![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 17, 2021, 6:27 PM IST
ಸಿಡ್ನಿ :ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳಲ್ಲಿರುವ ಬಹುತೇಕ ಕನ್ನಡ ಸಂಘಗಳ ಸಹಯೋಗ ದೊಂದಿಗೆ ಸಿಡ್ನಿ ಕನ್ನಡ ಸಂಘದ ನೇತೃತ್ವ ದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆನ್‌ಲೈನ್‌ನಲ್ಲಿ ಜೂ. 26ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖಾಂತರ ಆಸ್ಟ್ರೇಲಿಯಾದ ಕನ್ನಡಿಗರಿಗೆ ಉಚಿತ ಯೋಗ ಶಿಬಿರವನ್ನೂ ಉದ್ಘಾಟಿಸ ಲಾಯಿತು.
ಆರು ವಾರಗಳ ಕಾಲ ನಡೆಯಲಿರುವ ಯೋಗ ಶಿಬಿರವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಡಾ| ಭಾಗೀರಥಿ ಕನ್ನಡತಿ ಅವರು ಕರ್ನಾಟಕದಿಂದ ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಹಾಗೂ ಬಿಸಿಸಿಐನ ಭ್ರಷ್ಟಾಚಾರ ನಿಯಂತ್ರಣ ಸಮಿತಿಯ ವಿಭಾಗೀಯ ಮುಖ್ಯಸ್ಥ ಬಿ.ಎನ್. ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ, ಭಾರತ ಇಡೀ ವಿಶ್ವಕೆೆR ಕೊಟ್ಟಿರುವ ಕೊಡುಗೆಯಾದ ಯೋಗ ಕೋವಿಡ್ ಮಹಾಮಾರಿಯನ್ನು ಗೆಲ್ಲುವುದರಲ್ಲಿ ಬಹಳ ಸಹಕಾರಿಯಾಗಿದೆ ಹಾಗೂ ವಿಶ್ವದೆಲ್ಲಡೆ ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿದೆ. ಎಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಒಳೆೆÛಯ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಮಾನಸಿಕ ಸ್ಥೈರ್ಯಕ್ಕೂ ಫಲಕಾರಿ. ಪರದೇಶಕೆೆR ಹೋದರೂ ಕನ್ನಡದ ಭಾಷೆ, ಸಂಸ್ಕೃತಿಯನ್ನು ಬೆಳೆಸುವುದರಲ್ಲಿ ಎಲ್ಲ ಕನ್ನಡ ಸಂಘಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಡಾ| ಭಾಗೀರಥಿಯವರಿಗೂ ಶುಭ ಕೋರಿದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಸಿಡ್ನಿ ಕನ್ನಡ ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಹಲಗಲಿ ಯವರು ಮಾತನಾಡಿ, ಸಿಡ್ನಿ ಕನ್ನಡ ಸಂಘ 40 ವರ್ಷಗಳ ಹಿಂದೆ ಏಷ್ಯಾ ಫೆಸಿಫಿಕ್‌ನಲ್ಲಿ ಪ್ರಾರಂಭವಾದ ಮೊಟ್ಟ ಮೊದಲ ಕನ್ನಡ ಸಂಘಟನೆಯಾಗಿದೆ. ಆಸ್ಟ್ರೇಲಿಯಾದ ಎಲ್ಲ ಕನ್ನಡ ಸಂಘಟನೆಗಳು ಸೇರಿ ಈ ಯೋಗ ದಿನವನ್ನು ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.
ಅನಂತರ ಡಾ| ಭಾಗೀರಥಿ ಕನ್ನಡತಿ ಅವರು ಶಿಬಿರಾರ್ಥಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ 20 ನಿಮಿಷಗಳ ಕಾಲ ಯೋಗದ ತರಬೇತಿಯನ್ನು ನೀಡಿದರು.
ಈ ಕಾರ್ಯಕ್ರಮವನ್ನು ವೀರಶೈವ ಸಮಾಜ ಆಫ್ ಏಷ್ಯಾ ಫೆಸಿಫಿಕ್, ಮೆಲ್ಬೋರ್ನ್ ಕನ್ನಡ ಸಂಘ, ಆಡಿಲೈಡ್ ಕನ್ನಡ ಸಂಘ, ಕರ್ನಾಟಕ ಅಸೋಸಿ ಯೇಶನ್ ಆಫ್ ಕ್ಯಾನ್ಬೆರ್ರ , ವೆಸ್ಟ್ರರ್ನ್ ಆಸ್ಟ್ರೇಲಿಯಾ ಕನ್ನಡ ಸಂಘ, ಸಿಡ್ನಿ ಕನ್ನಡ ವಾಣಿ ಮತ್ತು ಸ್ಯಾಂಡಲ್‌ವುಡ್ ಆರ್ಟ್ಸ್ ಮತ್ತು ಎಂಟಟೈì®ಮೆಂಟ್ಸ್ ಸಹಯೋಗದೊಂದಿಗೆ ಆಯೋಜಿಸ ಲಾಗಿತ್ತು. ಸಿಡ್ನಿ ಕನ್ನಡ ಸಂಘದ ಫೌಂಡರ್ ಮೆಂಬರ್ ಮತ್ತು ವೀರಶೈವ ಸಮಾಜದ ಅಧ್ಯಕ್ಷರಾದ ಡಾ| ಸಿದ್ದಲಿಂಗೇಶ್ವರ ಒರೆಕೊಂಡಿ, ಸಿಡ್ನಿ ಕನ್ನಡ ಸಂಘದ ಫೌಂಡರ್ ಮೆಂಬರ್ ಹಾಗೂ ಮಾಜಿ ಅಧ್ಯಕ್ಷರು ಓಂಕಾರ ಸ್ವಾಮಿ ಗೊಪೆೆ³àನಹಳ್ಳಿ, ಆಡಿಲೈಡ್ ಕನ್ನಡ ಸಂಘದ ಅಧ್ಯಕ್ಷರು ಶಿವಗೌಡ, ಮೆಲ್ಬೋರ್ನ್ ಕನ್ನಡ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಕಾರ್ಯದರ್ಶಿಗಳಾದ ಚಂದ್ರ ಬೆಂಗಳೂರು, ಸಿಡ್ನಿ ಕನ್ನಡ ಸಂಘದ ಪದಾಧಿಕಾರಿಗಳು ಮತ್ತು ಗಣಪತಿ ಭಟ್, ಯುಕೆ ಕನ್ನಡಿಗರು, ಅವರೊಂದಿಗೆ ಆಸ್ಟ್ರೇಲಿಯ, ಯುನೈಟೆಡ್ ಕಿಂಗ್ಡಮ…, ಕತಾರ್ ಮತ್ತು ಭಾರತದಿಂದ ಹಲವಾರು ಕನ್ನಡಿಗರು ಭಾಗವಹಿಸಿದ್ದರು.
ಡಾ| ಭಾಗೀರಥಿಯವರ ವಿಶಿಷ್ಟವಾದ ತರಬೇತಿಯ ಶೈಲಿ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟದ್ದಲ್ಲದೆ ಶಿಬಿರಾರ್ಥಿಗಳಿಗೆ ಇದು ಫೇಸ್ ಟು ಫೇಸ್ ನಡೆದ ಕಾರ್ಯಕ್ರಮದಷ್ಟು ಅನುಭವವನ್ನು ತಂದುಕೊಟ್ಟಿತು. ಯುಕೆಯ ರಾಜೀವ ಮೇತ್ರಿ ಮತ್ತಿತರರು ಭಾಗೀರಥಿ ಅವರು ತರಬೇತಿಯ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ನಿರೂಪಿಸಿದ
ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಭಾಗ್ಯ ಶಂಕರ್ ಅವರು ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕೊರೊನಾ ಮಹಾಮಾರಿಯ ಪರಿಣಾಮವನ್ನು ಅನುಭವಿಸಿದ್ದೇವೆ. ಯೋಗಾಭ್ಯಾಸ ಎಲ್ಲರಿಗೂ ಒಳೆೆÛಯ ಫಲವನ್ನು ದೊರಕಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.