![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 13, 2021, 6:54 PM IST
ಸುರತ್ಕಲ್ : ಇಲ್ಲಿನ ನಿವಾಸಿ ಲಕ್ಷ್ಮಣ ಮೂಲ್ಯ ಎಂಬವರ ಮನೆಗೆ ನುಗ್ಗಿದ ಕಳ್ಳರು 14 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.
ಹೆಚ್ ಪಿ ಸಿ ಎಲ್ ಕಂಪನಿಯಲ್ಲಿ ಪ್ಲಾಂಟ್ ಅವರೇಟರ್ ಆಗಿ ಕೆಲಸ ದಲ್ಲಿರುವ ಲಕ್ಷ್ಮಣ ಮೂಲ್ಯ ಹಾಗೂ ಮನೆಯವರು ದಿನಾಂಕ 10-07-2021 ರಂದು ಸಂಜೆ ಸುಮಾರು 04-30 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿಕೊಂಡು ಬಂಟಾಳದಲ್ಲಿರುವ ನನ್ನ ಅತ್ತೆ ಮನೆಗೆ ಹೋಗಿದ್ದರು.
ದಿನಾಂಕ 11-07-2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ವಾಪಸ್ ಬಂದಾಗ ಯಾರೋ ಕಳ್ಳರು ನಮ್ಮ ಮನೆಯ ಮುಖ್ಯ ದ್ವಾರವನ್ನು ಬಲವಂತವಾಗಿ ಒಡೆದು ಒಳ ಪ್ರವೇಶಿಸಿ ನಮ್ಮ ಮನೆಯ ಮಾಸ್ಟರ್ ಬೆಡ್ ರೂಮಿನಲ್ಲಿದ್ದ 3 ಕಪಾಟುಗಳನ್ನು ಬಲವಂತವಾಗಿ ಒಡೆದು ಜಾಲಾಡಿ ಕಪಾಟಿನಲ್ಲಿರಿಸಿದ ಸುಮಾರು 40 ಗ್ರಾಮ್ ತೂಕದ ಚಿನ್ನದ ಕರಿಮಣಿ ಸರ, ಸುಮಾರು 44 ಗ್ರಾಮ್ ತೂಕದ ಚಿನ್ನದ ಚೈನ್, ಸುಮಾರು 44 ಗ್ರಾಮ್ ತೂಕದ ಚಿನ್ನದ ಹವಳದ ಸರ, ಸುಮಾರು 22 ಗ್ರಾಮ್ಸ್ ತೂಕದ ಚಿನ್ನದ ಮುತ್ತಿನ ಸರ, ಸುಮಾರು 28 ಗ್ರಾಮ್ ತೂಕದ ಚಿನ್ನದ ನೆಸ್ಸೆಸ್, ಸುಮಾರು 14 ಗ್ರಾಮ್ಸ್ ತೂಕದ ಪೆಂಡೆಂಟ್ ಇರುವ ಚಿನ್ನದ ಸರ, ಸುಮಾರು 104 ಗ್ರಾಮ್ಸ್ ತೂಕದ 4 ಜೊತೆ ಚಿನ್ನದ ಬಳೆ, ಸುಮಾರು 12 ಗ್ರಾಮ್ ತೂಕದ 1 ಜೊತೆ ಚಿನ್ನದ ಹ್ಯಾಂಗಿಂಗ್ ಕಿವಿಓಲೆ ,ಅಂದಾಜು ಸುಮಾರು 24 ಗ್ರಾಮ್ಸ್ ತೂಕದ 6 ಚಿನ್ನದ ಉಂಗುರ ಕಳವು ಮಾಡಿದ್ದಾರೆ.
ಕಳ್ಳತನ ಮಾಡಲು ಪಿಕ್ಕಾಸು ಬಳಸಿ ಮನೆಯ ಬಾಗಿಲು ಪುಡಿಗೈದಿದ್ದಾರೆ. ಮತ್ತು ಮನೆಯ ಮುಖ್ಯ ದ್ವಾರದ ಮುಂದುಗಡೆ ಸುರಕ್ಷತೆಯ ಹಿತದೃಷ್ಟಿಯಿಂದ ಅಳವಡಿಸಿದ ಸ್ಟೀಲ್ ಬಾಗಿಲಿನ ಬೀಗವನ್ನು ಅಂಗಳದಲ್ಲಿ ಎಸೆದು ಹೋಗಿದ್ದಾರೆ.
ಕಳವಾದ ಸುಮಾರು 288 ಗ್ರಾಮ್ಸ್ ತೂಕದ ಒಡವೆಗಳ ಅಂದಾಜು ಮೌಲ್ಯ ಸುಮಾರು 14,00,000/- ರೂಪಾಯಿಗಳಷ್ಟು ಆಗಿದೆ. ಇದೇ ಸಂದರ್ಭ ಸಮೀಪವೇ ಇರುವ ಇನ್ನೊಂದು ಮನೆಗೂ ಕಳ್ಳರು ಕನ್ನ ಹಾಕಿದ್ದು ಈ ಮನೆಯ ಮಾಲಕರು ಇನ್ಬಷ್ಟೇ ದೂರು ನೀಡಬೇಕಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಲಾಭ ಪಡೆದುಕೊಂಡು ಕಳ್ಳತನಕ್ಕಿಳಿದಿದ್ದಾರೆ.
ಮಳೆಗೆ ಹೆಜ್ಜೆ ಗುರುತು ಸಹಿತ ಪುರಾವೆ ಉಳಿಯದು ಎಂದು ಬುದ್ದಿವಂತಿಕೆಯಿಂದ ಕಳ್ಳತನ ಮಾಡಲಾಗಿದೆ.ಸುರತ್ಕಲ್ ಪರಿಸರದಲ್ಲಿ ಸರಣಿ ಕಳ್ಳತನ ಸ್ಥಳೀಯರ ನಿದ್ದೆಗೆಡಿಸಿದೆ.
You seem to have an Ad Blocker on.
To continue reading, please turn it off or whitelist Udayavani.