ನಿತ್ಯದ ಬದಕಿನಲ್ಲಿರಲಿ ಯೋಗ: ಜಗದ್ಗುರು ವಚನಾನಂದ ಸ್ವಾಮೀಜಿ


Team Udayavani, Jul 17, 2021, 6:32 PM IST

International Yoga Day

ಲಂಡನ್‌ :ಯೋಗ ಎನ್ನುವುದು ಮನುಷ್ಯ ತನ್ನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಯೋಗಾಸನಗಳನ್ನು ನಾವು ರೂಢಿಸಿ ಕೊಂಡಾಗ ನಮ್ಮ ಮಾನಸಿಕ ನೆಮ್ಮದಿ ದುಪ್ಪಟ್ಟಾಗುತ್ತದೆ. ಯೋಗಾಸನದಲ್ಲಿ 84 ಲಕ್ಷ ಆಸನಗಳಿವೆ. ನಾವು ಆಮೆಯ ತರಹ ಉಸಿರಾಡಲು ಪ್ರಾರಂಭಿಸಬೇಕು. ಆಮೆ 300ರಿಂದ 350 ವರ್ಷಗಳ ಕಾಲ ಜೀವಿಸುತ್ತದೆ ಅದಕ್ಕಾಗಿ ನಾವು ನಿಧಾನವಾಗಿ ಉಸಿರಾಟವನ್ನು ಮಾಡಬೇಕು. ಮನುಷ್ಯನ 72 ಸಾವಿರ ನರನಾಡಿಗಳಿಗೆ ಪ್ರಾಣಾಯಾಮ ಒಂದು ಅತ್ಯುತ್ತಮವಾದ ಆಧಾರವಾಗಿದೆ. ಪ್ರಾಣಾಯಾಮವನ್ನು ನಿತ್ಯವೂ ಮಾಡುವುದರಿಂದ ನಮ್ಮ ದೇಹದಲ್ಲಿ ಪ್ರಜ್ವಲ ಶಕ್ತಿ ಸಂಭವಿಸಿ ಮನಸ್ಸಿಗೆ ಶಾಂತಿ ನೀಡುತ್ತದೆ.ಎತ್ತಣ ಮಾಮರ ಎತ್ತಣ ಕೋಗಿಲೆ… ದೇಶ, ವಿದೇಶಗಳಿಂದ ಸಾಗರೋತ್ತರ ಕನ್ನಡಿಗರು ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಬಹಳ ಮಹತ್ವದ್ದು ಮತ್ತು ಉಪಯುಕ್ತವಾದದ್ದು ಎಂದು ಶ್ವಾಸಗುರು ಎಂದೇ ಪ್ರಖ್ಯಾತರಾದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.

ಅವರು ಜೂ. 27ರಂದು ಸಂಜೆ ಸಾಗರೋತ್ತರ ಕನ್ನಡಿಗರೊಂದಿಗೆ ವರ್ಚುವಲ್‌ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಯೋಗದಲ್ಲಿ ನಾವೆಲ್ಲ ಹೆಮ್ಮೆ ಪಡುವಂತೆ ನಮ್ಮ ಹಿರಿಯ ಕನ್ನಡಿಗರು, ಭಾರತೀಯ ಸಾಧು ಸಂತರು,  ತತ್ತÌಜ್ಞಾನಿಗಳು, ಬಿಕೆಎಸ್‌ ಐಯ್ಯಂಗಾರ್‌, ರವಿಶಂಕರ ಗುರೂಜಿ, ಅಲ್ಲದೇ ನಮ್ಮ ಪ್ರಧಾನ ಮಂತ್ರಿಗಳು ಆದ ನರೇಂದ್ರ ಮೋದಿ ಅವರ ಪ್ರಯತ್ನ ಸಾಕಷ್ಟಿದೆ. ಯೋಗ ಮತ್ತು ಸಂಗೀತದ ದಿನ ಒಂದೇ ಆಗಿರುವುದರಿಂದ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ನೀವೂ ಕೂಡ ಅವುಗಳನ್ನು  ಜೀವನದಲ್ಲಿ ಅಳವಡಿಸಿಕೊಳಬೇಕು. ಯಾವುದೇ ಯೋಗಾಭ್ಯಾಸವನ್ನು  ಮಾಡಿ ಅದು ನಿಮಗೆ ಯೋಗ ತರುತ್ತದೆ. ಯೋಗ ಬರೀ ದೇಹಕ್ಕಲ್ಲ, ಮಾನಸಿಕವಾಗಿಯೂ ಮನುಷ್ಯನನ್ನು ಸದೃಢವನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಅನಂತರ ಸಂವಾದ ಕಾರ್ಯಕ್ರಮದಲ್ಲಿ ದೇಶ ವಿದೇಶದ ಸಾಕಷ್ಟು ಕನ್ನಡಿಗರು ಭಾಗವಹಿಸಿ ವಚನಾನಂದ ಸ್ವಾಮೀಜಿ ಅವರಿಗೆ ಪ್ರಶ್ನೆಗಳು ಕೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ,  ಸಾಗರೋತ್ತರ ಕನ್ನಡಿಗರ ಅತ್ಯಂತ ವಿನೂತನ ವಾದ ಕಾರ್ಯಕ್ರಮ ಇದಾಗಿದ್ದು, ಕನ್ನಡ ನಾಡನಲ್ಲಿ ಹುಟ್ಟಿ ದೇಶ ವಿದೇಶಗಳಲ್ಲಿರುವ ಕನ್ನಡಿಗರಿಗೆ ನಮ್ಮ ಸಾಧಕ ಮಹಾನುಭಾವ ರನ್ನುವ ಕರೆಯಿಸಿ ಅವರ ಮೂಲಕ ಸಾಗರೋತ್ತರ ಕನ್ನಡಿಗರೊಂದಿಗೆ ಪರಿಚಯಿ ಸುವುದು ಬಹಳ ಮಹತ್ವದ್ದಾಗಿದೆ. ಅದೇ ರೀತಿ ನೀವು ಕನ್ನಡಕ್ಕಾಗಿ ಕೈ ಎತ್ತಿ ಅದು ಕಲ್ಪವೃಕ್ಷವಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ದುಬೈನ ಯೋಗ ಶಿಕ್ಷಕಿಯಾದ ಹೆಮ್ಮೆಯ ಕನ್ನಡತಿ  ಭಾಗ್ಯ ಅವರು ಮಾತನಾಡಿ, ಈ ಕಾರ್ಯಕ್ರಮದ ಮೂಲಕ ನಮ್ಮ ಯೋಗ ಕಲೆಯನ್ನು ಗುರುತಿಸಿ ಅದರ ಮೂಲಕ  ನನ್ನನ್ನು ಮತ್ತು ನಮ್ಮ ಮಕ್ಕಳನ್ನು  ಭಾಗವಹಿಸಲು ಆಹ್ವಾನಿಸಿದ್ದು ನನ್ನ ಭಾಗ್ಯ ಎಂದರು.

ಜಗದ್ಗುರು ವಚನಾನಂದ ಸ್ವಾಮಿಜಿಗಳ ಕಿರು ಪರಿಚಯವನ್ನು ಸಂಘಟನ ಕಾರ್ಯದರ್ಶಿಗಳಾದ ಹೇಮೇಗೌಡ ಮಧು ನಡೆಸಿಕೊಟ್ಟರು. ಇಂಗ್ಲೆಂಡ್‌ನಿಂದ ಉಪಾಧ್ಯಕ್ಷರಾದ ಗೋಪಾಲ್‌ ಕುಲಕರ್ಣಿ ಅವರು ಯುರೋಪ್‌ನ ಜನರೊಡನೆ, ಗಲ#… ದೇಶದ ಜನರ ಸಂವಾದ ಕಾರ್ಯಕ್ರಮ ವನ್ನು ಚಂದ್ರಶೇಖರ ಲಿಂಗದಳ್ಳಿ ಅವರು ನಡೆಸಿಕೊಟ್ಟರು.

ನಿರಂತರವಾಗಿ 3 ಗಂಟೆಗಳ ಕಾಲ ನಡೆದ ಸಂವಾದವು  ಸಂಸ್ಥೆಯ ಅಧ್ಯಕ್ಷ ರಾದ ಚಂದ್ರಶೇಖರ ಲಿಂಗದಳ್ಳಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯ ವಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಸಾಗರೋತ್ತರ ಕನ್ನಡಿಗರ ವೇದಿಕೆಯ ಖಜಾಂಚಿಗಳಾದ ಇಂಗ್ಲೆಂಡ್‌ನ‌ ಬಸವ ಪಾಟೀಲರು ನಡೆಸಿಕೊಟ್ಟರು.  ಸೌದಿ ಅರೇಬಿಯಾದಲ್ಲಿ ವಾಸವಾಗಿರುವ ಜಂಟಿ ಕಾರ್ಯದರ್ಶಿಗಳಾದ  ರವಿ ಮಹದೇವ ಅವರು ಎಲ್ಲರನ್ನೂ ಸ್ವಾಗತಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.