ಸಿಎಂ ಯಡಿಯೂರಪ್ಪ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ: ವಾಟಾಳ್ ನಾಗರಾಜ್
Team Udayavani, Jul 17, 2021, 5:15 PM IST
ಬೆಂಗಳೂರು: ಮೇಕೆದಾಟು ಆರಂಭಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅವರಿಗೆ ಕೇಂದ್ರದ ಯಾವ ನಾಯಕರೂ ಭರವಸೆ ಕೊಟ್ಟಿಲ್ಲ. ಆದರೂ ಯೋಜನೆ ಆರಂಭದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ದುರ್ದೈವ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ವರದಿಯಲ್ಲಿ 2020ರಲ್ಲಿ ಸಲ್ಲಿಸಿದ್ದಾರೆ. ಒಂದು ವರ್ಷವಾದರೂ ಅದರ ಬಗ್ಗೆ ಮಾತನಾಡಿಲ್ಲ. ಈಗ ಅದನ್ನು ಮಾಡಿಯೇ ಮಾಡುತ್ತೇವೆಂದು ಸಿಎಂ ಹೇಳಿದ್ದಾರೆ. ಯಡಿಯೂರಪ್ಪ ಪ್ರಧಾನಿ ಮೋದಿಯನ್ನ ಭೇಟಿ ಮಾಡಿದ್ದರು. ಅವರೂ ಕೂಡ ಯಾವುದೇ ಭರವಸೆ ನೀಡಿಲ್ಲ. ಇದು ಗಂಭೀರವಾದ ವಿಚಾರ. ಅಷ್ಟು ಸುಲಭವಾಗಿ ಮೇಕೆದಾಟು ಆರಂಭಿಸುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ ಎಂದರು.
ಸಿಎಂ ಯಡಿಯೂರಪ್ಪ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಯಾವಾಗ ನೀವು ಮೇಕೆದಾಟು ಆರಂಭ ಮಾಡುತ್ತೀರಿ ಎಂದು ಮೊದಲು ತಿಳಿಸಿ, ಅನಗತ್ಯವಾಗಿ ತಪ್ಪುದಾರಿಗೆ ಎಳೆಯಬೇಡಿ. ಈ ಯೋಜನೆ ಆರಂಭ ಮಾಡುವ ಯಾವ ನಂಬಿಕೆಯೂ ಇಲ್ಲ ಎಂದು ವಾಟಾಳ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ: ಸೋಮವಾರ ದೆಹಲಿಗೆ ತೆರಳಲಿರುವ ವಿಪಕ್ಷ ನಾಯಕ
ಯೋಜನೆಯ ಕುರಿತಾಗಿ ತಮಿಳುನಾಡಿಗೆ ಶರಣಾಗಿ ಪತ್ರ ಬರೆದಿದ್ದು ಯಾಕೆ ? ಪತ್ರದ ಅವಶ್ಯಕತೆ ಏನಿತ್ತು? ಮೋದಿಯವೆನ್ನು ಭೇಟಿ ಮಾಡಿದಾಗ ಮೇಕೆದಾಟು ವಿಚಾರ ಚರ್ಚಿಸದ ಸಿಎಂ ಸುಳ್ಳು ಹೇಳುತ್ತಿದ್ದಾರೆ. ತಮಿಳುನಾಡು ಯಾವುದೇ ಕಾರಣಕ್ಕೂ ಇದನ್ನ ಅಡ್ಡಿ ಮಾಡಲು ಸಾಧ್ಯವಿಲ್ಲ. ಸಿಎಂ ಕೂಡಲೇ ಯೋಜನೆ ಆರಂಭಿಸಬೇಕು. ಶಕ್ತಿ ಇಲ್ಲದೇ ಇದ್ದಲಿ ರಾಜೀನಾಮೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ: ನಾಳೆ ರಾಮನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುತ್ತೇವೆ. ಈ ಮೂಲಕ ಕೇಂದ್ರ ಸರ್ಕಾರ ಹಾಗೂ ತಮಿಳುನಾಡಿಗೆ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕೆಜಿಎಫ್ ಸಂಪೂರ್ಣ ತಮಿಳುನಾಡು ಆಗಿದೆ. ತಮಿಳು ಭಾಷೆಯ ನಾಮಫಲಕಗಳನ್ನು ಕೆಜಿಎಫ್ ನಲ್ಲಿ ತೆರವು ಮಾಡಬೇಕು. ಕೆಜಿಎಫ್ ಗೂ ಮುತ್ತಿಗೆ ಹಾಕುತ್ತೇವೆ. ಕನ್ನಡಪರ ಸಂಘಟನೆಗಳು ನುಗ್ಗಿ ಪ್ರತಿಭಟನೆ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.