ವಿದೇಶಿಗರ ಮೇಲೆ ಸಿಸಿಬಿ ದಾಳಿ
Team Udayavani, Jul 16, 2021, 6:08 PM IST
ಬೆಂಗಳೂರು: ಅಕ್ರಮ ವಾಸ, ಮಾದಕ ವಸ್ತುಮಾರಾಟ ದಂಧೆ, ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿಭಾಗಿ ಹೀಗೆ ಹಲವಾರು ಅಕ್ರಮ ಚಟುವಟಿಕೆಗಳಲ್ಲಿವಿದೇಶಿ ಪ್ರಜೆಗಳ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಗುರುವಾರ ನಗರದ ನಾಲ್ಕು ವಿಭಾಗಗಳಲ್ಲಿವಾಸವಾಗಿರುವ 65 ಮಂದಿ ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಎರಡು ಎನ್‌ಡಿಪಿಎಸ್ ಪ್ರಕರಣ ದಾಖಲಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ನಾಲ್ಕು ವಿದೇಶಿ ಕಾಯ್ದೆ ಉಲ್ಲಂಘನೆ ಪ್ರಕರಣದಾಖಲಿಸಲಾಗಿದ್ದು,20 ಮಂದಿಯನ್ನು ಬಂಧಿಸಲಾಗಿದೆ.ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್‌ಪಾಟೀಲ್, ಡಿಸಿಪಿಗಳಾದ ರವಿಕುಮಾರ್, ಬಿ.ಎಸ್.ಅಂಗಡಿ ನೇತೃತ್ವದಲ್ಲಿ ಪೂರ್ವ ವಿಭಾಗದಲ್ಲಿ ಎಸಿಪಿಗೌತಮ್ ಕುಮಾರ್, ಈಶಾನ್ಯ ವಿಭಾಗದಲ್ಲಿ ಎಸಿಪಿಧರ್ಮೇಂದ್ರ ಕುಮಾರ್, ನಾಗರಾಜ್, ವೈಟ್‌ಫೀಲ್ಡ…ವಿಭಾಗದ ಎಸಿಪಿ ಪರಮೇಶ್ವರ್ ಹಾಗೂ ಜಗನ್ನಾಥ್ ರೈನೇತೃತ್ವದ ಸುಮಾರು 120 ಮಂದಿಯ ಅಧಿಕಾರಿ-ಸಿಬ್ಬಂದಿತಂಡದಾಳಿ ನಡೆಸಿ ಅಕ್ರಮವಾಗಿವಾಸವಾಗಿದ್ದ 38 ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇದೇವೇಳೆಅಕ್ರಮವಾಗಿ ಸಂಗ್ರಹಿಸಿದ ª 90ಎಕ್ಸೆ r„ಸಿ ಮಾತ್ರೆಗಳು, 25 ಗ್ರಾಂ ಗಾಂಜಾ, ಹತ್ತಾರುಲ್ಯಾಪ್‌ಟಾಪ್‌ವಶಕ್ಕೆಪಡೆಯಲಾಗಿದೆ.ಗುರುವಾರ ಬೆಳಗ್ಗೆ ಐದು ಗಂಟೆಗೆ ಏಕಕಾಲದಲ್ಲಿಕಮ್ಮನಹಳ್ಳಿ, ಸಂಪಿಗೆಹಳ್ಳಿ, ರಾಮಮೂರ್ತಿನಗರ,ಬಾಣಸವಾಡಿ, ಯಲಹಂಕ, ವೈಟ್‌ಫೀಲ್ಡ…, ಹೆಣ್ಣೂರುಸೇರಿ ನಗರದ ನಾನಾಕಡೆ ವಾಸವಾಗಿದ್ದ65 ಮನೆಗಳಮೇಲೆ ದಾಳಿ ನಡೆಸಲಾಗಿದೆ.ಇತ್ತೀಚೆಗೆ ನಗರ ಕಮಿಷನರೇಟ್‌ವ್ಯಾಪ್ತಿಯಲ್ಲಿ ಇದುವರೆಗೂ ವಶಕ್ಕೆ ಪಡೆದುಕೊಂಡಿದ್ದ 50 ಕೋಟಿ ರೂ.ಮೌಲ್ಯದ ಮಾದಕ ವಸ್ತುವನ್ನು ನಾಶಪಡಿಸಲಾಗಿತ್ತು.
ಈವೇಳೆ ನಗರದಲ್ಲಿ ವಾಸವಾಗಿರುವ ವಿದೇಶಿ ಪ್ರಜೆಗಳಿಂದಲೇ ಹೆಚ್ಚು ಮಾದಕ ವಸ್ತು ಜಾಲ ಹೆಚ್ಚಾಗುತ್ತಿರುವಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ದಾಳಿಸಲಾಗಿದೆ.ದಾಳಿ ಸಂದರ್ಭದಲ್ಲಿ ಕೆಲವರು ವಿದ್ಯಾರ್ಥಿ,ವಾಣಿಜ್ಯ, ಪ್ರವಾಸಿ ವೀಸಾ ಸೇರಿ ಇತರೆ ವೀಸಾಗಳಡಿಭಾರತಕ್ಕೆ ಬಂದಿದ್ದಾರೆ. ಆದರೆ, ಕೆಲವರು ಅಪರಾಧಪ್ರಕರಣಗಳಲ್ಲಿ ಭಾಗಿಯಾಗಿ ಇಲ್ಲಿಯೇ ಉಳಿದುಕೊಂಡಿದ್ದು, ಪದೇ ಪದೆ ಅಕ್ರಮ ಚಟುವಟಿಕೆಗಳಲ್ಲಿಭಾಗಿಯಾಗುತ್ತಿದ್ದಾರೆ ಎಂಬುದು ಪತ್ತೆಯಾಗಿದೆ.ಇನ್ನು ಕೆಲವರು ವೀಸಾ ಅವಧಿ ಮುಕ್ತಾಯಗೊಂಡಿದ್ದರು. ಅಕ್ರಮವಾಗಿ ವಾಸವಾಗಿರುವುದು ದಾಖಲೆಗಳಿಂದ ಪತ್ತೆಯಾಗಿದೆ. ವಿಚಾರಣೆ ಮುಂದುವರಿದಿದೆಸಿಸಿಬಿ ಮೂಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ
Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ
Atul Subhash: ಟೆಕಿ ಅತುಲ್ ಪತ್ನಿ ಬೇಲ್ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜ.26-30: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.