ಮೌನದಲ್ಲೂ ಇರುತ್ತೆ ನೂರೆಂಟು ಮಾತು
ಯಾವುದು ತಪ್ಪು ಎನ್ನುವುದೇ ಅರ್ಥವಾಗದೆ ನನ್ನ ಮನದೊಳಗೆ ಯುದ್ಧವಾಗುತ್ತಿರುತ್ತದೆ.
Team Udayavani, Jul 17, 2021, 10:32 AM IST
ಏನೇ ಇದ್ದರೂ ಅದನ್ನು ನೇರವಾಗಿ ಹೇಳಿಬಿಡಬೇಕು. ಅದರಿಂದ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿಕೊಳ್ಳಬಹುದು ಎನ್ನುತ್ತಿದ್ದಳು ಅಮ್ಮ. ಆದರೆ ಇತ್ತೀಚೆಗೆ ಯಾಕೋ ಅವಳಿಗೆ ಕೇಳುವ ತಾಳ್ಮೆಯೇ ಉಳಿದಿಲ್ಲ. ಹೀಗಾಗಿ ಅವಳ ಈ ವರ್ತನೆಯ ಬಗ್ಗೆಯೇ ಹಲವಾರು ಆಕ್ಷೇಪಗಳು ನನ್ನಲ್ಲಿವೆ. ಕೆಲವೊಂದು ಬಾರಿ ಅದು ನನ್ನೊಡನೆ ಕಾದಾಟಕ್ಕೆ ಇಳಿದು ಬಿಡುತ್ತದೆ.
ಎಷ್ಟಾದರೂ ನನ್ನಮ್ಮ ಅವಳು. ನನ್ನನ್ನು ಇಷ್ಟು ವರ್ಷ ಕಷ್ಟಪಟ್ಟು ಸಾಕಿ ಬೆಳೆಸಿ ಮದುವೆ ಮಾಡಿಸಿದಳು. ಮೊಮ್ಮಗನ ಆಗಮನವಾದಾಗ ಸಂತೋಷದಿಂದ ಕಣ್ತುಂಬಿಕೊಂಡಳು. ಆದರೆ ಯಾಕೋ ಈಗೀಗ ಯಾವುದೂ ನನ್ನಿಂದ ಸಾಧ್ಯವಿಲ್ಲ ಎನ್ನುತ್ತಿದ್ದಾಳೆ. ಒಂದೊಂದು ಬಾರಿ ಅತಿಯಾದ ಪ್ರೀತಿ ತೋರಿಸುವವಳು ಕೆಲವೊಂದು ಬಾರಿ ಒಗಟಿನಂತೆ ವರ್ತಿಸುತ್ತಾಳೆ. ಇನ್ನು ಕೆಲವೊಮ್ಮೆ ತುಂಬಾ ಸಿಟ್ಟು ತೋರಿಸುತ್ತಾಳೆ… ಇದರಿಂದ ಯಾವುದು ಸರಿ, ಯಾವುದು ತಪ್ಪು ಎನ್ನುವುದೇ ಅರ್ಥವಾಗದೆ ನನ್ನ ಮನದೊಳಗೆ ಯುದ್ಧವಾಗುತ್ತಿರುತ್ತದೆ.
ಹೀಗೆ ಗೆಳತಿಯೊಬ್ಬಳು ತನ್ನ ಅಮ್ಮನ ಬಗ್ಗೆಯ ನನ್ನ ಬಳಿ ದೂರು ತಂದಿದ್ದಳು. ಅವಳ ಆಕ್ಷೇಪ ಸರಿಯಾಗಿಯೇ ಇತ್ತು. ಆದರೆ ಅದನ್ನು ಸರಿಪಡಿಸುವ ವಿಧಾನದ ಅರಿವು ಅವಳಿಗೆ ಇಲ್ಲವಾಗಿತ್ತು. ಕೆಲಸದ ಒತ್ತಡ ಹೆಚ್ಚಾದಾಗ ನಮ್ಮ ಭಾವನೆಗಳಲ್ಲೂ ವ್ಯತ್ಯಾಸಗಳಾಗುತ್ತವೆ. ಸುಖಾಸುಮ್ಮನೆ ಆತಂಕ ಸೃಷ್ಟಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆದರೆ ಆ ಆತಂಕವನ್ನು ನಿವಾರಣೆ ಮಾಡುವ ದಾರಿಯನ್ನು ಹುಡಕಬೇಕಿದೆ.
ಈ ರೀತಿಯ ಹಲವು ಕೇಸ್‌ಗಳನ್ನು ಹ್ಯಾಂಡಲ್ ಮಾಡಿದ್ದ ನನಗೆ ಅವಳಿಗೂ ಒಂದು ಸಿಂಪಲ್ ಸಲಹೆ ಕೊಟ್ಟೆ. ಮನೆಯಲ್ಲಿದ್ದಾಗ ಅಮ್ಮನ ಎಲ್ಲ ಕೆಲಸಗಳನ್ನು ನೀನು ಮಾಡು. ಅವಳಿಗೆ ಸ್ವಲ್ಪ ಫ್ರೀ ಟೈಮ್ ಕೊಡು. ಸರಿ ಎಂದಳು. ಕೆಲವು ವಾರಗಳು ಕಳೆಯಿತು. ಮತ್ತೆ ಬಂದ ಗೆಳತಿ ಈ ಬಾರಿ ಹೊಸ ದೂರನ್ನು ತಂದಿದ್ದಳು. ನೀನು ಹೇಳಿದಂತೆ ಮಾಡುತ್ತಿದ್ದೇನೆ. ಆದರೆ ನನಗೂ ಬೇಸರವಾಗುತ್ತಿದೆ. ಮನೆಯಲ್ಲಿ ಇರುವುದೇ ನಾನು ಸ್ವಲ್ಪ ಹೊತ್ತು. ಆಗ ನನಗೆ ಮನೆ ಕೆಲಸಗಳ ಹೊರೆ ಇರುತ್ತದೆ.
ಮಗುವಿನ ಜತೆಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಗು ನನ್ನಿಂದ ದೂರವಾಗುತ್ತಿದೆ ಎಂದೆನಿಸುತ್ತದೆ ಎಂದಳು. ಇದು ತುಂಬಾ ಯೋಚಿಸಬೇಕಾಗಿದ್ದ ವಿಚಾರವಾಗಿತ್ತು. ಆದರೆ ಆಗ ನಾನು ಅವಳಿಗೆ ಹೇಳಿದೆ. ಮನೆ ಕೆಲಸಗಳನ್ನು ಇಬ್ಬರು ಹಂಚಿಕೊಂಡು ಮಾಡಿ. ಜತೆಗೆ ಮಗುವನ್ನು ನೋಡಿಕೊಳ್ಳಲು ಟೈಮ್ ಫಿಕ್ಸ್ ಮಾಡಿಕೊಳ್ಳಿ. ಇದರಿಂದ ಸಮಸ್ಯೆಗಳನ್ನು ಬಗೆ ಹರಿಸಬಹುದು ಎಂದೆ. ಇದಾಗಿ ವರ್ಷವಾಗುತ್ತ ಬಂತು. ಆದರೆ ಈವರೆಗೆ ಅವಳಿಂದ ಮತ್ತೆ ಯಾವುದೇ ದೂರುಗಳು ಬಂದಿಲ್ಲ.
ಮನೆ ಎಂಬ ನಾಲ್ಕು ಗೋಡೆಯೊಳಗೆ ನಡೆಯುವ ಯುದ್ಧ ನಮ್ಮ ಮನಸ್ಸಿನೊಳಗೆ ಇರುತ್ತದೆ. ಆದರೆ ಎಷ್ಟೋ ಬಾರಿ ಅದು ನಾವು ಸರಿಯಾಗಿ ಪರಿಸ್ಥಿತಿ ನಿಭಾಯಿಸದೇ ಇರುವ ಪರಿಣಾಮವೇ ಆಗಿರುತ್ತದೆ. ಪರಸ್ಪರ ಹೊಂದಿಕೊಂಡು, ಕೆಲಸಗಳನ್ನು ಹಂಚಿಕೊಂಡು ಮಾಡಿದರೆ ಎಲ್ಲರ ಬದುಕು ಸುಲುಭವಾಗುತ್ತದೆ. ಜೀವನ ಸರಳವಾಗಿರುತ್ತದೆ. ಎಷ್ಟೋ ಬಾರಿ ನಮ್ಮ ನಿರ್ಧಾರಗಳಿಂದ ಇದನ್ನು ನಾವು ಮೌನದಲ್ಲೂ ಇರುತ್ತೆ ನೂರೆಂಟು ಮಾತು ದುಸ್ತರ ಮಾಡಿಕೊಂಡಿರುತ್ತವೆ. ಆದರೆ ಒಬ್ಬರನ್ನೊಬ್ಬರು ಅರಿತು ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳಿದರೆ ಮನೆ, ಮನದೊಳಗೆ ಸಂತೋಷ ತುಂಬಲು ಸಾಧ್ಯವಾಗುತ್ತದೆ.
ಎಷ್ಟೋ ಬಾರಿ ನಾವು ನಮ್ಮ ಕಷ್ಟಗಳನ್ನಷ್ಟೇ ನೋಡುತ್ತೇವೆ. ಇನ್ನೊಬ್ಬರ ಬದುಕಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಪರಿಣಾಮ ಜೀವನದಲ್ಲಿ ಹೆಚ್ಚು ದುಃಖಿಗಳಾಗಿ ಕೊರುಗುತ್ತಿರುತ್ತೇವೆ. ಇದರಿಂದ ಯಾವುದೇ ಫಲ ಸಿಗದೇ ಇದ್ದರೂ ಮನಸ್ಸು ಹಗುರ ಮಾಡಿಕೊಳ್ಳಬಹುದು ಅಷ್ಟೆ. ಸುಮ್ಮನೆ ಜಗಳ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಎಲ್ಲರ ದೃಷ್ಟಿಕೋನವನ್ನು ಅರಿಯುವ ಪ್ರಯತ್ನ ಮಾಡಬೇಕು. ಆಗ ಇನ್ನೊಬ್ಬರ ಮೌನದ ಮಾತುಗಳೂ ನಮಗೆ ಅರ್ಥವಾಗುವುದು. ಬದುಕು ಸುಲಭವಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.