ಈಡಿಗ ಸಮಾಜ ಕಡೆಗಣನೆ ಸಲ್ಲ
Team Udayavani, Jul 10, 2021, 10:37 AM IST
ಚಿತ್ರದುರ್ಗ: ಸಣ್ಣ ಸಣ್ಣ ಸಮಾಜಗಳಿಗೆ ನಿಗಮ ಮಂಡಳಿ ಸ್ಥಾಪಿಸಿರುವ ರಾಜ್ಯ ಸರ್ಕಾರ ಈಡಿಗ ಸಮಾಜವನ್ನು ಕಡೆಗಣಿಸುತ್ತಿದೆ. ಇದನ್ನು ವಿರೋಧಿಸಿಜು.25 ರಂದು ಗಂಗಾವತಿಯಲ್ಲಿ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದುರಾಣಿಬೆನ್ನೂರು ತಾಲೂಕು ಅರೆಮಲ್ಲಾಪುರಮಠದ ಡಾ.ಪ್ರಣವಾನಂದ ರಾಮಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಮಾಲೀಕಯ್ಯ ಗುತ್ತೆದಾರ್‌ಗೆ ಯಾವುದೇ ರಾಜಕೀಯ ಸ್ಥಾನಮಾನ ಕೊಟ್ಟಿಲ್ಲ.ಸೇಂದಿ ಇಳಿಸುವುದನ್ನೇ ಕುಲಕಸುಬನ್ನಾಗಿ ಮಾಡಿಕೊಂಡಿದ್ದ ಈಡಿಗ ಸಮಾಜ ಈಗ ಸಂಕಷ್ಟದಲ್ಲಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮುದಾಯದ ಏಳು ಮಂದಿ ಶಾಸಕರಿದ್ದಾರೆ ಎಂದರು.
ಸೇಂದಿ ಮಾರಾಟ ನಿಲ್ಲಿಸಿದ ಮೇಲೆ ಈಚಲುವನವನ್ನು ವಶಕ್ಕೆ ತೆಗೆದುಕೊಂಡಿರುವ ಸರ್ಕಾರ ಈಚಲು ಪ್ರದೇಶವನ್ನು ಈಡಿಗ ಸಮಾಜಕ್ಕೆ ನೀಡಿ ಕೃಷಿ ಮಾಡಿಕೊಂಡುಜೀವಿಸಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಈಡಿಗ ಸಮುದಾಯದ ಶಕ್ತಿ ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂಬಂಧ ಚರ್ಚಿಸಲು ಕರೆಯಲಾಗಿರುವ ಚಿಂತನ ಮಂಥನ ಸಭೆಯಲ್ಲಿ ರಾಜ್ಯಾದ್ಯಂತ ಈಡಿಗ ಜನಾಂಗದ ಐದು ನೂರು ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ. 2ಎ ವರ್ಗದಲ್ಲಿರುವ ಈಡಿಗ ಜನಾಂಗವನ್ನು ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಮಾಲೀಕಯ್ಯ ಗುತ್ತೆದಾರ್‌ರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಿ ಮಂತ್ರಿ ಸ್ಥಾನ ನೀಡಬೇಕು. ಸಮುದಾಯಕ್ಕಾಗಿ ನಿಗಮ ಮಂಡಳಿ ರಚಿಸಬೇಕು. ಮಸ್ಕಿ ಚುನಾವಣೆ ನಂತರ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮಾತು ಕೊಟ್ಟಿದ್ದರು. ಆದರೆ ಈವರೆಗೆ ಯಾವ ಬೇಡಿಕೆಯೂ ಈಡೇರಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಹದಿನೈದು ಜಿಲ್ಲೆಗಳಿಂದ ಈಡಿಗ ಸಮಾಜದ ಪ್ರಮುಖರು ಚಿಂತನ-ಮಂಥನ ಸಭೆಯಲ್ಲಿ ಸೇರಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಸಮುದಾಯದ ಏಳು ಮಂದಿ ಶಾಸಕರಲ್ಲಿ ಐವರು ಹಿರಿಯರಿದ್ದರೂ ಎಲ್ಲೋ ಒಂದು ಕಡೆ ಅವರಿಗೂ ಈಡಿಗ ಜನಾಂಗದ ಬಗ್ಗೆ ಕಾಳಜಿ ಇಲ್ಲವಾಗಿದೆ. ಹೀಗಾಗಿ ಸಮುದಾಯದ ಹಿತದೃಷ್ಟಿಯಿಂದ ಗಂಭೀರ ಚಿಂತನೆಯ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎಚ್.ಜೀವನ್, ಉಪಾಧ್ಯಕ್ಷ ಟಿ.ಸ್ವಾಮಿ, ತಾಲೂಕು ಅಧ್ಯಕ್ಷ ಮಹಾಂತೇಶ್, ಹಿರಿಯೂರು ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಉಮೇಶ್, ಲಕ್ಷ್ಮಿಕಾಂತ್, ರವಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಾಧ್ಯಕ್ಷರಾಗಿ ಬಿವೈವಿ ಅವಧಿ ವಿಸ್ತರಣೆ ಹೇಳಲು ಆಗಲ್ಲ: ಯದುವೀರ ಒಡೆಯರ್
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್