ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ


Team Udayavani, Jul 11, 2021, 9:48 PM IST

Udayavani Kannada Newspaper

ಬಾಳೆಹೊನ್ನೂರು: ಕಾರ್ಮಿಕ ಇಲಾಖೆಯ ಅ ಧೀನದಲ್ಲಿ ಬರುವ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಅಹಾರ ಧಾನ್ಯ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

ಬಾಳೆಹೊನ್ನೂರಿನ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಬಿ. ಕಣಬೂರು, ಮಾಗುಂಡಿ, ಬನ್ನೂರು ಆಡುವಳ್ಳಿ, ಕರ್ಕೇಶ್ವರ ಗ್ರಾಪಂ ವ್ಯಾಪ್ತಿಯ ಕಟ್ಟಡ ಮತ್ತು ಇತರೆ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು. 2008ರಿಂದ 2015ರ ವರೆಗೆ ಕಟ್ಟಡ ಕಾರ್ಮಿಕರ ವಾರ್ಷಿಕ ನೋಂದಣಿಗೆ 25 ರೂ. ಹಾಗೂ ಮಾಸಿಕ ವಂತಿಗೆ 10 ರೂ.ನಂತೆ ಸಂಗ್ರಹಿಸಿದ್ದು 2015 ರಿಂದ 2020ರ ವರೆಗೆ 50 ರೂ. ವಂತಿಗೆ ವಸೂಲಿ ಮಾಡಲಾಗಿದೆ.

ಮಾಲೀಕರ ಲೇಬರ್‌ ಸೆಸ್‌ ಶೇ.1ರಂತೆ ಸರಕಾರದ ಎಲ್ಲಾ ನಿರ್ಮಾಣ ಕಟ್ಟಡಗಳಿಗೂ ಹಾಗೂ 10 ಲಕ್ಷ ಮೇಲ್ಪಟ್ಟ ಕಟ್ಟಡ ನಿರ್ಮಾಣಕ್ಕೆ ಶೇ. 1 ಸೆಸ್‌ ವಿಧಿಸಿದ್ದು ಈ ಹಣದಿಂದ ಕಾರ್ಮಿಕರಿಗೆ ಅಹಾರ ಕಿಟ್‌ ಗಳನ್ನು ವಿತರಿಸಲಾಗುತ್ತಿದೆ ಎಂದರು.

ಬನ್ನೂರು, ಆಡುವಳ್ಳಿ, ಮಾಗುಂಡಿ, ಕರ್ಕೇಶ್ವರ, ಬಿ. ಕಣಬೂರು ಗ್ರಾಪಂನ ಅಧ್ಯಕ್ಷರು, ಸದಸ್ಯರಿಗೆ ಹಾಗೂ ಪತ್ರಕರ್ತರಿಗೆ ಮಾಹಿತಿ ನೀಡದಿರುವ ಬಗ್ಗೆ ಶಾಸಕರನ್ನು ಪ್ರಶ್ನಿಸಿದಾಗ ಉತ್ತರಿಸಿದ ಅವರು ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ಅವರು ಈ ಬಗ್ಗೆ ಮಾಹಿತಿ ನೀಡಬೇಕಾಗಿದ್ದು, ಅಧಿಕಾರಿಗಳು ನಿರ್ಲಕ್ಷé ವಹಿಸಿದ ಬಗ್ಗೆ ಜಿಪಂ ಸಿಇಒ ಅವರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುವುದೆಂದು ತಿಳಿಸಿದರು.ಹಿರಿಯ ಕಾರ್ಮಿಕ ನಿರೀಕ್ಷಕ ಸುರೇಂದ್ರ ಮಾತನಾಡಿ, ನೋಂದಾಯಿತ ಹೋಬಳಿ ವ್ಯಾಪ್ತಿಯ ಕುಟುಂಬಗಳಿಗೆ 500 ಆಹಾರ ಧಾನ್ಯದ ಕಿಟ್‌ ವಿತರಿಸಲಾಗುವುದೆಂದು ತಿಳಿಸಿದರು.

ಕಾರ್ಯ ನಿರ್ವಾಹಕ ಅಧಿ ಕಾರಿ ಮಹಮ್ಮದ್‌ ಹ್ಯಾರೀಸ್‌, ರಾಘವೇಂದ್ರ, ಅಂಕಿ- ಅಂಶ ತಂತ್ರಜ್ಞ ಶಿವರಾಮ್‌, ಬಿ. ಕಣಬೂರು ಗ್ರಾಪಂ ಅಧ್ಯಕ್ಷೆ ಅಂಬುಜಾ, ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್‌, ಕರ್ಕೇಶ್ವರ ಗ್ರಾಪಂ ರಾಜೇಶ್‌ ಕೇಶವತ್ತಿ, ಬನ್ನೂರು ಗ್ರಾಪಂ ಅಧ್ಯಕ್ಷೆ ಮಧುರಾ, ಉಪಾಧ್ಯಕ್ಷ ಗೋಪಾಲ, ಮಾಗುಂಡಿ ಗ್ರಾಪಂ ಅಧ್ಯಕ್ಷೆ ಪ್ರಮಿಳಾ ಸಿಲ್ವಿಯಾ ಸೆರಾವೋ, ಆಡುವಳ್ಳಿ ಗ್ರಾಪಂ ಅಧ್ಯಕ್ಷ ಪ್ರದೀಪ, ಉಪಾಧ್ಯಕ್ಷೆ ಪ್ರತಿಮಾ, ಪ್ರಭಾಕರ್‌ ಪ್ರಣಸ್ವಿ, ಎಂ.ಎಸ್‌. ಅರುಣೇಶ್‌, ಇಬ್ರಾಹಿಂ ಶಾμ ಇತರರು ಇದ್ದರು.

ಟಾಪ್ ನ್ಯೂಸ್

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudigere: 30 ಅಡಿ ಎತ್ತರದಿಂದ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Mudigere: 30 ಅಡಿ ಎತ್ತರದಿಂದ ಪಂಚಾಯತ್ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.