ಕೇರಳಕ್ಕೆ ಝೀಕಾ ವೈರಸ್ ಆತಂಕ
ಜೂ.14ರಂದು ವಿಶ್ವಆರೋಗ್ಯ ಸಂಸ್ಥೆ ಅದನ್ನು ಗುರುತಿಸಿದ್ದು, 25 ದೇಶಗಳಲ್ಲಿ ಪತ್ತೆಯಾಗಿದೆ ಎಂದಿದ್ದಾರೆ.
Team Udayavani, Jul 10, 2021, 8:39 AM IST
ತಿರುವನಂತಪುರ/ನವದೆಹಲಿ: ಕೇರಳದಲ್ಲಿ ಕೋವಿಡ್ ಆತಂಕದ ನಡುವೆಯೇ, ಝೀಕಾ ಸೋಂಕಿನ 14 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, “ದೇವರೊಲಿದ ರಾಜ್ಯ’ದಲ್ಲಿ ಕಟ್ಟೆಚ್ಚರದ ಸ್ಥಿತಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ತಿಳಿಸಿದ್ದಾರೆ.
ಇದೇ ವೇಳೆ, ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮತ್ತು ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, “ಕೇರಳಕ್ಕೆ ಆರೋಗ್ಯ ಪರಿಣತರ ತಂಡವನ್ನು ಕ್ಷಿಪ್ರವಾಗಿ ಕಳುಹಿಸಿ ಪರಿಸ್ಥಿತಿ ಅಧ್ಯಯನ ನಡೆಸಲಾಗುತ್ತದೆ” ಎಂದು ಹೇಳಿದ್ದಾರೆ.
ಗುರುವಾರ ಖಚಿತವಾಗಿದ್ದ 13 ಪ್ರಕರಣಗಳ ಪೈಕಿ ಗರ್ಭಿಣಿಯೊಬ್ಬರು ಸೇರಿದ್ದಾರೆ. ಡೆಂಗ್ಯು ಲಕ್ಷಣಗಳನ್ನೇ ಝೀಕಾ ಸೋಂಕು ಹೊಂದಿದೆ. ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಲ್ಯಾಮ್ಡಾ ರೂಪಾಂತರಿ ಇಲ್ಲ: ದೇಶದಲ್ಲಿ ಕೊರೊನಾದ ಲ್ಯಾಮ್ಡಾ ರೂಪಾಂತರಿ ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ಜೂ.14ರಂದು ವಿಶ್ವಆರೋಗ್ಯ ಸಂಸ್ಥೆ ಅದನ್ನು ಗುರುತಿಸಿದ್ದು, 25 ದೇಶಗಳಲ್ಲಿ ಪತ್ತೆಯಾಗಿದೆ ಎಂದಿದ್ದಾರೆ.
37 ಕೋಟಿ ಡೋಸ್: ದೇಶದಲ್ಲಿ ಶುಕ್ರವಾರ ಸಂಜೆ7ರ ವರೆಗಿನ ಮಾಹಿತಿ ಪ್ರಕಾರ 37 ಕೋಟಿ ಡೋಸ್‌ಗಿಂತ ಅಧಿಕ ಲಸಿಕೆ ನೀಡಲಾಗಿದೆ. ಈ ಪೈಕಿ ಶುಕ್ರವಾರವೇ 27.86 ಲಕ್ಷ ಡೋಸ್ ನೀಡಲಾಗಿದೆ. 18-44 ವಯೋಮಿತಿಯವರಿಗೆ 13,28,636 ಮೊದಲ, 1,24,570 ಡೋಸ್‌ಗಳನ್ನು 2ನೇ ಬಾರಿಗೆ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಲ್ಲಿ 18-44 ವಯೋಮಿತಿಯವರ ಪೈಕಿ 50 ಲಕ್ಷ ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಒಟ್ಟಾರೆಯಾಗಿ ಇದೇ ವಯೋಮಿತಿಯ 10,98,62,585 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಇದೇ ವೇಳೆ, ಮಾಡೆರ್ನಾ
ಕಂಪನಿಯ ಲಸಿಕೆ ಖರೀದಿ ನಿಟ್ಟಿನಲ್ಲಿ ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.