ಅಫ್ಘನ್ ಗೆ ಅಮೆರಿಕದ ಪ್ರಮುಖ ಕಮಾಂಡರ್ ವಿದಾಯ : ಅಧಿಕಾರ ಹಸ್ತಾಂತರಿಸಿದ ಜ.ಸ್ಕಾಟ್ ಮಿಲ್ಲರ್
Team Udayavani, Jul 12, 2021, 7:50 PM IST
ಕಾಬೂಲ್: ಅಫ್ಘಾನಿಸ್ತಾನದ ಶೇ.80ಕ್ಕೂ ಹೆಚ್ಚು ಭಾಗವನ್ನು ತಾಲಿಬಾನ್ ಕೈವಶ ಮಾಡುತ್ತಿರುವಂತೆಯೇ, ಕಾಬೂಲ್ ನಲ್ಲಿರುವ ಅಮೆರಿಕದ ಪ್ರಮುಖ ಕಮಾಂಡರ್ ತಮ್ಮ ಕಮಾಂಡ್ ಅನ್ನು ಹಸ್ತಾಂತರ ಮಾಡಿದ್ದಾರೆ.
ಕಾಬೂಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಜನರಲ್ ಸ್ಕಾಟ್ ಮಿಲ್ಲರ್ ಅವರು ಮೆರೈನ್ ಜನರಲ್ ಫ್ರಾಂಕ್ ಮ್ಯಾಕೆನೈಜ್(ಅಮೆರಿಕ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ) ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ತನ್ನ 20 ವರ್ಷಗಳ ಸೇನಾ ಅಸ್ತಿತ್ವಕ್ಕೆ ಅಮೆರಿಕ ಕೊನೆಹಾಡುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಆಗಸ್ಟ್ 31ರವರೆಗೆ ಅಂದರೆ ಅಮೆರಿಕ ಸೇನೆ ಸಂಪೂರ್ಣವಾಗಿ ವಾಪಸಾಗುವವರೆಗೆ ಮ್ಯಾಕೆನೈಜ್ ಅವರು ಫ್ಲೋರಿಡಾದಲ್ಲಿ ಇದ್ದು ಕೊಂಡೇ ಸೆಂಟ್ರಲ್ ಕಮಾಂಡ್ ಪ್ರಧಾನ ಕಚೇರಿಯನ್ನು ನಿರ್ವಹಿಸಲಿದ್ದಾರೆ.
ಇದನ್ನೂ ಓದಿ : ದೆಮ್‌ಚುಕ್‌ನಲ್ಲಿ ದಲೈಲಾಮಾ ಬರ್ತ್‌ಡೇಗೆ ಚೀನಾ ಯೋಧರ ತಕರಾರು
ನಿಗಾ ಇರಿಸಿದ್ದೇವೆ:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇದೊಂದು ಕಳವಳಕಾರಿ ಸಂಗತಿ. ಅಮೆರಿಕ ಸುಮ್ಮನೆ ಕುಳಿತಿಲ್ಲ. ಅಫ್ಘನ್ ಸೇನೆಯೊಂದಿಗೆ ಕೈಜೋಡಿಸಿಕೊಂಡು, ತಮ್ಮ ಸಾಮರ್ಥ್ಯವನ್ನು ಬಳಕೆ ಮಾಡುವಂತೆ ಉತ್ತೇಜನ ನೀಡುತ್ತಿದ್ದೇವೆ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಅಫ್ಘಾನಿಸ್ತಾನವು ಅತ್ಯಂತ ಸಮರ್ಥ ವಾಯುಪಡೆ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳುಳ್ಳ ವಿಶೇಷ ಪಡೆಗಳನ್ನು ಹೊಂದಿದೆ. ಅವುಗಳನ್ನು ತಾಲಿಬಾನ್ ವಿರುದ್ಧ ಬಳಸುವ ಮೂಲಕ ದೇಶವನ್ನು ರಕ್ಷಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.