ಒಲಿಂಪಿಕ್ಸ್ ತಾರೆಯರ ಜತೆ ಮೋದಿ ಕುಶಲ : ಆ್ಯತ್ಲೀಟ್‌ಗಳಿಗೆ ಧೈರ್ಯ ತುಂಬಿದ ಪ್ರಧಾನಿ
Team Udayavani, Jul 14, 2021, 7:25 AM IST
ಹೊಸದಿಲ್ಲಿ : ಟೋಕಿಯೊಗೆ ಹೊರಟಿರುವ ದೇಶದ ಪ್ರಮುಖ ಆ್ಯತ್ಲೀಟ್‌ಗಳೊಂದಿಗೆ ಪ್ರಧಾನಿ ಮೋದಿ ಮಂಗಳವಾರ ಆತ್ಮೀಯ ಮಾತುಕತೆ ನಡೆಸಿದ್ದಾರೆ. ಜನರ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಬಗ್ಗೆ ಗಮನಹರಿಸಿ ಎಂದು ಧೈರ್ಯ ತುಂಬಿದ್ದಾರೆ.
ಮೋದಿ ಹೇಳಿದ್ದು
ನಿಮ್ಮನ್ನೆಲ್ಲ ಮುಖತಃ ಭೇಟಿಯಾಗುವ ಇಚ್ಛೆಯಿದೆ. ಟೋಕಿಯೊ ದಿಂದ ವಾಪಸ್ ಬಂದ ಮೇಲೆ ಖಂಡಿತ ನಿಮ್ಮೊಂದಿಗೆ ಸಮಯ ಕಳೆಯುತ್ತೇನೆ. ದೇಶ ನಿಮ್ಮ ಯಶಸ್ಸಿಗಾಗಿ ತುಡಿಯುತ್ತಿರುವುದನ್ನು ಕಂಡು ಸಂತಸವಾಗಿದೆ. ದೇಶದ ಭಾವನೆಗಳು ನಿಮ್ಮೊಂದಿಗಿವೆ.
ಕ್ರೀಡಾಪಟುಗಳು ಹೇಳಿದ್ದು
ದೀಪಿಕಾ ಕುಮಾರಿ, ವಿಶ್ವ ನಂ.1 ಬಿಲ್ಗಾರ್ತಿ
ನನ್ನ ಕ್ರೀಡಾಜೀವನ ಆರಂಭ ದಿಂದಲೂ ಉತ್ತಮವಾಗಿತ್ತು. ಮೊದಲು ಬಿದಿರಿನ ಬಿಲ್ಲು ಬಳಸುತ್ತಿದ್ದೆ. ನಮ್ಮಿಂದ ಇತರರು ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಅಭ್ಯಾಸದ ಮೇಲೆ ಬಹಳ ಗಮನ ಹರಿಸಿದ್ದೇನೆ. ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಿದೆ.
**
ಪಿ.ವಿ. ಸಿಂಧು, ಪ್ರಖ್ಯಾತ ಬ್ಯಾಡ್ಮಿಂಟನ್ ಪಟು
ಅಭ್ಯಾಸ ಚೆನ್ನಾಗಿ ಸಾಗಿದೆ. ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಅಂಕಣ ಗಳಿವೆ. ಅದಕ್ಕಾಗಿ ದೊಡ್ಡ ಅಂಕಣಗಳಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಆ್ಯತ್ಲೀಟ್‌ಗಳು ಕಠಿನ ಆಹಾರ ಪದ್ಧತಿ ಪಾಲಿಸ ಬೇಕಾಗುತ್ತದೆ. ಐಸ್‌ಕ್ರೀಮ್ ತಿನ್ನುವು ದನ್ನು ನಿಗ್ರಹಿಸಿದ್ದೇನೆ.
**
ಸಾಜನ್ ಪ್ರಕಾಶ್, ಖ್ಯಾತ ಈಜುಪಟು
ನನ್ನ ತಾಯಿ ಶಾಂತಿಮೋಳ್ ನನಗೆ ಎಲ್ಲ ಒತ್ತಡಗಳನ್ನು ಮೀರಿ ಬದುಕಲು ಕಲಿಸಿದರು. ಕೊರೊನಾದಿಂದ 18 ತಿಂಗಳು ಈಜುಕೊಳ ತೆರೆದಿರಲಿಲ್ಲ. ಇದು ಬಹಳ ಹತಾಶೆಗೊಳಪಡಿಸಿತ್ತು. ಆದರೆ ಎಲ್ಲರ ಬೆಂಬಲದಿಂದ ಸಂಕಟ ಗಳನ್ನು ಮೀರಿ ನಿಲ್ಲಲು ಸಾಧ್ಯವಾಗಿದೆ.
**
ಮೇರಿ ಕೋಮ್, ವಿಶ್ವಶ್ರೇಷ್ಠ ಮಹಿಳಾ ಬಾಕ್ಸರ್
ನನಗೆ ಬಾಕ್ಸರ್‌ಗಳಲ್ಲಿ ಅಮೆರಿಕದ ದಂತಕಥೆ ಮೊಹಮ್ಮದ್ ಅಲಿ ಬಹಳ ಇಷ್ಟ. ಅವರಿಂದ ನಾನು ಬಹಳ ಪ್ರೇರಣೆ ಪಡೆದಿದ್ದೇನೆ. ನಾನು ಸ್ಪರ್ಧಿಸುವಾಗ ಹುಕ್ ಶಾಟ್‌ಗಳನ್ನು ಉತ್ತಮವಾಗಿ ಪ್ರಯೋಗಿಸುತ್ತೇನೆ. ಅದು ನನಗೆ ಇಷ್ಟದ ಹೊಡೆತ.
**
ಸಾನಿಯಾ ಮಿರ್ಜಾ, ದೇಶದ ಶ್ರೇಷ್ಠ ಟೆನಿಸ್ ಆಟಗಾರ್ತಿ
ನಾನು 25 ವರ್ಷಗಳ ಹಿಂದೆ ಟೆನಿಸ್ ಆಟ ಆರಂಭಿಸಿದಾಗ ದೇಶದಲ್ಲಿ ಅನೇಕರು ಟೆನಿಸನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಒಲಿಂಪಿಕ್ಸ್ ನಲ್ಲಿ ಅಂಕಿತಾ ರೈನಾ ನನ್ನ ಜತೆಗಾರ್ತಿ. ಉತ್ತಮ ಫಲಿತಾಂಶ ತರುವ ಭರವಸೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.