹೇಳಲಾಗಿದೆ.
“ಸಾವಿರಾರು ಕಿಲೋ ಮೀಟರ್‌ಗಳವರೆಗೆ ಸಾಗಬಲ್ಲದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳು, ದೈತ್ಯ ಯುದ್ಧ ಟ್ಯಾಂಕರ್‌ಗಳು ಹಾಗೂ ಯುದ್ಧ ವಿಮಾನಗಳನ್ನು ಹೊತ್ತೂಯ್ಯ ಬಲ್ಲ ಈ ಸಮರ ನೌಕೆಯು, ಚೀನದ ದೈತ್ಯ ಸಮರ ನೌಕೆ ನಿರ್ಮಾಣ ಯೋಜನೆಯ ಒಂದು ಭಾಗ. ಈ ದಶಕದಾಂತ್ಯಕ್ಕೆ ಲಿಯೊನಿಂಗ್, ಶಾಂಡೊಂಗ್ ಎಂಬ ಹಡಗುಗಳು ಸೇರಿ ಸಾಲು ಸಾಲು ದೈತ್ಯ ಸಮರ ನೌಕೆಗಳು ಇಂಡೊ ಪೆಸಿಫಿಕ್ ಸಮುದ್ರ ತೀರಕ್ಕೆ ಇಳಿಯಲಿವೆ. ಹಾಗಾಗಿ, ಭಾರತ ಎಚ್ಚರದಿಂದ ಇರಬೇಕು’ ಎಂದು ಹೇಳಿದ್ದಾರೆ. ಹೊಸ-ಅತ್ಯಾಧುನಿಕ ಸಮರ ನೌಕೆಗಳ ಮೂಲಕ ತನ್ನ ಅಧಿಪತ್ಯವನ್ನು ಹಿಂದೂ ಮಹಾ ಸಾಗರ ವ್ಯಾಪ್ತಿಯಲ್ಲೂ ವಿಸ್ತರಿಸುವ ಹುನ್ನಾರದಲ್ಲಿದೆ.
ಚೀನದಿಂದಲೂ ಈಗ ಟಿಬೆಟಿಯನ್ ಪಡೆ!
ಎಲ್‌ಎಸಿಯುದ್ದಕ್ಕೂ ಭಾರತದ ವಿರುದ್ಧ ಹೋರಾಡಲು ಚೀನ ಸೇನೆಯು ಟಿಬೆಟಿಯನ್ ಯುವಕರನ್ನು ಬಳಸುವ ಹೊಸ ತಂತ್ರ ಹೂಡಿದೆ. ಎತ್ತರದ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಟಿಬೇಟಿಯನ್ ಪಡೆಗಳಿಗೆ ಚೀನ ಸೇನೆ ತರಬೇತಿ ನೀಡುತ್ತಿದೆ. ಭಾರತದ ವಿಶೇಷ ಮುಂಚೂಣಿ ಪಡೆ ಮಾದರಿಯಲ್ಲೇ ಹೊಸ ಪಡೆಯನ್ನು ಸೃಷ್ಟಿಸುವುದು ಚೀನದ ಉದ್ದೇಶವಾಗಿದೆ. ಭಾರತವು ಈಗಾಗಲೇ ಪರ್ವತ ಶ್ರೇಣಿಗಳಲ್ಲಿ ಯುದ್ಧ ಮಾಡುವ ಛಾತಿ ಹೊಂದಿರುವ ಟಿಬೆಟಿಯನ್ನರನ್ನು ಸೇರಿಸಿ ರಹಸ್ಯವಾದ ವಿಶೇಷ ಪಡೆ (ಎಸ್‌ಎಫ್ಎಫ್)ಯನ್ನು ಸನ್ನದ್ಧಗೊಳಿಸಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಪಾಂಗಾಂಗ್ ತ್ಸೋ ದಕ್ಷಿಣ ತಟದಲ್ಲಿ ಚೀನ ಸೇನೆ ದುಸ್ಸಾಹಸ ತೋರಿದಾಗ, ಅದನ್ನು ಹಿಮ್ಮೆಟ್ಟಿಸುವಲ್ಲಿ ಟಿಬೆಟಿಯನ್ನರನ್ನು ಒಳಗೊಂಡ ಈ ವಿಶೇಷ ಪಡೆಯು ಭಾರತೀಯ ಸೇನೆಗೆ ನೆರವು ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.