ಗಾಜಿನಮನೆಗೆ ಸಂಗೀತ ಕಾರಂಜಿ ಮೆರುಗು

Team Udayavani, Jul 14, 2021, 9:04 PM IST

14-11

„ರಾ. ರವಿಬಾಬು

ದಾವಣಗೆರೆ: ವಿಶ್ವವಿಖ್ಯಾತ ಮಂಡ್ಯದ ಕೆ.ಆರ್‌.ಎಸ್‌. ಬೃಂದಾನವನದಲ್ಲಿ ಜನಮನಸೂರೆಗೊಳ್ಳುವ ಸಂಗೀತ ಕಾರಂಜಿ ಇದೆ. ಆ ಸಂಗೀತ ಕಾರಂಜಿಗಿಂತಲೂ ವಿಶಿಷ್ಟ ಮತ್ತು ವಿಭಿನ್ನವಾಗಿರುವ ಸಂಗೀತ ಕಾರಂಜಿ, ಇನ್ನು ಮುಂದೆ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿರುವ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಗಾಜಿನಮನೆ ಆವರಣದಲ್ಲಿ ಕಾಣಸಿಗಲಿದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಸಂಗೀತ ಕಾರಂಜಿ ಹಾಗೂ ಅತಿ ವಿಶಿಷ್ಟವಾದ ಲೇಸರ್‌ ಷೋ ಪ್ರದರ್ಶನವನ್ನು ಇನ್ನು ಮೂರು ತಿಂಗಳಲ್ಲಿ ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು. ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಗಾಜಿನಮನೆ ಆವರಣದಲ್ಲಿ ಸಂಗೀತ ಕಾರಂಜಿ ತಲೆ ಎತ್ತಲಿದೆ. ಜು. 14 ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ನಗರಾಭಿವೃದ್ಧಿ ಇಲಾಖೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಸಂಗೀತ ಕಾರಂಜಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಡಾ| ಶಾಮನೂರು ಶಿವಶಂಕರಪ್ಪ ಇತರರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಲೇಸರ್‌ ಷೋ ಪ್ರದರ್ಶನ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ. ಕಳೆದ ಎರಡು ವರ್ಷದಿಂದ ದಾವಣಗೆರೆಯ ಪ್ರಮುಖ ಆಕರ್ಷಣೀಯ ಕೇಂದ್ರವಾಗಿರುವ ಗಾಜಿಮನೆಯ ಆವರಣದಲ್ಲಿ 20 ಗುಂಟೆ ಜಾಗದಲ್ಲಿ ಸಂಗೀತ ಕಾರಂಜಿ ತಲೆ ಎತ್ತಲಿದೆ. ಕೆಆರ್‌ಎಸ್‌ನ ಬೃಂದಾವನ ದಲ್ಲಿರುವ ಸಂಗೀತ ಕಾರಂಜಿಗಿಂತಲೂ ವಿಭಿನ್ನ ಮತ್ತು ವಿಶೇಷವಾಗಿರಲಿದೆ ಇಲ್ಲಿನ ಸಂಗೀತ ಕಾರಂಜಿ. ಸಂಗೀತ ಕಾರಂಜಿ ಆಗುವುದರಿಂದ ಗಾಜಿನಮನೆ ಇನ್ನೂ ಹೆಚ್ಚು ಅತ್ಯಾಕರ್ಷಕವಾಗಲಿದೆ.

ಸಾರ್ವಜನಿಕರ ಅಚ್ಚುಮೆಚ್ಚಿನ ತಾಣವಾಗಲಿದೆ. ಮುಂದಿನ ದಿನಗಳಲ್ಲಿ ಜನಾಕರ್ಷಣೆಯ ಪ್ರವಾಸಿ ತಾಣವಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಬೆಂಗಳೂರಿನ ಬಿ.ಎನ್‌.ಎ. ಟೆಕ್ನಾಲಜಿ ಕನ್ಸಲ್ಟಿಂಗ್‌ ಕಂಪನಿ ಸಂಗೀತ ಕಾರಂಜಿ ನಿರ್ಮಾಣದ ಗುತ್ತಿಗೆ ಪಡೆದಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದ ವೇಳೆಗೆ ಸಂಗೀತ ಕಾರಂಜಿ ಲೋಕಾರ್ಪಣೆ ಆಗಲಿದೆ.

ಲೇಸರ್‌ ಷೋ: ಸಂಗೀತ ಕಾರಂಜಿ ಜೊತೆಗೆ ಗಾಜಿನಮನೆಯಲ್ಲಿ ಲೇಸರ್‌ ಷೋ ಪ್ರದರ್ಶನಕ್ಕೂ ಸಿದ್ಧತೆ ನಡೆದಿದೆ. ಲೇಸರ್‌ ಷೋ ಮೂಲಕ ಕನ್ನಡನಾಡಿನ ವಿಶೇಷತೆಯನ್ನು ಕಟ್ಟಿಕೊಡಲಾಗುವುದು. ಲೇಸರ್‌ ಷೋನಲ್ಲಿ ಕರ್ನಾಟಕದ ಕಾಡುಗಳು, ಬೆಣ್ಣೆನಗರಿ ದಾವಣಗೆರೆ ಒಳಗೊಂಡಂತೆ 10 ಥೀಮ್‌ (ಕಥೆ) ಪ್ರದರ್ಶನದ ವ್ಯವಸ್ಥೆ ಮಾಡಲಾಗುತ್ತದೆ.

ಎಲ್ಲವೂ ಅಂದುಕೊಂಡತೆ ಆದಲ್ಲಿ ಕನ್ನಡ ರಾಜ್ಯೋತ್ಸವದ ವೇಳೆಗೆ ದಾವಣಗೆರೆ ಮತ್ತು ಸುತ್ತಮುತ್ತಲಿನ ಜನರು ಸಂಗೀತ ಕಾರಂಜಿಯ ಜೊತೆಗೆ ಲೇಸರ್‌ ಷೋ ಪ್ರದರ್ಶನದ ಸವಿಯನ್ನು ಸವಿಯಬಹುದು.

ಟಾಪ್ ನ್ಯೂಸ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.