ರಾಜವಂಶಸ್ಥರ ಸಂಬಂಧಿ ಹೆಸರಲ್ಲಿ ವಂಚನೆ
ಮೂವರು ಯುವತಿಯರಿಗೆ 42 ಲಕ್ಷ ರೂ. ವಂಚನೆ! ಮೈಕ್ರೋಸಾಫ್ಟ್ ಎಂಜಿನಿಯರ್ ಎಂದು ನಂಬಿಸಿದ್ದ
Team Udayavani, Jul 13, 2021, 1:59 PM IST
ಬೆಂಗಳೂರು: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಎಂಜಿನಿಯರ್, ಮೈಸೂರು ರಾಜವಂಶಸ್ಥರ ಸಂಬಂಧಿ ಎಂದು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ತೆರೆದು ಪರಿಚಯಸ್ಥ ಯುವತಿಯರಿಗೆ ಸ್ಪಾನಿಷ್, ಅಮೆರಿಕನ್ ಇಂಗ್ಲಿಷ್‌ನಲ್ಲಿ ಮಾತನಾಡಿ ಯುವತಿಯರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಮೈಸೂರು ಮೂಲದ ಖತರ್ನಾಕ್ ವಂಚಕ ವೈಟ್‌ಫೀಲ್ಡ್ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟೌನ್‌ನ ಲಕ್ಷ್ಮೀಪುರ ನಿವಾಸಿ ಕೆ.ಸಿದ್ದಾರ್ಥ್ ಅಲಿಯಾಸ್ ಸಿದ್ದಾರ್ಥ್ ಅರಸ್, ಅಲಿ ಯಾಸ್ ಸ್ಯಾಂಡಿ ಅಲಿಯಾಸ್ ವಿನಯ್ ಅಲಿಯಾಸ್ ಮುತ ¤(33) ಬಂಧಿತ. ಆತನಿಂದ ಮೂರು ಐ-ಫೋ ನ್‌ಗಳು, ಆರು ಬ್ಯಾಂಕ್‌ಗಳ ಡೆಬಿಟ್‌ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ವೈಟ್‌ಫೀಲ್ಡ್, ಈಶಾನ್ಯ ಮತ್ತು ದಕ್ಷಿಣ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೂವರು ಯುವತಿಯರಿಗ ೆ ಮದುವೆಯಾಗುವುದಾಗಿ ನಂಬಿಸಿ, ಅವರಿಂದ ವೈದ್ಯಕೀಯ, ವೈಯಕ್ತಿಕ ಕಾರಣಗಳ ನ್ನು ನೀಡಿ ಬರೋಬರಿ 42 ಲಕ್ಷ ರೂ. ವಂಚಿಸಿದ್ದಾನೆ. ಸುಮಾರು ಎರಡು ವರ್ಷಗ ಳಿಂದ ಕೃತ್ಯ ಎಸಗುತ್ತಿರುವ ಆರೋಪಿ ಇನ್ನಷ್ಟು ಮಹಿಳೆಯರು, ಯುವತಿಯರಿಗೆ ವಂಚಿಸುತ್ತಿರುವ ಮಾಹಿತಿ ಸಿಕ್ಕಿದ್ದು, ಸೆನ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಗುರು ಪ್ರಸಾದ್, ಪಿಎಸ್‌ಐ ನವೀನ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಡಿ. ದೇವರಾಜ್ ತಿಳಿಸಿದರು.
ಬೈಲಕುಪ್ಪೆಯ ಲಕ್ಷ್ಮೀಪುರದ ಟೆಷಿಲಂ ಮುನಷ್ಟ್ರೀ ಟೆಂಪಲ್‌ನ ಟಿಬೆಟಿಯನ್ ಕ್ಯಾಂಪ್ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ, ಮಗನ ಜತೆ ವಾಸವಾಗಿ ರುವ ಆರೋಪಿ, ಏಳನೇ ತರಗತಿ ಫೇಲ್ ಆಗಿದ್ದು, ಟೂರಿಸ್ಟ್ ಗೈಡ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಮೈಸೂರು, ಟಿಬೆಟಿಯನ್ ಕ್ಯಾಂಪ್‌ನ ಪ್ರವಾಸಿ ತಾಣ ಗಳಿಗೆ ಬರುವ ವಿದೇಶಿಯರು, ನೆರೆ ರಾಜ್ಯಗಳ ಜನರ ಪ್ರೋತ್ಸಾಹ ಹಾಗೂ ಯುಟ್ಯೂಬ್ ಚಾಲನ್‌ಗಳ ಮೂಲಕ ಸ್ಪ್ಯಾನಿಷ್, ಯುಎಸ್ ಇಂಗ್ಲಿಷ್, ತಮಿಳು, ಕೂರ್ಗ್, ಮಲೆಯಾಳಂ, ಟಿಬಿಟಿಯನ್ ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.
ವಂಚನೆಗಾಗಿ ಯುಟ್ಯೂಬ್ ಶೋಧ: ವಂಚನೆಯ ಬಗ್ಗೆ ತಿಳಿಯಲು ಯುಟ್ಯೂಬ್‌ನಲ್ಲಿ “ನೈಜಿರಿಯಾ ಫ್ರಾರ್ಡ್ ಹಾಗೂ ಇತರೆ ವಂಚನೆ’ಗಳ ಬಗ್ಗೆ ಶೋಧಿಸಿ ದ್ದಾನೆ. ಈ ವೇಳೆ ಇಂಟರ್‌ನ್ಯಾಷನಲ್ ಸಿಮ್‌ಕಾರ್ಡ್ ಖರೀದಿ, ನೆಟ್‌ವರ್ಕ್ ಹೇಗೆ ಪಡೆಯಬೇಕೆಂದೆಲ್ಲ ತಿಳಿದುಕೊಂಡಿದ್ದಾನೆ. ಬಳಿಕ ತಾನೂ ಗೈಡ್ ಆಗಿ ಗಳಿ ಸಿದ ಹಣದಲ್ಲಿ ಐ-ಫೋನ್‌ಗಳು, ಇಂಟರ್‌ನ್ಯಾಷನಲ್ ಸಿಮ್‌ಕಾರ್ಡ್‌ಗಳನ್ನು ಖರೀದಿಸಿದ್ದಾನೆ ಎಂದು ಪೊಲೀ ಸರು ಮಾಹಿತಿ ನೀಡಿದರು.
ರಾಜಮನೆತನ ಹೆಸರು ದುರ್ಬಳಕೆ: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಎಂಜಿನಿಯರ್ ಆಗಿ ಕೆಲಸ ಮಾಡು ತ್ತಿದ್ದು, ತಾನೂ ಮೈಸೂರು ರಾಜವಂಶಸ್ಥರ ಸಂಬಂಧಿ “ಸಿದ್ಧಾರ್ಥ್ ಅರಸ್’ ಹಾಗೂ “ಸ್ಯಾಂಡಿ, ವಿನಯ್’ ಎಂಬ ಹೆಸರಿನಲ್ಲಿ ಕನ್ನಡ, ಸಂಗಮ್ ಮ್ಯಾಟ್ರಿಮೋನಿ ಯಲ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿದ್ದಾನೆ.
ವೆಬ್‌ಸೈ ಟ್‌ನಲ್ಲಿ ಆಯ್ದ ಯುವತಿಯರಿಗೆ ರಿಕ್ವೆಸ್ಟ್ ಕಳುಹಿಸಿ, ಮದುವೆಯಾಗುವುದಾಗಿ ನಂಬಿಸುತ್ತಿದ್ದ. ಬಳಿಕ ಮೈಸೂರು ರಾಜವಂಶಸ್ಥರ ಸಂಬಂಧಿ ಎಂದು ನಂಬಿ ಸಲು, ಗೂಗಲ್‌ನಲ್ಲಿ ರಾಜವಂಸ್ಥ ಕುಟುಂಬದವರ ಫೋಟೋಗಳನ್ನು ಡೌನ್‌ಲೋಡ್ ಮಾಡಿ, ಅವರ ಜತೆ ಬಾಲ್ಯ ಕಳೆದಿರುವ ಹಾಗೇ ಚಿಕ್ಕವಯಸ್ಸಿನ ಹುಡುಗನ ಫೋಟೋಗಳನ್ನು ಯುವತಿಯರಿಗೆ ಪ್ರತ್ಯೇಕವಾಗಿ ಕಳುಹಿಸಿ ನಂಬಿಸುತ್ತಿದ್ದ. ನಂತರ ಅವರೊಂದಿಗೆ ವಾಟ್ಸ್ ಆ್ಯಪ್ ಹಾಗೂ ಇಂಟರ್‌ನ್ಯಾಷನಲ್ ಕಾಲ್ ಮಾಡಿ, ತಾನೂ ಅಮೆರಿಕಾದಿಂದ ಮಾತನಾಡುತ್ತಿದ್ದೇನೆ ಎಂದು ಅವರೊಂದಿಗೆ ಸ್ಪಾನಿಷ್, ಯುಎಸ್ ಇಂಗ್ಲಿಷ್‌ನಲ್ಲಿ ಮಾತನಾಡಿ ನಂಬಿಸುತ್ತಿದ್ದ. ಕೆಲ ದಿನಗಳ ಬಳಿಕ ವೈದ್ಯಕೀಯ ಕಾರಣ ಮತ್ತು ವೈಯಕ್ತಿಕ ಕಾರಣಗಳನ್ನು ನೀಡಿ ತುರ್ತು ಹಣ ಬೇಕಾ ಗಿದೆ, ಅಮೆರಿಕಾದಿಂದ ಬಂದ ಬಳಿಕ ಕೊಡುವುದಾಗಿ ನಂಬಿಸಿ ತನ್ನ ಹಾಗೂ ತನ್ನ ಸ್ನೇಹಿತರ ಖಾತೆಗಳಿಗೆ (ಯಾವುದೋ ಹಣ ಬರುತ್ತದೆ ಎಂದು ಸ್ನೇಹಿತರಿಗೆ ಸುಳ್ಳು ಹೇಳಿ)ಹಂತ-ಹಂತವಾಗಿ ಹಣ ಹಾಕಿಸಿಕೊಳ್ಳು ತ್ತಿದ್ದ. ಬಳಿಕ ಯುವತಿಯರ ನಂಬರ್ ಬ್ಲ್ಯಾಕ್ ಮಾಡು ತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.