ಸೈಬರ್ ಅಟ್ಯಾಕ್: 21 ದಿನಗಳ ಕಾಲ ನಾಸಾದ ಚಟುವಟಿಕೆ ಸ್ಥಗಿತಗೊಳಿಸಿದ್ದ 15 ವರ್ಷದ ಬಾಲಕ!

ಇದೇ ನಾಸಾ ಸಂಸ್ಥೆಯ ಕಂಪ್ಯೂಟರ್ ಗಳನ್ನು 1999ರಲ್ಲಿ ಕೇವಲ 15 ವರ್ಷದ ಬಾಲಕ ಹ್ಯಾಕ್ ಮಾಡಿದ್ದ.

Team Udayavani, Jul 15, 2021, 11:33 AM IST

jonathan

ಹ್ಯಾಕಿಂಗ್…ಈ ಒಂದು ಪದವನ್ನು ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕೇಳಿಯೇ ಇರುತ್ತೀರಿ..ಇಂದು ಸೈಬರ್ ಅಪರಾಧಗಳು ಎಗ್ಗಿಲ್ಲದೆ ನಡೆಯುತ್ತಿದೆ. ಪ್ರಪಂಚದ ನಾನಾ ಕಡೆ ಒಂದಿಲ್ಲೊಂದು ವಂಚನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತದೆ. ಬ್ಯಾಂಕುಗಳು ಎಷ್ಟೇ ಮುನ್ನೆಚ್ಚರಿಕೆ ನೀಡಿದರೂ ಅನಾಮಿಕ ಕರೆಗಳು ಬಂದಾಕ್ಷಣ ಎಟಿಎಂ ಪಾಸ್ ವರ್ಡ್ ನೀಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡವರು ನಮ್ಮ ನಡುವೆ ಇದ್ದಾರೆ.‌ ಸ್ಮಾರ್ಟ್ ಫೋನ್ ಬಳಸುವಾಗ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿದಿದ್ದರೂ ಪಾಸ್ ವರ್ಡ್ ಗಳನ್ನು 1234, abcd ಎಂದು ಸೆಟ್ ಮಾಡುವ ಜನರೇ ನಮ್ಮ ನಡುವೆ ಅಧಿಕವಿದ್ದಾರೆ. ಎರಡು ಹಂತದ ದೃಢೀಕರಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವವರ ಪ್ರಮಾಣ ಬಹಳ ಕಡಿಮೆಯಿದೆ.

ಇಂದು ಹ್ಯಾಕಿಂಗ್ ಎಂಬುದು ಸರ್ವೇಸಾಮಾನ್ಯವಾದರೂ 90ರ ದಶಕದಲ್ಲಿಯೇ ಜಗತ್ತಿನಲ್ಲಿ ಹ್ಯಾಕರ್ ಗಳು ಸಕ್ರಿಯರಾಗಿದ್ದರು ಎಂಬುದು ಕಟು ಸತ್ಯ. ಕೇವಲ 15 ವರ್ಷದ ಬಾಲಕ 21 ದಿನಗಳ ಕಾಲ ನಾಸಾದ ಕಾರ್ಯಚಟುವಟಿಕೆಗಳು ಸ್ಥಗಿತಗೊಳ್ಳಲು ಕಾರಣನಾಗಿದ್ದ ಎಂಬುದು ತಿಳಿದಿದೆಯೇ ? ಹೌದು, ಮುಂದೆ ಓದಿ ಅಮೆರಿಕಾದ ಪ್ರಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ NASA (National Aeronautics and Space Administration) ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರುತ್ತಾರೆ. 1958ರಲ್ಲಿ ಸ್ಥಾಪನೆಗೊಂಡ ಇದು ಅಮೆರಿಕಾ ದೇಶದ ಅಂತರಿಕ್ಷಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವ ಹೊಣೆ ಹೊತ್ತಿದೆ.

ಇದೇ ನಾಸಾ ಸಂಸ್ಥೆಯ ಕಂಪ್ಯೂಟರ್ ಗಳನ್ನು 1999ರಲ್ಲಿ ಕೇವಲ 15 ವರ್ಷದ ಬಾಲಕ ಹ್ಯಾಕ್ ಮಾಡಿದ್ದ. ಮಾತ್ರವಲ್ಲದೆ 21 ದಿನಗಳ ಕಾಲ ನಾಸಾದ ಕಾರ್ಯಚಟುವಟಿಕೆ ನಿಲ್ಲಲು ಕಾರಣೀಭೂತನಾಗಿದ್ದ. ಹಾಗಾದರೆ ಏನಿದು ಪ್ರಕರಣ ? ಜೊನಾಥನ್ ಜೋಸೆಫ್ ಜೇಮ್ಸ್ ಎಂಬ ಬಾಲಕ 15 ವರ್ಷದವನಿದ್ದಾಗ ಅಮೆರಿಕಾದ ರಕ್ಷಣಾ ಸಚಿವಾಲಯ ಮತ್ತು ನಾಸಾದ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿದ್ದ. ಈತ ಸೈಬರ್ ಕ್ರೈಮ್ ನಡಿಯಲ್ಲಿ ಶಿಕ್ಷೆಗೆ ಒಳಗಾದ ಪ್ರಥಮ ಬಾಲಾಪರಾಧಿ ಎಂಬ ಕುಖ್ಯಾತಿಗೂ ಪಾತ್ರನಾಗಿದ್ದಾನೆ.1999ರ ಆಗಸ್ಟ್ 23 ರಿಂದ 1999 ಅಕ್ಟೋಬರ್ 27 ರವರೆಗೆ ಜೋನಾಥನ್ ಹಲವಾರು ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದ. ಮಾತ್ರವಲ್ಲದೆ ‘ಕಾಮ್ರೇಡ್’ ಎಂಬ ಹೆಸರಿನಲ್ಲಿ ಅನ್ ಲೈನ್ ಚಟುವಟಿಕೆಗಳನ್ನು ನಡೆಸುತ್ತಿದ್ದ. ಮೊದಮೊದಲಿಗೆ ಟೆಲಿಕಮ್ಯುನಿಕೇಶನ್ ದೈತ್ಯ ಕಂಪೆನಿಗಳಲ್ಲಿ ಒಂದಾದ ಬೆಲ್ ಸೌಥ‍್ ಮತ್ತು ಮಯಾಮಿಯ ಡೇಡ್ ಸ್ಕೂಲ್ ಸಿಸ್ಟಂ ಗಳಿಗೆ ಕನ್ನ ಹಾಕುತ್ತಾನೆ. ಆದರೇ ಇದು ಯಾರ ಗಮನಕ್ಕೂ ಬರುವುದಿಲ್ಲ.

ನಂತರದಲ್ಲಿ ರಕ್ಷಣಾ ಬೆದರಿಕೆಯನ್ನು ತಡೆಗಟ್ಟುವ ಸಂಸ್ಥೆ(DTRA) ಹಾಗೂ ನ್ಯೂಕ್ಲಿಯರ್, ಬಯಾಲಾಜಿಕಲ್, ಕೆಮಿಕಲ್, ವಿಶೇಷ ಆಯುಧಗಳ ಮಾಹಿತಿಯನ್ನು ಕ್ರೋಢಿಕರಿಸುವ ಅಮೆರಿಕಾದ ರಕ್ಷಣಾ ಸಚಿವಾಲಯದ ಕಂಪ್ಯೂಟರ್ ಗೆ ಲಗ್ಗೆಯಿಡುತ್ತಾನೆ. ವರ್ಜಿನಿಯಾ ಮತ್ತು ಡಲ್ಲಾಸ್ ಗಳಲ್ಲಿನ ಕಂಪ್ಯೂಟರ್ ಗಳಿಗೆ ಬ್ಯಾಕ್ ಡೋರ್ ಎಂಬ ಸರ್ವರ್ ಅಳವಡಿಸುತ್ತಾನೆ. ಆ ಮೂಲಕ DTRA ಸಿಬ್ಬಂದಿಗಳ 3300 ಇಮೇಲ್ ಹಾಗೂ 19 ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಗಳನ್ನು ಎಗರಿಸುತ್ತಾನೆ.

ಅಂದು ಸರ್ಕಾರ ‘ಸರ್ಕಾರಿ ಕಚೇರಿಗಳಲ್ಲಿನ’ ಕಂಪ್ಯೂಟರ್ ಗಳಿಗೆ ಹೆಚ್ಚಿನ ಭದ್ರತೆ ಆಳವಡಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಕಡೆ ಡೇಟಾ ಭದ್ರತೆಯ ಕೊರತೆಯಾಗಿತ್ತು. ನಾನು ಕಂಪ್ಯೂಟರ್ ಹ್ಯಾಕಿಂಗ್ ಕುರಿತ ಹಲವಾರು ಪುಸ್ತಕಗಳನ್ನು ಅಧ್ಯಯನ ಮಾಡಿದ್ದೆ. ಮಾತ್ರವಲ್ಲದೆ ಅಲ್ಲಿ ಕಲಿತದ್ದನ್ನು ಪ್ರಯೋಗಕ್ಕೆ ಒಳಪಡಿಸುತ್ತಿದ್ದೆ ಎಂದು ಸಂದರ್ಶನವೊಂದಲ್ಲಿ ಜೊನಾಥನ್ ಹೇಳಿಕೊಂಡಿದ್ದಾನೆ.

ಅಲಾಬಾಮದಲ್ಲಿರುವ ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್ ನ 13 ಕಂಪ್ಯೂಟರ್ ಗಳಿಗೆ ಜೊನಾಥನ್ ಪ್ರವೇಶ ಪಡೆದಿದ್ದ. ಇಲ್ಲಿಂದಲೇ ಆತ ನಾಸಾಗೆ ಸಂಬಂಧಿಸಿದ ಡೇಟಾ ಗಳನ್ನು ಹಾಗೂ ನಾಸಾ ಸ್ವಾಮ್ಯದ ಡಾಲರ್ 1.7 ಮಿಲಿಯನ್ ಮೊತ್ತದ ಸಾಫ್ಟ್ ವೇರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾನೆ. ಇವು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಭೌತಿಕ ಪರಿಸರ, ವಾಸಿಸುವ ಪ್ರದೇಶಗಳಲ್ಲಿನ ತಾಪಮಾನ ಮತ್ತು ತೇವಾಂಶದ ನಿಯಂತ್ರಣ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡಿತ್ತು.

ಇದು ನಾಸಾ ಸಂಸ್ಥೆಯ ಗಮನಕ್ಕೆ ಬಂದುದ್ದರಿಂದ, ಕೂಡಲೇ 21 ದಿನಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ 41,000 ಸಾವಿರ ಡಾಲರ್ ವ್ಯಯಿಸಿ ತನ್ನ ಕಂಪ್ಯೂಟರ್ ಗಳ ಪರಿಶೀಲನೆ ಮತ್ತು ರಿಪೇರಿ ಕಾರ್ಯಗಳನ್ನು ಕೈಗೊಂಡಿತ್ತು. ಈ ವೇಳೆ ನಾಸಾದ ರಕ್ಷಣಾ ವಿಭಾಗ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ, ಕಾರ್ಯಾಚರಣೆಗಿಳಿದ ತನಿಖಾ ತಂಡ ಜನವರಿ 26, 2000ನೇ ಇಸವಿಯಂದು ಜೇಮ್ಸ್ ಮನೆಗೆ ಪ್ರವೇಶಿಸಿ ಹ್ಯಾಕಿಂಗ್ ಕೃತ್ಯವನ್ನು ಬಯಲು ಮಾಡಿತ್ತು. ಬಳಿಕ ಜೊನಾಥನ್ ಜೇಮ್ಸ್ ಬಾಲಾಪರಾಧಯಾಗಿರುವುದರಿಂದ 7 ತಿಂಗಳ ಕಾಲ ಶಿಕ್ಷೆಗೆ ಒಳಗಾಗಿದ್ದ. ಮಾತ್ರವಲ್ಲದೆ 18 ವರ್ಷದವರೆಗೆ ಆತನ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಈ ವೇಳೆ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ಜೇಮ್ಸ್ ಮತ್ತೊಮ್ಮೆ 6 ತಿಂಗಳ ಕಾಲ ಶಿಕ್ಷೆಗೆ ಒಳಗಾಗಿದ್ದ.

ದರೋಡೆ ಅಥವಾ ಕಂಪ್ಯೂಟರ್ ಹ್ಯಾಕಿಂಗ್ ಮೂಲಕ ಮತ್ತೊಬ್ಬರ ಸೊತ್ತನ್ನು ಹಾನಿಮಾಡುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಯುಎಸ್ ಅಟಾರ್ನಿ ಜನರಲ್ ಜೆನೆಟ್ ರೇನೋ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೇ ಜೇಮ್ಸ್ ಬಾಲಾಪರಾಧಿಯಾಗಿದ್ದರಿಂದ ಆತನ ಹೆಸರು 18 ವಯಸ್ಸಿವರೆಗೂ ಅನಾಮಿಕವಾಗಿಯೇ ಉಳಿದಿತ್ತು. ಆದರೇ ಜೇಮ್ಸ್ ತಪ್ಪೊಪ್ಪಿಕೊಂಡ ನಂತರ ಕಂಪ್ಯೂಟರ್ ಅನಾಲಿಸ್ಟ್ ಆಗಿದ್ದ ಆತನ ತಂದೆ ರಾಬರ್ಟ್ ತಮ್ಮ ಮಗನ ಹೆಸರನ್ನು ಬಹಿರಂಗಗೊಳಿಸಿದ್ದರು. ಮಾತ್ರವಲ್ಲದೆ ನಾನು 20 ವರ್ಷಗಳಿಂದ ಕಂಪ್ಯೂಟರ್ ಗಳ ಜೊತೆಯೇ ಕೆಲಸ ಮಾಡುತ್ತಿದ್ದೇನೆ. ಆದರೇ ನನ್ನ ಮಗ ಮಾಡುವ ಕೆಲಸಗಳು ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಇಲ್ಲಿ ಜೇಮ್ಸ್ ಗೆ ತಾನು ಮಾಡುತ್ತಿರುವುದು ಅಪರಾಧವೆಂದು ತಿಳಿದಿರಲಿಲ್ಲ. ಕಂಪ್ಯೂಟರ್ ಕುರಿತು ಆತನಿಗಿದ್ದ ಆಸಕ್ತಿಯೇ ಆ ಮಟ್ಟಕ್ಕೆ ಕೊಂಡೊಯ್ದಿತ್ತು. ಆತ ಸುಲಭವಾಗಿಯೇ ತನಿಖಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ತನ್ನನ್ನು ತಾನು ರಕ್ಷಿಸಿಕೊಳ್ಳುವ ಯಾವುದೇ ಪ್ರಯತ್ನದಲ್ಲೂ ಕೂಡ ಆತ ತೊಡಗಲಿಲ್ಲ. ಅದನ್ನೊಂದು ಆಟ ಆಡುವ ವಿಧಾನವೆಂದೇ ಆತ ಭಾವಿಸಿದ್ದ. ನಾಸಾದ ಯಾವುದೇ ಕಂಪ್ಯೂಟರ್ ಸಿಸ್ಟಂಗಳಿಗೆ ಆತ ಹಾನಿ ಮಾಡಲಿಲ್ಲ ಎಂದು ಜನಪ್ರಿಯ ಪತ್ರಿಕೆಯೊಂದು ಆ ಸಮಯದಲ್ಲಿ ವರದಿ ಮಾಡಿತ್ತು. ಕಂಪ್ಯೂಟರ್ ಭದ್ರತೆಯಲ್ಲಿ ಸಾಕಷ್ಟು ವೈಫಲ್ಯಗಳಿವೆ. ಪ್ರಯತ್ನಿಸಿದ್ದಲ್ಲಿ ಪ್ರತಿಯೊಬ್ಬರೂ ಹ್ಯಾಕ್ ಮಾಡುವ ಸಾಧ್ಯತೆಯಿದೆ. ನನ್ನಂತಹ ಕಂಪ್ಯೂಟರ್ ಉತ್ಸಾಹಿಗಳು ಬಹಳಷ್ಟಿರುತ್ತಾರೆ. ಕೌಶಲ್ಯವಿದ್ದರೆ ಮೈಕ್ರೋಸಾಫ್ಟ್ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಾಗಿರಲಿ ಬಯಸಿದ್ದನ್ನು ಪಡೆಯುವ ಸಾಧ್ಯತೆಗಳಿವೆ ಎಂದು ಜೇಮ್ಸ್ ತಿಳಿಸಿದ್ದಾನೆ.

ಆದರೇ 2008ರಲ್ಲಿ ಜೇಮ್ಸ್ ಜೀವನಗಾಥೆ ಅಂತ್ಯವಾಗುತ್ತದೆ. ಆ ವೇಳೆಯಲ್ಲಿ ಪ್ರಪಂಚದಾದ್ಯಂತ ಸಾವಿರಾರು ಹ್ಯಾಕರ್ ಗಳು ರಂಗಕ್ಕಿಳಿದಿದ್ದರು. ಹಲವಾರು ಸಂಸ್ಥೆಗಳಲ್ಲಿ ಡೇಟಾಗಳು ಸೋರಿಕೆಯಾಗಿದ್ದವು. ಈ ವೇಳೆ ಜೇಮ್ಸ್ ಕೂಡ ಇತರರೊಂದಿಗೆ ಕೂಡಿಕೊಂಡು ಕ್ರೆಡಿಟ್ ಕಾರ್ಡ್ ಸೇರಿದಂತೆ ಇತರ ಮಾಹಿತಿ ಕದಿಯಲು ಸಂಚು ರೂಪಿಸಿದ್ದಾನೆ ಎಂಬ ಆರೋಪಗಳು ಮುನ್ನಲೆಗೆ ಬಂದಿದ್ದವು. ಆದರೆ ಈ ಅಪರಾಧದಲ್ಲಿ ತಾನು ಶಾಮೀಲಾಗಿಲ್ಲ ಎಂದು ವಾದಿಸುತ್ತಲೇ ಬಂದ ಜೇಮ್ಸ್ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಇಂದು ಜಗತ್ತಿನ ಅತೀ ದೊಡ್ಡ ಹ್ಯಾಕಿಂಗ್ ಕೃತ್ಯ ಯಾವುದೆಂದು ಹುಡುಕಿದರೆ ಅಲ್ಲಿ ಜೊನಾಥನ್ ಪ್ರಕರಣ ಕಾಣಿಸಿಕೊಳ್ಳುತ್ತದೆ. 90ರ ದಶಕದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ತಂತ್ರಜ್ಞಾನಗಳು ಅಭಿವೃದ್ದಿಯಾಗದಿದ್ದರೂ, ಸೈಬರ್ ಅಪರಾಧಗಳನ್ನು ಯಾವೆಲ್ಲಾ ರೀತಿ ಮಾಡಬಹುದೆಂಬ ವಿಚಾರಗಳು ಬೆಳಕಿಗೆ ಬಂದಿದ್ದವು. ಜೇಮ್ಸ್ ಜೈಲಿನಿಂದ ಬಿಡುಗಡೆಯಾದ ಮೇಲೂ, ಇತರೆ ಯಾವುದೇ ಸೈಬರ್ ಅಪರಾಧಗಳು ನಡೆದರೂ ಆತನ ಮೇಲೆ ಅಮೆರಿಕಾದ ಏಜೆಂಟ್ ಗಳು ಅನುಮಾನ ಪಡುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾದ ಆತ 2008, ಮೇ 18 ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ, ಜಗತ್ತಿನ ಅತೀ ದೊಡ್ಡ ಸೈಬರ್ ಅಪರಾಧದಲ್ಲಿ ಭಾಗಿಯಾದವನ ಜೀವನಗಾಥೆ ಅಂತ್ಯವಾಗುತ್ತದೆ.

*ಮಿಥುನ್ ಪಿ.ಜಿ

ಟಾಪ್ ನ್ಯೂಸ್

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ

Mollywood: ಚಿತ್ರದ ಬಗ್ಗೆ ನೆಗೆಟಿವ್‌ ರಿವ್ಯೂ ಕೊಟ್ಟ ಯುವಕನಿಗೆ ಖ್ಯಾತ ನಟನಿಂದ ಬೆದರಿಕೆ

Mollywood: ಚಿತ್ರದ ಬಗ್ಗೆ ನೆಗೆಟಿವ್‌ ರಿವ್ಯೂ ಕೊಟ್ಟ ಯುವಕನಿಗೆ ಖ್ಯಾತ ನಟನಿಂದ ಬೆದರಿಕೆ

ಸಿಎಂ ಗೆ ರೈತ ಬಗ್ಗೆ ಕಾಳಜಿ ಇದ್ದರೆ ವಕ್ಫ್‌ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ

ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್‌ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

3

UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

prashanth-Kishore

Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.