ಕೆಂಪೇಗೌಡರ ಶಾಶ್ವತ ಸ್ಮರಣೆಗೆ ಕ್ರಿಯಾಯೋಜನೆ
ಮಾಗಡಿ ಸರ್ಕ್ನೂಟ್‌ಗೆ ಪಾರಂಪರಿಕ ಸ್ಥಳಗಳ ಗುರುತು! ಕೆಂಪಾಪುರದಲ್ಲಿ ಐಕ್ಯ ಸ್ಥಳ ಸೇರಿದಂತೆ ಪಾರಂಪರಿಕ ಸ್ಥಳ ಪ್ರಗತಿ
Team Udayavani, Jul 12, 2021, 1:37 PM IST
ಬಿ.ವಿ.ಸೂರ್ಯ ಪ್ರಕಾಶ್
ರಾಮನಗರ: ಬೆಂಗಳೂರು ನಗರ ನಿರ್ಮಾತೃ ನಾಡ ಪ್ರಭು ಕೆಂಪೇಗೌಡರು ಐಕ್ಯವಾದ ಸ್ಥಳದ ಅಭಿವೃದ್ಧಿ ಜೊತೆಗೆ ಕೆಂಪೇಗೌಡರ ಸರ್ಕ್ನೂಟ್‌ನಲ್ಲಿ ಮಾಗಡಿ ತಾಲೂಕಿನ 10 ಪಾರಂಪರಿಕ ಸ್ಥಳಗಳನ್ನು 132 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ.
ಕಳೆದ ಜೂನ್ 27ರಂದು ನಡೆದ ಕೆಂಪೇಗೌಡರ 512ನೇ ಜಯಂತಿ ವೇಳೆ ಡಿಸಿಎಂ ಡಾ.ಸಿ.ಎನ್.ಅಶ್ವಥ ನಾರಾಯಣ, ಕೆಂಪೇಗೌಡರ ಆಳ್ವಿಕೆಯಲ್ಲಿದ್ದ ಪಾರಂಪ ರಿಕ ಸ್ಥಳಗಳು, ಕೆರೆ, ಕಟ್ಟೆಗಳು, ಕೋಟೆಗಳು ಇತ್ಯಾದಿ ಯನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದರು.
ಇತ್ತೀಚೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷ ತೆಯಲ್ಲಿ ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇ ಗೌಡಪಾರಂಪರಿಕಅಭಿವೃದ್ಧಿಪ್ರಾಧಿಕಾರದ ಸಭೆಯಲ್ಲಿ ಕೆಂಪೇಗೌಡರ ಆಳ್ವಿಕೆಯಲ್ಲಿ ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಗಳಲ್ಲಿರುವ ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಚರ್ಚೆಯಾಗಿದೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿ: ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರು ಐಕ್ಯ ರಾದ ಸ್ಥಳವನ್ನು ರಕ್ಷಿಸಿ, ಪ್ರವಾಸಿ ತಾಣವಾಗಿ ಅಭಿ ವೃದ್ಧಿಪಡಿಸುವುದರ ಜೊತೆಗೆ ಸರ್ಕಾರ ಕೆಂಪೇಗೌಡರ ಆಳ್ವಿಕೆಯಲ್ಲಿದ್ದ ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಪಡಿ ಸಲು ನಿರ್ಧರಿಸಿದೆ. ನಾಡಪ್ರಭು ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಈ ಯೋಜನೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದ್ದು, ರೂಪು ರೇಷೆ ಸಿದ್ಧಪಡಿಸಿಕೊಂಡಿದೆ. ಮಾಗಡಿ ಸರ್ಕ್ನೂಟ್, ಬೆಂಗಳೂರು ನಗರ ಸರ್ಕ್ನೂಟ್ ಮತ್ತು ನಂದಿ ಸರ್ಕ್ನೂಟ್ ಎಂದು ಮೂರು ಸರ್ಕ್ನೂಟ್ ಗಳನ್ನು ಗುರುತಿಸಿರುವ ಸರ್ಕಾರ, ಈ ಸರ್ಕ್ನೂಟ್‌ಗಳ ವ್ಯಾಪ್ತಿಗೆ ಬರುವ ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
132 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ: ಜಿಲ್ಲೆಯ ಮಾಗಡಿ ಸರ್ಕ್ನೂಟ್‌ನಲ್ಲಿ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರ ವೀರ ಸಮಾಧಿ ಸ್ಥಳದ ಅಭಿ ವೃದ್ಧಿ ಜೊತೆಗೆ ದೊಡ್ಡಮುದಗೆರೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಕೆಂಪಸಾಗರ ಕೆರೆ, ಮಾಗಡಿ ಕೋಟೆ, ತಿರುಮಲೆ ರಂಗನಾಥಸ್ವಾಮಿ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಮತ್ತು ಕಲ್ಯಾಣಿ, ಸಾವನ ದುರ್ಗ ಕೋಟಿ ಮತ್ತು ಶಿವ ದೇವಾಲಯ, ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ಗಡಿಯಲ್ಲಿರುವ ಕುಣಿಗಲ್ ದೊಡ್ಡ ಕೆರೆ, ಶಿವ ಬಸವ ದೇವಸ್ಥಾನ, ಹುತ್ತಿ ದುರ್ಗ ಕೋಟಿ ಮತ್ತು ದೇವಸ್ಥಾನಗಳನ್ನು ಸುಮಾರು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿ ವೃದ್ಧಿಪಡಿಸಿಲು ಸರ್ಕಾರ ಉದ್ದೇಶಿಸಿದೆ. ಹಿರಿಯ ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ ಬಿಬಿಎಂಪಿ 11ಕೋಟಿ ರೂ. ಮೀಸಲಿಟ್ಟಿದೆ. ಕೆಂಪಾಪುರ ಗ್ರಾಮ ಸ್ಥಳಾಂತರ: 2015ರಲ್ಲಿ ಹಿರಿಯ ಕೆಂಪೇಗೌಡರ ಸಮಾಧಿ ಸ್ಥಳವನ್ನು ಕೆಂಪಾಪುರದಲ್ಲಿ ಪತ್ತೆಯಾದ ನಂತರ ಸರ್ಕಾರ ಸದರಿ ಸ್ಥಳವನ್ನು ಅಭಿ ವೃದ್ಧಿಗೆ ನಿರ್ಧರಿಸಿತ್ತು. ಸಮಾಧಿ ಸ್ಥಳವನ್ನು ಪಾರಂಪ ರಿಕ ಸ್ಥಳವನ್ನಾಗಿ ಮತ್ತು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶ ಸರ್ಕಾರ ಹೊಂದಿದ್ದು, ಕೆಂಪಾ ಪುರ ಗ್ರಾಮವನ್ನೇ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಸಿ ಸಿದೆ. 5 ಕಿ.ಮಿ. ದೂರದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಕೆಂಪಾಪುರ ಗ್ರಾಮಸ್ಥರಿಗೆ ಮನೆ ಕಟ್ಟಿಕೊ ಳ್ಳಲು ನಿವೇಶನಗಳನ್ನು ಕೊಡಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ನಂದಿ, ಬೆಂಗಳೂರು ನಗರ ಸರ್ಕ್ನೂಟ್‌ನ ಸ್ಥಳಗಳು: ನಂದಿ ಸರ್ಕ್ನೂಟ್‌ನಲ್ಲಿ ಕೆಂದಾವರ ಕೆರೆ, ನಂದಿ ಬೆಟ್ಟ, ನಂದಿ ಬೆಟ್ಟದ ಗೋಪುರ, ದೇವನಹಳ್ಳಿ ಫಾರೆಸ್ಟ್, ದೇವ ನಹಳ್ಳಿ ಕೋಟೆ, ಶ್ರೀಚನ್ನಕೇಶವ ದೇವಸ್ಥಾನವನ್ನು (ಅವತಿ) ಅಭಿವೃದ್ಧಿಗೆ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತ ರದ ಕೆಂಪೇಗೌಡರ ಪ್ರತಿಮೆ ಮತ್ತು ವಿಮಾನ ನಿಲ್ದಾ ಣಕ್ಕೆ ಸೇರಿದ23 ಎಕರೆ ಪ್ರದೇಶದಲ್ಲಿ ಸೆಂಟ್ರಲ್ ಥೀಮ್ ಪಾರ್ಕನ್ನು ನಿರ್ಮಿಸಲು ಸರ್ಕಾರ ಅಂದಾಜು 64 ಕೋಟಿ ರೂ. ವೆಚ್ಚ ಮಾಡಲಿದೆ. ಬೆಂಗಳೂರು ನಗರ ಸರ್ಕ್ನೂಟ್‌ನಲ್ಲಿಕೆಂಪೇಗೌಡರ ವೀಕ್ಷಣಾ ಗೋಪುರ (ಮೇಖೀ ವೃತ್ತ), ಅಣ್ಣಮ್ಮ ದೇವ ಸ್ಥಾನ, ಸೋಮೇಶ್ವರ ದೇವಾಸ್ಥಾನ, ಹಲಸೂರು ಗೋಪುರ, ಬೆಂಗಳೂರು ಕೋಟೆ, ಕೋಟೆ ವೆಂಕಟರ ಮಣ ದೇವಸ್ಥಾನ, ಶ್ರೀ ಧರ್ಮರಾಯ ಸ್ವಾಮಿ ದೇವ ಸ್ಥಾನ, ಕೆಂಪೇಗೌಡರ ಪ್ರತಿಮೆ ವೃತ್ತ, ಕೆಂಪಾಂಬುದಿ ಕೆರೆ, ಶ್ರೀಗವಿ ಗಂಗಾಧರೇಶ್ವರ ದೇವಸ್ಥಾನ, ಶ್ರೀಬಂಡಿ ಮಹಾ ಕಾಳಿ ದೇವಸ್ಥಾನ ವೀರಭದ್ರಸ್ವಾಮಿ ದೇವಸ್ಥಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.