ಏಳನೇ ವರ್ಷಕ್ಕೆ ಮಹದಾಯಿ ಹೋರಾಟ
ಮಲೆಪ್ರಭೆ ಸೇರಿಲ್ಲ! ಮಹದಾಯಿ ಅನ್ನದಾತರ ಕೂಗು! ಮೂಕ ವೇದನೆ
Team Udayavani, Jul 16, 2021, 4:15 PM IST
ಸಿದ್ಧಲಿಂಗಯ್ಯ ಮಣ್ಣೂರಮಠ
ನರಗುಂದ: ದೇಶದ ಇತಿಹಾಸದಲ್ಲೇ ಕುಡಿಯುವ ನೀರಿಗಾಗಿ ವಿಶ್ವದಾಖಲೆ ಸೃಷ್ಟಿಸಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಚಳವಳಿ ಸುದೀರ್ಘ ಆರು ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿಡುತ್ತಿದೆ. ನ್ಯಾಯಾಧಿಕರಣ ಹಂಚಿಕೆ ಮಾಡಿದರೂ ಮಹದಾಯಿ ಮಲಪ್ರಭೆಯ ಒಡಲು ತುಂಬದ ಹಿನ್ನೆಲೆಯಲ್ಲಿ ಬಂಡಾಯ ನಾಡಿನ ಅನ್ನದಾತರ ಕೂಗು ಮೂಕ ವೇದನೆಯಾಗಿದೆ.
ಐದು ದಶಕಗಳ ಬೇಡಿಕೆಯಾದ ಮಹದಾಯಿ ಮಲಪ್ರಭೆ ಜೋಡಣೆಗೆ ಆಗ್ರಹಿಸಿ 2015ರ ಜು.16ರಂದು ವಿವಿಧ ಸಂಘಟನೆಗಳ ಸಹಯೋಗದಲ್ಲಿ ರೈತ ಸೇನಾ-ಕರ್ನಾಟಕವು ನರಗುಂದದಲ್ಲಿ 1980ರ ರೈತ ಬಂಡಾಯದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮ ರೈತ ದಿ|ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿನ ಎದುರು ವೇದಿಕೆ ನಿರ್ಮಿಸಿ ನಿರಂತರ ಚಳವಳಿ ಆರಂಭಿಸಿತು. ಮಹದಾಯಿ ನದಿಯಲ್ಲಿ 45 ಟಿಎಂಸಿ ಅಡಿ ರಾಜ್ಯದ ಪಾಲು, ಕಳಸಾ-ಬಂಡೂರಿ ನಾಲೆಗಳ 7.56 ಟಿಎಂಸಿ ನೀರಿನ ಬೇಡಿಕೆಯೊಂದಿಗೆ ಬೆರಳೆಣಿಕೆ ರೈತರಿಂದ ಚಾಲನೆ ಪಡೆದ ಹೋರಾಟದ ಮಹತ್ವ, ಉದ್ದೇಶ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಜಾಗೃತಿ ಮೂಡಿಸಿತು.
ದಿನದಿಂದ ದಿನಕ್ಕೆ ಕಾವು ಪಡೆದ ಹೋರಾಟ ದಾಖಲಾರ್ಹ ಚಳವಳಿ ಎನಿಸಿತು. ಜನಾಂದೋಲನ ಸ್ವರೂಪ: ಜನಾಂದೋಲನ ಸ್ವರೂಪ ಪಡೆದ ಚಳವಳಿ, ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಬಲಪಡಿಸಿದ ಮಲಪ್ರಭೆ ಮಕ್ಕಳ ಜೀವಜಲ ಕೂಗು ನಾಡಿನುದ್ದಗಲಕ್ಕೂ ಪಸರಿಸಿ ಸರ್ಕಾರದ ನಿದ್ದೆಗೆಡಿಸಿದ್ದು ಅಚ್ಚರಿಯೇನಲ್ಲ.
ಇನ್ನು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಯೋಜನೆಗೆ ಜೀವನವನ್ನೇ ಮುಡುಪಾಗಿಟ್ಟು 2016ರ ಅ.17ರಂದು ಪೂಜ್ಯರ ಸಮ್ಮುಖದಲ್ಲಿ ಹೋರಾಟ-ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು ಗಮನಾರ್ಹ. ಈ ಮಧ್ಯೆ 2018ರ ಆಗಸ್ಟ್‌ನಲ್ಲಿ ನ್ಯಾಯಾಧಿ ಕರಣವೇ 13.50 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆ ಮಾಡಿದರೂ ಮಹದಾಯಿ ಮಾತ್ರ ಇಂದಿಗೂ ಮಲಪ್ರಭೆ ಸೇರಿಲ್ಲವೆಂಬ ವೇದನೆ ಅನ್ನದಾತರನ್ನು ನಿದ್ದೆಗೆಡಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
MUST WATCH
ಹೊಸ ಸೇರ್ಪಡೆ
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.