ಪಂತ್, ಸಾಹ ಐಸೋಲೇಶನ್ ನಲ್ಲಿ, ವಿಕೆಟ್ ಕೀಪಿಂಗ್ ಗೆ ನಾನು ರೆಡಿ ಎಂದ ದಿನೇಶ್ ಕಾರ್ತಿಕ್
Team Udayavani, Jul 16, 2021, 1:04 PM IST
ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ಭಾರತ ತಂಡಕ್ಕೆ ಕೋವಿಡ್ ಕಾಟ ಎದುರಾಗಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಕೋವಿಡ್ ಪಾಸಿಟಿವ್ ಆಗಿದೆ. ಸಹಾಯಕ ಸಿಬ್ಬಂದಿ ದಯಾನಂದ್ ಅವರಿಗೂ ಪಾಸಿಟಿವ್ ಆಗಿದ್ದು, ಅವರ ಸಂಪರ್ಕಕ್ಕೆ ಬಂದ ಕಾರಣ ಮತ್ತೊಬ್ಬ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಕೂಡಾ ಐಸೋಲೇಶನ್ ನಲ್ಲಿದ್ದಾರೆ.
ಸದ್ಯ ಭಾರತ ತಂಡದ ಇಬ್ಬರೂ ವಿಕೆಟ್ ಕೀಪರ್ ಗಳು ಐಸೋಲೇಶನ್ ನಲ್ಲಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್ ಆ ಜಾಗದ ಮೇಲೆ ಕಣ್ಣು ಹಾಕಿದ್ದಾರೆ.
ಇದನ್ನೂ ಓದಿ:ರಿಷಭ್ ಪಂತ್ ಆರೋಗ್ಯ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ
ಸದ್ಯ ದಿನೇಶ್ ಕಾರ್ತಿಕ್ ಸದ್ಯ ಕಾಮೆಂಟರಿಗಾಗಿ ಇಂಗ್ಲೆಂಡ್ ನಲ್ಲಿದ್ದಾರೆ. ಒಂದು ವೇಳೆ ಅವಕಾಶ ಸಿಕ್ಕರೆ ತಾನೇ ವಿಕೆಟ್ ಕೀಪಿಂಗ್ ಮಾಡುವ ಬಗ್ಗೆ ದಿನೇಶ್ ಕಾರ್ತಿಕ್ ಸುಳಿವು ನೀಡಿದ್ದಾರೆ. ತನ್ನ ಕಿಟ್ ಮತ್ತು ವಿಕೆಟ್ ಕೀಪಿಂಗ್ ಗ್ಲೌಸ್ ನ ಚಿತ್ರವನ್ನು ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.
? #justsaying pic.twitter.com/zX3ValErDc
— DK (@DineshKarthik) July 15, 2021
ಭಾರತ ತಂಡ ಜು.20ರಂದು ಡರ್ಹಮ್ ನಲ್ಲಿ ಕೌಂಟಿ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವಾಡಲಿದ್ದಾರೆ. ಸದ್ಯ ಪಂತ್ ಮತ್ತು ಸಾಹ ತಂಡದ ಸೇವೆಗೆ ಅಲಭ್ಯರಾದ ಕಾರಣ ಅಭ್ಯಾಸ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ನಡೆಸುವುದು ಬಹುತೇಕ ಖಚಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.