ರೈತರಿಗೆ 20,000 ಕೋಟಿ ರೂ. ಬೆಳೆಸಾಲ ವಿತರಣಾ ಯೋಜನೆ : ಸಿಎಂ
Team Udayavani, Jul 10, 2021, 5:41 PM IST
ಕಲಬುರಗಿ: ರಾಜ್ಯ ಸರ್ಕಾರ ಕೃಷಿಗೆ ಪ್ರಥಮಾದ್ಯತೆ ನೀಡಿದೆಯಲ್ಲದೇ ಪ್ರಸಕ್ತವಾಗಿ ರೈತರಿಗೆ ಇಪ್ಪತ್ತು ಸಾವಿರ ಕೋ.ರೂ ಬೆಳೆಸಾಲ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.
ನಗರದ ಡಾ. ಎಸ್. ಎಂ.ಪಂಡಿತ ರಂಗಮಂದಿರದಲ್ಲಿ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ವತಿಯಿಂದ ರೈತರಿಗೆ 50. ಕೋ ರೂ ಬೆಳೆಸಾಲ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರಿಗೆ ವ್ಯಾಪಕವಾಗಿ ಸ್ಪಂದಿ ಸುವ ನಿಟ್ಟಿನಲ್ಲಿ ಬೆಳೆಸಾಲದ ಜತೆಗೆ ಸ್ವಸಹಾಯ ಸಂಘಗಳಿಗೆ ಜತೆಗೆ ತೋಟಗಾರಿಕೆ ಬೆಳೆಗಳಿಗೂ ಮಧ್ಯಾಮವಧಿ ಸಾಲ ವಿತರಿಸಲು ಮುಂದಾಗಲಾಗಿದೆ. ಕಳೆದ ವರ್ಷ 16641 ಕೋ. ರೂ ಬೆಳೆಸಾಲ ವಿತರಿಸಲಾಗಿತ್ತು. ಈ ಸಲ 32 ಲಕ್ಷ ರೈತರಿಗೆ 20 ಸಾವಿರ ಕೋ.ರೂ ಬೆಳೆಸಾಲ ನೀಡಲು ನಿರ್ಧರಿಸಲಾಗಿದೆ. ಕೃಷಿ, ಶಿಕ್ಷಣ ಹಾಗೂ ಆರೋಗ್ಯ ಸರ್ಕಾರದ ಆದ್ಯತೆ ಗಳಾಗಿವೆ ಎಂದು ಸಿಎಂ ವಿವರಿಸಿದರು.
ರಾಜ್ಯದಲ್ಲಿರುವ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಗಳ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು 198 ಕೋ.ರೂ ಗಣಕೀಕೃತ ಸೇರಿ ಇತರ ಕಾರ್ಯಗಳಿಗೆ ವಿನಿಯೋಗಿಸಲು ಮುಂದಾಗಲಾಗಿದೆ ಎಂದು ತಿಳಿಸಿದರು.
ಸಹಕಾರಿ ಇಲಾಖೆಯಿಂದ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಬಹು ಮುಖ್ಯವಾಗಿ ಪ್ರಸಕ್ತ ವಾಗಿ ರಾಜ್ಯದಾಂತ್ಯ ಉತ್ತಮ ಮಳೆಯಾಗುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಯಡಿಯೂರಪ್ಪ ಹೇಳಿದರು.
ಸಹಕಾರ ಸಚಿವ ಎಸ್. ಟಿ.ಸೋಮಶೇಖರ ಮಾತನಾಡಿ, ಕೊವಿಡ್ ದಿಂದ ಮೃತಪಟ್ಟ ರೈತನ ಲಕ್ಷ ರೂ ಸಾಲಮನ್ನಾ ಮಾಡಲು ಸರ್ಕಾರ ನಿರ್ಧರಿಸಿದ್ದು, ಸಹಕಾರಿ ಸಂಘಗಳ ಲಾಭಾಂಶದಿಂದ ಮನ್ನಾ ಮಾಡಲಾಗುವುದು. ಕಲಬುರಗಿ ಡಿಸಿಸಿ ಬ್ಯಾಂಕ್ ಅರ್ಥಿಕ ಸ್ಥಿತಿ ಹಾಗೂ ನಿರ್ವಹಣೆ ಕಳಪೆ ಯಿಂದ ಕಟ್ಟ ಕಡೆಯ ಸ್ಥಾನದಲ್ಲಿತ್ತು.ಆದರೆ ತಾವು ಕೈಗೊಂಡ ಕ್ರಮಗಳಿಂದ ಹಾಗೂ ಬ್ಯಾಂಕ್ ನ ಅಧ್ಯಕ್ಷ ರಾಗಿ ಶಾಸಕ ರಾಜಕುಮಾರ ಪಾಟೀಲ್ ಅಧ್ಯಕರಾದ ನಂತರ ಬಹಳ ಹಗಲಿರುಳು ಶ್ರಮಿಸಿದ ಪರಿಣಾಮ ಬ್ಯಾಂಕ್ ಅಭಿವೃದ್ಧಿ ಯತ್ತ ಹೆಜ್ಜೆ ಹಾಕಲು ಕಾರಣವಾಯಿತು ಎಂದು ಸಚಿವರು ವಿವರಣೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸೇಂಡ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ಮಾತನಾಡಿ, 197 ಕೋ.ರೂ ನಷ್ಟ ದಲ್ಲಿದ್ದುದ್ದಲ್ಲದೇ ಆರ್ಬಿಐ ಯಿಂದ ಮುಚ್ಚುವಿಕೆಗೆ ಒಳಗಾಗುತ್ತಿದ್ದ ಬ್ಯಾಂಕ್ ಗೆ ತಮ್ಮನ್ನು ಅಧ್ಯಕ್ಷರನ್ನಾಗಿಸಿ 10 ಕೋ.ರೂ ಷೇರು ಕೊಟ್ಟಿದ್ದಲ್ಲದೇ ಅಪೆಕ್ಸ್ ಬ್ಯಾಂಕ್ ದಿಂದ 200 ಕೋ.ರೂ ಸಾಲ ನೀಡಲು ಕ್ರಮ ಕೈಗೊಂಡಿರುವ ಮುಖ್ಯ ಮಂತ್ರಿಗಳಿಗೆ ಹಾಗೂ ಸಹಕಾರಿ ಸಚಿವರಿಗೆ ರೈತರ ಪರವಾಗಿ ಅಭಿನಂದಿಸುವೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ, ಸಂಸದ ಡಾ. ಉಮೇಶ ಜಾಧವ್, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಬಸವರಾಜ ಮತ್ತಿಮಡು, ಶರಣು ಸಲಗರ, ಶಶೀಲ್ ನಮೋಶಿ, ಬಿ.ಜಿ.ಪಾಟೀಲ್, ಸುನೀಲ್ ವಲ್ಲಾಪುರೆ, ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ ಸಜ್ಜನ, ಎಂಡಿ ಚಿದಾನಯ ನಿಂಬಾಳ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.