ಲೋಪ ಸಾಬೀತಾದರೆ ಕ್ರಮ ಎದುರಿಸಲು ಸಿದ್ಧ

Team Udayavani, Jul 11, 2021, 9:24 PM IST

11-11

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಮಾಳಾಪುರ ಗ್ರಾಮದಲ್ಲಿ 47 ಎಕರೆ ಜಮೀನು ಖರೀದಿಯಲ್ಲಿ ಕಾನೂನು ಲೋಪವೆಸಗಿದ್ದೇವೆ ಎಂದು ಸಾಬೀತಾದಲ್ಲಿ ಕಾನೂನಿನಡಿ ಮುಂದಿನ ಕ್ರಮಕ್ಕೆ ನಾವು ಸಿದ್ಧರಿದ್ದೇವೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ಮುಖಂಡ ಸಂತೋಷ್‌ ಎಸ್‌. ಲಾಡ್‌ ಸ್ಪಷ್ಟಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಡೂರು ತಾಲೂಕು ತೋರಣಗಲ್ಲು ಹೋಬಳಿಯ ಮಾಳಾಪುರ ಗ್ರಾಮದ ಸರ್ವೇ ನಂ. 123, 47.63 ಎಕರೆ ಜಮೀನು 1981ರಿಂದ 1996ರ ವರೆಗೆ ಮೂಲ ಪಟ್ಟಾದಾರರಾದ ಮಕಾಶಿ ಹನುಮಗಾರಿ ಹೊನ್ನೂರಪ್ಪ ತಂದೆ ಹನುಮಂತಪ್ಪ ಎನ್ನುವವರ ಹೆಸರಿನಲ್ಲಿತ್ತು. ಪಹಣಿಯಲ್ಲೂ ಅವರ ಹೆಸರು ನಮೂದಾಗಿತ್ತು. ಬಳಿಕ 1996ರಲ್ಲಿ ಈ ಜಮೀನನ್ನು ಪಟ್ಟಾದಾರರಾದ ಮಕಾಶಿ ಹನುಮಗಾರಿ ಹೊನ್ನೂರಪ್ಪ ತಂದೆ ಹನುಮಂತಪ್ಪ ಅವರಿಂದ ನಾವು ಖರೀದಿಸಿದ್ದೇವೆ. ಇದೀಗ ಈ ಜಮೀನು ರೂಪಾ ಯು.ಲಾಡ್‌, ಸಂತೋಷ್‌ ಎಸ್‌.ಲಾಡ್‌, ವಿಜಯ ಲಾಡ್‌, ಅಕ್ಷಯ್‌ಲಾಡ್‌ ಮತ್ತು ನವೀನ್‌ ಲಾಡ್‌ ಅವರ ಹೆಸರಿನಲ್ಲಿದೆ. ಜಮೀನನ್ನು ಕಾನೂನಿನಡಿಯಲ್ಲೇ ಖರೀದಿಸಿದ್ದು, ಯಾವುದೇ ಲೋಪವೆಸಗಿಲ್ಲ ಎಂದವರು ಖಚಿತಪಡಿಸಿದ್ದಾರೆ.

ಜಮೀನನ್ನು 1996ರಲ್ಲಿ ಖರೀದಿಸಿದ ಬಳಿಕ ಅಲ್ಲಿಂದ ಇಲ್ಲಿವರೆಗೆ ಪ್ರತಿವರ್ಷ ತೆರಿಗೆಯನ್ನೂ ಪಾವತಿಸುತ್ತಿದ್ದೇವೆ ಎಂದ ಅವರು, ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಆದ್ಯತೆ ಮೆರೆಗೆ ಮಾಡುತ್ತಿದ್ದೇವೆ. ಕೊಳವೆಬಾವಿಯನ್ನೂ ಕೊರೆಸಿದ್ದೇವೆ. 2000ನೇ ಸಾಲಿನಲ್ಲಿ ಗಣಕೀಕೃತ ಪಹಣಿಯಲ್ಲೂ ನಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಮುಂದುವರೆದಿವೆ. ಆದರೆ, ಕಳೆದ 2012-2013ನೇ ಸಾಲಿನಲ್ಲಿ ಹುಬ್ಬಳ್ಳಿ ನಿವಾಸಿ ಹೊನ್ನೂರಪ್ಪ ಎನ್ನುವವರು ಸಂಡೂರು ನ್ಯಾಯಾಲಯದಲ್ಲಿ ನಮ್ಮ ಮೇಲೆ ಪ್ರಕರಣವನ್ನು ದಾಖಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ 2017 ಆಗಸ್ಟ್‌ 3ರಂದು ನಮ್ಮ ಪರವಾಗಿ ಆದೇಶ ನೀಡಿತು. ನಂತರ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲೂ ಸಲ್ಲಿಸಿದ್ದ ಮೇಲ್ಮನವಿಯನ್ನೂ ವಜಾಗೊಳಿಸಿದೆ. ಎರಡು ನ್ಯಾಯಾಲಯಗಳಲ್ಲೂ ವಿಫಲವಾಗಿರುವ ಹೊನ್ನೂರಪ್ಪ, ಇದೀಗ ನಮ್ಮ ಕುಟುಂಬದ ಸದಸ್ಯರೊಂದಿಗೆ ಸಂಡೂರು ತಹಶೀಲ್ದಾರ್‌ರು, ಜಿಲ್ಲಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಿ ಕೂಡ್ಲಿಗಿ ಹಿರಿಯ ಸಿವಿಲ್‌ ನ್ಯಾಯಾಲಯಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ಹಂತದಲ್ಲಿದೆ ಎಂದವರು ವಿವರಿಸಿದರು.

ದಶಕಗಳಿಂದ ವಾಸ: ಆದರೆ ಕೆಲ ಸ್ವಹಿತಾಸಕ್ತಿಗಳು, ನಮ್ಮ ಕುಟುಂಬದ ರಾಜಕೀಯ ವಿರೋ ಧಿಗಳು, ಮಾಳಾಪುರದ 47.63 ಎಕರೆ ಜಮೀನು ತಮ್ಮದು. ಹಲವು ದಶಕಗಳಿಂದ ಅವರು ಉಳುಮೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಮಾಡಿಸಿಕೊಂಡಿದ್ದಾರೆ ಎಂದೆಲ್ಲ ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಪ್ರತಿಭಟನೆ, ಹೋರಾಟಗಳನ್ನೂ ನಡೆಸಿ ಮಾಧ್ಯಮಗಳಿಗೂ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ನಾನು ಅಲ್ಲೇ ಹುಟ್ಟಿ ಅಲ್ಲೇ ಬೆಳೆದಿದ್ದೇನೆ. ನಮ್ಮ ಕುಟುಂಬ ಸುಮಾರು 100 ವರ್ಷಗಳಿಂದ ಅಲ್ಲೇ ವಾಸವಿದೆ. ಈವರೆಗೂ ಅಲ್ಲಿ ಯಾವುದೇ ಇಂಥ ಆರೋಪಗಳು ಬಂದಿಲ್ಲ. ಇದೀಗ ಕೆಲ ಸ್ವಹಿತಾಸಕ್ತಿಗಳು ಮಾಡುತ್ತಿದ್ದಾರೆ.

ಅದು ಸರ್ಕಾರಿ ಜಮೀನು ಆಗಿದ್ದರೆ ಅಥವಾ ಹೊನ್ನೂರಪ್ಪರ ಜಮೀನನ್ನು ಸರ್ಕಾರ ಪರಭಾರೆ ಮಾಡಿದ್ದರೆ ಈ ಬಗ್ಗೆ ಕಾನೂನಿನ ತೊಡಕಿದ್ದರೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬಹುದು. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದರು. ನಾವೇ ಕೊಡುತ್ತಿದ್ದೇವು: ಈ ರೀತಿ ಇಲ್ಲಸಲ್ಲದ ಆರೋಪ, ಹೋರಾಟ ಮಾಡುವ ಬದಲು ಅವರೇ ನಮ್ಮ ಬಳಿಗೆ ಬಂದು, ನಮಗೆ ಜಮೀನಿಲ್ಲ ಎಂದು ಕೇಳಿದ್ದರೆ ನಾವೇ ಬಿಟ್ಟುಕೊಡುತ್ತಿದ್ದೆವು. ಆದರೆ ಕೆಲವರ ಮಾತುಗಳನ್ನು ಕೇಳಿ ಈ ರೀತಿ ಮಾಧ್ಯಮಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನಮಗೆ ನೋವಾಗಿದೆ. ಈ ವರೆಗೆ ನಮ್ಮ ಬಳಿ ಬಂದು ಅವರು ಕೇಳಿಲ್ಲ. ಅಂಥ ಪರಿಸ್ಥಿತಿ ಬಂದರೆ ಮುಂದೆ ನೋಡೋಣ ಎಂದ ಅವರು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಕುರಿತು ಜಿಲ್ಲಾ ಧಿಕಾರಿಗಳಿಗೆ ಎಲ್ಲ ರೀತಿಯ ಸ್ಪಷ್ಟನೆ ನೀಡಿದ್ದೇನೆ ಎಂದು ತಿಳಿಸಿದರು.

ಈ ವೇಳೆ ಸಂಡೂರು ಶಾಸಕ ಈ. ತುಕಾರಾಂ, ಜಿಲ್ಲಾಧ್ಯಕ್ಷ ಜಿ.ಎಸ್‌. ಮಹ್ಮದ್‌, ಜಿಪಂ ಸದಸ್ಯ ಎ.ಮಾನಯ್ಯ, ಕಾರ್ಯದರ್ಶಿ ಕಾಂತಿನೋಹ ವಿಲ್ಸನ್‌, ಮುಖಂಡ ಪಿ.ಜಗನ್ನಾಥ್‌ ಸೇರಿ ಹಲವರು ಇದ್ದರು.

ಟಾಪ್ ನ್ಯೂಸ್

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.