ಜು. 25: ಸಿಂಧು ಮೊದಲ ಪಂದ್ಯ
Team Udayavani, Jul 16, 2021, 6:45 AM IST
ಹೊಸದಿಲ್ಲಿ: ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ, ರಿಯೋ ರಜತ ವಿಜೇತೆ ಪಿ.ವಿ. ಸಿಂಧು ಟೋಕಿಯೊ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯವನ್ನು ಜು. 25ರಂದು ಆಡಲಿದ್ದಾರೆ. ಇವರ ಎದುರಾಳಿ ಇಸ್ರೇಲ್‌ನ ಪೊಲಿಕಾರ್ಪವ್ ಸೆನಿಯಾ.
ಸಿಂಧು “ಜೆ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಈ ವಿಭಾಗದ ಮತ್ತೋರ್ವ ಆಟಗಾರ್ತಿ ಹಾಂಕಾಂಗ್‌ನ ಚೆಯುಂಗ್ ಎನ್‌ಗಾಯ್ ಯೀ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ. ಸಾಯಿ ಪ್ರಣೀತ್ ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಇಸ್ರೇಲ್‌ನ ಮಿಶಾ ಜಿಲ್ಬರ್ಮನ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. “ಡಿ’ ಗುಂಪಿನ ಈ ಪಂದ್ಯ ಜು. 24ರಂದು ನಡೆಯಲಿದೆ.
“ಎ’ ಗುಂಪಿನಲ್ಲಿರುವ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆಯ ಲೀ ಯಾಂಗ್ ಮತ್ತು ವಾಂಗ್ ಚಿ ಲಿನ್ ಅವರನ್ನು ಎದುರಿಸಲಿದ್ದಾರೆ.
ಲಾಕ್‌ಡೌನ್‌ನಿಂದ ಲಾಭ: ಸಿಂಧು :
ಕೊರೊನಾ ಲಾಕ್‌ಡೌನ್ ಎನ್ನುವುದು ತನ್ನ ಒಲಿಂಪಿಕ್ಸ್ ಸಿದ್ಧತೆಗೆ ಯಾವುದೇ ಅಡ್ಡಿ ಮಾಡಿಲ್ಲ. ಇದು ತನಗೆ ಕೌಶಲ ಹಾಗೂ ತಾಂತ್ರಿಕ ಅಂಶಗಳತ್ತ ಗಮನಹರಿಸಲು ಹೆಚ್ಚಿನ ಸಮಯವನ್ನು ನೀಡಿತು ಎಂದು ಪಿ.ವಿ. ಸಿಂಧು ಹೇಳಿದ್ದಾರೆ.
“ನನಗಂತೂ ಕೊರೊನಾ ಕಾಲದಲ್ಲಿ ದೊರೆತ ವಿರಾಮ ಬಹಳಷ್ಟು ಪ್ರಯೋಜನಕ್ಕೆ ಬಂತು. ಈ ಅವಧಿಯಲ್ಲಿ ಹೆಚ್ಚು ಕಲಿಯಲು ಮತ್ತು ನನ್ನ ಆಟದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಾಯವಾಯಿತು. ಒಂದೊಮ್ಮೆ ಕ್ರೀಡಾಕೂಟಗಳು ನಡೆಯುತ್ತಲೇ ಇದ್ದರೆ ಅಭ್ಯಾಸಕ್ಕೆ ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಹೀಗಾಗಿ ಲಾಕ್‌ಡೌನ್ ಎನ್ನುವುದು ನನ್ನ ಒಲಿಂಪಿಕ್ಸ್ ತಯಾರಿಗೆ ಹೆಚ್ಚಿನ ಅನುಕೂಲವನ್ನೇ ಮಾಡಿದೆ’ ಎಂದು ಸಿಂಧು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.