ಕೋವಿಡ್ ಬಿಕ್ಕಟ್ಟಿನಲ್ಲೂ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಸಿಗುತ್ತಿದೆ 1 ಲಕ್ಷ ರೂ.ಬೋನಸ್..!

Team Udayavani, Jul 15, 2021, 4:21 PM IST

microsoft-will-be-gifting-its-employees-a-massive-rs-1-lakh-cash-bonus

ನವ ದೆಹಲಿ :  ಕೋವಿಡ್ ಸಂಕಷ್ಟದ ಸ್ಥಿತಿಯ ಕಾರಣದಿಂದಾಗಿ ಉದ್ಯಮ ಕ್ಷೇತ್ರಗಳು ನಷ್ಟ ಅನುಭವಿಸಿವೆ. ನಿರುದ್ಯೋಗದ ಸಮಸ್ಯೆ ಮೂಟೆ ಕಟ್ಟಿಕೊಳ್ಳುತ್ತಿರುವ ಸಂದರ್ಭದ ಎದುರಾಗಿದೆ. ಒಂದಿಷ್ಟು ಮಮದಿ ಕೆಲಸದಲ್ಲಿದ್ದರೂ ಕಡಿಮೆ ಸಂಬಳಕ್ಕೆ ದುಡಿಯುವ ಪರಿಸ್ಥಿತಿಯನ್ನು ಕೋವಿಡ್ ತಂದೊಡ್ಡಿದೆ.

ಕಂಪೆನಿಗಳಲ್ಲಿ ವಾರ್ಷಿಕವಾಗಿ ಸಿಗುವ ಬೋನಸ್ ಹಾಗೂ ಇನ್ನಿತರೇ ಸೌಲಭ್ಯಗಳು ಈ ವರ್ಷ ಹೇಳಹೆಸರಿಲ್ಲದಂತಾಗಿದೆ. ಆದರೇ, ತಂತ್ರಜ್ಞಾನ ಕಂಪೆನಿಗಳ ದೈತ್ಯ ಎಂದೇ ಕರೆಸಿಕೊಳ್ಳುವ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಈ ಕೋವಿಡ್ ನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಬೋನಸ್ ನೀಡಿದೆ.

ಹೌದು, ತಂತ್ರಜ್ಞಾನ ಕ್ಷೇತ್ರಗಳಲ್ಲಿಯೇ ಬೃಹತ್ ಸಂಸ್ಥೆ ಎಂದು ಗುರುತಿಸಿಕೊಳ್ಳುವ ಮೈಕ್ರೋಸಾಫ್ಟ್, ತನ್ನ ಉದ್ಯೋಗಿಗಳಿಗೆ ಬಂಪರ್ ಬೋನಸ್ ನೀಡುವುದಕ್ಕೆ ಮುಂದಾಗಿದೆ. ತನ್ನ ನೌಕರರಿಗೆ ಒಂದು ಲಕ್ಷ ಬೋನಸ್​ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ದಿ ವರ್ಜ್​ ವರದಿ ಮಾಡಿದೆ.

ಇದನ್ನೂ ಓದಿ : ಜು.21ರಂದು ಕೆಲವು ಶಾಸಕರೊಂದಿಗೆ ದೆಹಲಿಗೆ ಹೋಗುತ್ತೇನೆ: ರೇಣುಕಾಚಾರ್ಯ

ಕೋವಿಡ್​ ಸೋಂಕಿನ ಕಾರಣದಿಂದಾಗಿ ವರ್ಕ್​ ಫ್ರಂ ಹೋಂ ನಲ್ಲಿ ಕಾರ್ಯ ನಿರವಹಿಸುತ್ತಿರುವ ಉದ್ಯೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಮೈಕ್ರೋಸಾಫ್ಟ್ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.

ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಉದ್ಯೋಗಿಗಳ ಮತ್ತು ಕಂಪನಿಯ ಮೌಲ್ಯಯುತ ಸಂಬಂಧವನ್ನು ಇರಿಸಿಕೊಳ್ಳುವ ಉದ್ದೇಶದಿಂದ ಈ ಬೋನಸ್​ ನೀಡಲಾಗುತ್ತಿದೆ.

ಈ ಬೋನಸ್​ ನೀಡುವುದರಿಂದ ಕಂಪನಿಗೆ ಸುಮಾರು 200 ಮಿಲಿಯನ್​ ಡಾಲರ್​ ಆರ್ಥಿಕ ವೆಚ್ಚ ಹೆಚ್ಚಾಗಲಿದೆ, ಆದರೆ ಉದ್ಯೋಗಿ ಮತ್ತು ಕಂಪನಿ ನಡುವಿನ ನಂಬಿಕೆ ಉಳಿಸಿಕೊಳ್ಳಲು, ಸಂಸ್ಥೆಗಾಗಿ ಶ್ರಮ ಪಡುತ್ತಿರುವು ಉದ್ಯೋಗಿಗಳಿಗೆ ಇದು ಅಗತ್ಯ ಎಂದು ಸಂಸ್ಥೆ ತಿಳಿಸಿರುವುದಾಗಿ ವರದಿಯಲ್ಲಿ ವಿವರಿಸಲಾಗಿದೆ.

ಇನ್ನು, ಈ ವರ್ಷದ ಮೊದಲ ತ್ರೈ ಮಾಸಿಕದ ಕೊನೆಯಾಗುವ ಸಂದರ್ಭದಲ್ಲಿ ಮೈಕ್ರೋಸಾಫ್ಟ್​ 125 ಬಿಲಿಯನ್​ ಡಾಲರ್​ ಹೂಡಿಕೆ ಮಾಡಿದೆ. ಈ ಬೋನಸ್​ ಕುರಿತು ಇತ್ತೀಚೆಗೆ ಪ್ರಕಟಿಸಿದ ಮೈಕ್ರೋಸಾಫ್ಟ್​ ಸಿಪಿಒ, ಜುಲೈ ಮತ್ತು ಆಗಸ್ಟ್​ ಒಳಗೆ ಕಂಪನಿಯ ಪ್ರಪಂಚದ ಎಲ್ಲ ಮೂಲೆಯಲ್ಲಿರುವ ಉದ್ಯೋಗಿಗಳಿಗೆ ಈ ಬೋನಸ್​ ಕೈ ಸೇರಲಿದೆ ಎಂದು ಹೇಳಿದೆ.

31 ಮಾರ್ಚ್​ 2021 ರ ಮೊದಲೇ ಕಾರ್ಪೊರೇಟ್​ ಉಪಾಧ್ಯಕ್ಷನ ಕೆಳ ಹುದ್ದೆಗಳಿಗೆ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಎಲ್ಲಾ ನೌಕರರಿಗೆ ಈ ಬೋನಸ್​ ದೊರಕಲಿದೆ.

ಮೈಕ್ರೋಸಾಫ್ಟ್​ ಸಂಸ್ಥೆಯಲ್ಲಿ ಸುಮಾರು 155,508 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಆಯಾಯ ಉದ್ಯೋಗಿಗಳ ಹುದ್ದೆಯ ಮಾನದಂಡವನ್ನು ಆಧಾರಿಸಿ ಈ ವಿಶೇಷ ಭತ್ಯೆ ಲಭಿಸಲಿದೆ.

ಇದನ್ನೂ ಓದಿ : ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ‘ಸೈದ್ಧಾಂತಿಕ ಬದಲಾವಣೆ’ ಅಗತ್ಯವಿದೆ: ಕೋಚ್ ರಮೇಶ್ ಪೊವಾರ್

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Nirmala-Seetaraman

New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ

RBI-Logo

Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.