ಪರಿಶಿಷ್ಟರ ಕಲ್ಯಾಣಕ್ಕೆ ವಿಶೇಷ ಅನುದಾನ


Team Udayavani, Jul 14, 2021, 9:09 PM IST

f್ದ್ದಸ್ಸಅದಸಅ್ದಸದಅ್ದ

ವಾಡಿ: ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಅಂಗವಿಕಲರು, ಪೌರಕಾರ್ಮಿಕರು, ಪರಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ ಈ ಬಾರಿ ಪುರಸಭೆ ಆಡಳಿತ ವಿಶೇಷ ಅನುದಾನ ಕಾಯ್ದಿರಿಸಿದೆ.

ಕುಡಿಯುವ ನೀರು ಸರಬರಾಜು ಮತ್ತು ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಇನ್ನಿತರ ಅವಶ್ಯಕ ಪ್ರಗತಿದಾಯಕ ಕಾರ್ಯಗಳಿಗಾಗಿ 2021-22ನೇ ಸಾಲಿನ ಎಸ್‌ ಎಫ್‌ಸಿ, 15ನೇ ಹಣಕಾಸು ಯೋಜನೆಯಡಿ ಒಟ್ಟು 3.49 ಕೋಟಿ ರೂ. ಮೀಸಲಿಟ್ಟು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಪುರಸಭೆಯಲ್ಲಿ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳಲ್ಲಿ ಅಂಗವಿಕಲರಿಗೆ ಪ್ರೋತ್ಸಾಹ ಧನ, ಪೌರಕಾರ್ಮಿಕರಿಗೆ ಸೌಲಭ್ಯ ಮತ್ತು ಉಪಹಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವೈಯಕ್ತಿಕ ಶೌಚಾಲಯ ನಿರ್ಮಾಣ, ವಿಧವೆಯರಿಗೆ ಹೊಲಿಗೆ ಯಂತ್ರ, ಎಸ್‌ಟಿ ಸಮುದಾಯದ ಸ್ಮಶಾನ ಅಭಿವೃದ್ಧಿ, ಹಿಂದುಳಿದ ವರ್ಗದವರಿಗೆ ಶವ ಪೆಟ್ಟಿಗೆ, ಆರೋಗ್ಯ ಸಹಾಯಧನ, ವೈಕುಂಠ ರಥ ಖರೀದಿ, ಬಡ ಕುಟುಂಬದವರ ಶವ ಸಂಸ್ಕಾರಕ್ಕೆ 5000ರೂ. ಸಹಾಯ ಧನ, ಅಂಗವಿಕಲ ಫಲಾನುಭವಿಗಳಿಗೆ ಜೀವವಿಮೆ, ಬಸವೇಶ್ವರ ಪ್ರತಿಮೆ ಬಳಿ ವಚನ ಫಲಕ ಹೀಗೆ ವಿವಿಧ ಫಲಾನುಭವಿಗಳಿಗೆ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ.

ಕುಡಿಯುವ ನೀರು ನಿರ್ವಹಣೆ ಮತ್ತು ಘನತ್ಯಾಜ್ಯ ವಿಲೇವಾರಿಗಾಗಿ 151.80 ಲಕ್ಷ ರೂ. ಹಾಗೂ ಇತರ ಅತ್ಯಗತ್ಯ ಕಾರ್ಯಗಳಿಗಾಗಿ 101.20 ಲಕ್ಷ ರೂ. ತೆಗೆದಿಡಲಾಗಿದೆ. ಸರ್ಕಾರದ ಆದೇಶದಂತೆ ಪ್ರಸಕ್ತ ಸಾಲಿನಿಂದ ಕಟ್ಟಡ ಪರವಾನಗಿ ಶುಲ್ಕ ಪರಿಷ್ಕರಿಸಲಾಗಿದೆ. ಪ್ರತಿ ಚದರ ಅಡಿ ನಿವೇಶನಕ್ಕೆ ವಾಸಕ್ಕಾಗಿ 03ರೂ., ವಾಣಿಜ್ಯಕ್ಕಾಗಿ 06ರೂ., ಕೈಗಾರಿಕೆಗಾಗಿ 10ರೂ. ಹೆಚ್ಚಿಸಿ ದರ ನಿಗದಿಪಡಿಸಲಾಗಿದೆ ಎಂದು ಅ ಧಿಕಾರಿಗಳು ಸ್ಪಷ್ಟಪಡಿಸಿದರು. ಇದಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಪುರಸಭೆ ಕಾಂಗ್ರೆಸ್‌ ಆಡಳಿತದ ವಿರುದ್ಧ ಟೀಕಾಪ್ರಹಾರ ನಡೆಸಿದ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಭೀಮಶಾ ಜಿರೊಳ್ಳಿ, ಪುರಸಭೆ ವ್ಯಾಪ್ತಿಯಲ್ಲಿ ಬೃಹತ್‌ ನೀರು ಶುದ್ಧೀಕರಣ ಘಟಕವಿದ್ದರೂ ಜನರಿಗೆ ಶುದ್ಧ ನೀರು ಸರಬರಾಜು ಆಗುತ್ತಿಲ್ಲ. ನದಿಯಲ್ಲಿ ನೀರಿದ್ದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಬಡಾವಣೆಗಳಿಗೆ ನೀರು ಬಿಡುವ ನಿರ್ದಿಷ್ಟ ಸಮಯ ಪ್ರಕಟಿಸಿಲ್ಲ. ಕಲುಷಿತ ನೀರು ಕುಡಿದು ಜನರು ಕಾಯಿಲೆಗಳಿಂದ ನರಳುತ್ತಿದ್ದಾರೆ. ಆಡಳಿತದ ಲೋಪದಿಂದಾಗಿ ಬಡ ಕುಟುಂಬಗಳು ಖಾಲಿ ಕೊಡಗಳನ್ನು ಹಿಡಿದು ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಬೀದಿ ದೀಪಗಳ ನಿರ್ವಹಣೆಯಾಗದ ಕಾರಣ ನಗರದ ರಸ್ತೆಗಳು ಕತ್ತಲಲ್ಲಿ ಮುಳುಗಿವೆ. ವಿದ್ಯುತ್‌ ಪರಿವರ್ತಕಗಳು ಪದೇಪದೆ ಸುಡುತ್ತಿರುವುದರಿಂದ ಜನರು ಕರೆಂಟ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಚರಂಡಿಗಳು ಗಬ್ಬೆದ್ದ ಕಾರಣ ಸೊಳ್ಳೆ ಕಾಟ ಹೆಚ್ಚಾಗಿದೆ. ಬಿದ್ದ ಚರಂಡಿಗಳು ಐದಾರು ವರ್ಷ ಕಳೆದರೂ ದುರಸ್ತಿಯಾಗಿಲ್ಲ.

ಜನರ ಸಮಸ್ಯೆಗಳಿಗೆ ಪುರಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಸಮುದಾಯ ಸಂಘಟಕ ಕಾಶೀನಾಥ ಧನ್ನಿ, ನೋಡಲ್‌ ಅಭಿಯಂತರ ಮನೋಜಕುಮಾರ ಹಿರೋಳಿ ಕ್ರಿಯಾಯೋಜನೆ ಪಟ್ಟಿ ಓದಿದರು. ಮುಖ್ಯಾ ಧಿಕಾರಿ ಚಿದಾನಂದ ಸ್ವಾಮಿ, ಪುರಸಭೆ ಜೆಇ ಅಶೋಕ ಪುಟ್‌ಪಾಕ್‌, ಶಾಂತರೆಡ್ಡಿ ದಂಡಗುಲಕರ, ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಕಂದಾಯ ಅ ಧಿಕಾರಿ ಎ.ಪಂಕಜಾ, ಸದಸ್ಯರಾದ ಶರಣು ನಾಟೇಕರ, ದೇವೀಂದ್ರ ಕರದಳ್ಳಿ, ಮೈನಾಬಾಯಿ ರಾಠೊಡ, ಗುಜ್ಜಾಬಾಯಿ ಸಿಂಗೆ, ಅನಿತಾ ರಾಠೊಡ, ಅಫÕರಾಬೇಗಂ ರಾಜಾಪಟೇಲ, ಮಲ್ಲಯ್ಯ ಗುತ್ತೇದಾರ, ಮಹ್ಮದ್‌ ಗೌಸ್‌, ಭೀಮರಾಯ ಸುಬೇದಾರ, ಪೃಥ್ವಿರಾಜ ಸೂರ್ಯವಂಶಿ, ಮರಗಪ್ಪ ಕಲಕುಟಗಿ ಸಭೆಯಲ್ಲಿ ಪಾಲ್ಗೊಂಡು ವಾಡ್‌ ìಗಳ ಸಮಸ್ಯೆ ಮುಂದಿಟ್ಟರು. ಸಭೆಗೂ ಮುಂಚೆ ಕೊರೊನಾ ಸೋಂಕಿನಿಂದ ಮೃತಪಟ್ಟ ಪುರಸಭೆ ಉಪಾಧ್ಯಕ್ಷ ಕಾಂಗ್ರೆಸ್‌ನ ತಿಮ್ಮಯ್ಯ ಪವಾರ, ಬಿಜೆಪಿ ಸದಸ್ಯ ಪ್ರಕಾಶ ನಾಯಕ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

 

ಟಾಪ್ ನ್ಯೂಸ್

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

virat-sachin-Dhoni

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

Panth–Iyer

IPL Auction: 27 ಕೋ. ರೂ. ಒಡೆಯ ರಿಷಭ್‌ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

1

Udupi: ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.