ಲೋಕಸಭೆ ಕಾಂಗ್ರೆಸ್ ನಾಯಕ ಸ್ಥಾನಕ್ಕೆ ಪೈಪೋಟಿ : ರೇಸ್ ನಲ್ಲಿ ಶಶಿತರೂರ್, ಮನೀಶ್ ತಿವಾರಿ
Team Udayavani, Jul 12, 2021, 10:57 PM IST
ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿಯನ್ನು ಆ ಹೊಣೆಗಾರಿಕೆಯಿಂದ ತೆರವುಗೊಳಿಸಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಇದೇ ತಿಂಗಳ 19ರಿಂದ ಸಂಸತ್ ಅಧಿವೇಶನ ಶುರುವಾಗಲಿದ್ದು, ಅದಕ್ಕೂ ಮುನ್ನವೇ ಕಾಂಗ್ರೆಸ್, ಆ ಸ್ಥಾನಕ್ಕೆ ಮತ್ತೂಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ. ಇದು ಪಕ್ಷದ ಹಿರಿಯ ನಾಯಕರಲ್ಲಿ ತೀವ್ರ ಸ್ಪರ್ಧೆಗೆ ಆಸ್ಪದ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಚೌಧರಿ ಸ್ಥಾನಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ ನೇಮಕವಾಗುವುದಿಲ್ಲ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿರುವುದೇ ಸ್ಪರ್ಧೆ ಏರ್ಪಡಲು ಕಾರಣ. ಅದರಲ್ಲೂ, ಕಳೆದ ವರ್ಷ ಪಕ್ಷದ ನಾಯಕತ್ವ ಬದಲಾವಣೆಗಾಗಿ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ 23 ಕಾಂಗ್ರೆಸ್ ನಾಯಕರಲ್ಲಿ (ಜಿ-23), ಈ ಸ್ಥಾನಕ್ಕಾಗಿ ತುರುಸಿನ ಸ್ಪರ್ಧೆ ಆರಂಭವಾಗಿದೆ. ಇದರಲ್ಲಿ ಶಶಿ ತರೂರ್, ಮನೀಶ್ ತಿವಾರಿ ಮುಂಚೂಣಿಯಲ್ಲಿದ್ದಾರೆ. ಇವರೊಂದಿಗೆ, ಜಿ-23 ತಂಡದಲ್ಲಿ ಗುರುತಿಸಿಕೊಳ್ಳದ ಗೌರವ್ ಗೊಗೊಯ್, ರಣವೀತ್ ಸಿಂಗ್ ಬಿಟ್ಟೂ, ಉತ್ತಮ್ ಕುಮಾರ್ ರೆಡ್ಡಿಯವರೂ ಈ ಪದವಿಯ ಆಕಾಂಕ್ಷಿಗಳಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ : ಕರ್ನಾಟಕ V/S ತಮಿಳುನಾಡು : ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡಿನ 13 ಪಕ್ಷಗಳು ಒಗ್ಗಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.