ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!


Team Udayavani, Jul 18, 2021, 7:58 PM IST

18-11

ಮನಸ್ಸು ಎಂದರೆ ಗ್ರಹಿಕೆ, ಯೋಚನೆ, ವಿವೇಚನೆ  ಶಕ್ತಿಗಳ ಸಮೂಹ. ನಮಗೆ ಅರಿವಾಗದಂತೆಯೇ ನಮ್ಮ ಮನಸ್ಸು ಒಮ್ಮೊಮ್ಮೆ ಹತೋಟಿ ತಪ್ಪುತ್ತಿರುತ್ತದೆ. ನಮ್ಮ ಆಲೋಚನೆಗಳನ್ನು ಎಲ್ಲೋ ಸೆಳೆದೊಯ್ಯೊತ್ತದೆ. ಕೆಲವು ಸಂದರ್ಭಗಳಲ್ಲಿ ಈ ಆಲೋಚನೆಗಳೂ ಸ್ಥಿರವಾಗಿ ಇರುವುದಿಲ್ಲ. ಮನಸ್ಸು ಚಂಚಲ.  ಎಲ್ಲವೂ ಸಂಶಯಮಯವೆನಿಸುತ್ತದೆ. ಒಮ್ಮೊಮ್ಮೆ ಮನಸ್ಸು ಗೊಂದಲ ಹಾಗೂ ಚಂಚಲಗಳಿಂದಲೇ ಕೂಡಿ ಇರುತ್ತದೆ ಅನ್ನಿಸುತ್ತದೆ.  ನಮ್ಮಲ್ಲೊಂದು ಅಂತರ್ಗತ ಪ್ರಪಂಚವಿದೆ. ಕಾಲ, ಸ್ಥಿತಿ, ಸಂಬಂದಗಳನ್ನು ಆಧರಿಸಿ ಮನಸ್ಸಿನ ಅಂತರಂಗ ಸಹಜವಾಗಿ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುತ್ತಿರುತ್ತದೆ.

ಕೋಪ, ಪ್ರೇಮ, ದ್ವೇಷ, ಭಯ, ದುಃಖ, ಕಳವಳ, ಅಭದ್ರತಾಭಾವನೆ ಇವೆಲ್ಲವೂ ಹುಟ್ಟಿಕೊಳ್ಳಲು ನಮ್ಮ ಮನಸ್ಸಿನ ಅಂತರಂಗದಲ್ಲಿ ಆಗುವ ಬದಲಾವಣೆಗಳೇ ಕಾರಣ. ಅದರಿಂದಾಗಿ ನಮ್ಮ ಅಂತರಂಗವು ಒಮ್ಮೊಮ್ಮೆ ಕಳವಳಕಾರಿಯ ರೀತಿಯಲ್ಲಿರುತ್ತದೆ. ಈ ಭಾವನೆ ಮತ್ತು ವಿಪರೀತವೆನಿಸುವ ಲಕ್ಷಣಗಳನ್ನು ಸಹಜ ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವ ನೈಪುಣ್ಯತೆ ವರ್ತಮಾನ ಪ್ರಪಂಚಕ್ಕೆ ತುಂಬಾ ಅವಶ್ಯಕ. ನಾವು ಸದಾ ಅಂತರಂಗದತ್ತ ದೃಷ್ಟಿ ಹಾಯಿಸಬೇಕು. ನಮಗೆ ನಾವೇ ಮಥಿಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಸಕಾರಾತ್ಮಕ ಧೋರಣೆಯಲ್ಲಿ ನಮ್ಮ ಆಲೋಚನೆಗಳು ಸಾಗಬೇಕು. ಜೀವನದ ಬಗೆಗಿನ ಅಭದ್ರತಾ ಭಾವನೆಯನ್ನು ದೂರಮಾಡುವ ಕುರಿತಾದ ಮಾರ್ಗಗಳನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಆರ್ ಅಶೋಕ್

ಜೀವನದ ಕೆಲವು ಘಟ್ಟಗಳಲ್ಲಿ ನಾವು ನಮ್ಮ ಶಿಕ್ಷಣ, ನಮ್ಮ ಕೆರಿಯರ್, ಉದ್ಯೋಗ, ಸಂಬಂಧ, ಅನುಬಂಧ, ಇಂತಹ ವಿಷಯಗಳ ಕುರಿತಾಗಿ ಅಭದ್ರತೆಗೆ ಒಳಗಾಗುದುಂಟು. ನಿರೀಕ್ಷಿಸಿದ್ದು ಕೈ ಸೇರಲಿಲ್ಲ, ಸಂಬಂಧಗಳು ಕಡಿದು ಹೋಗುತ್ತಿವೆಯೇನೋ…. ಇಂತಹ  ಭೀತಿ ಭ್ರಾಂತಿಗೊಳಗಾಗುತ್ತೇವೆ.

ಇದೊಂದು ಸಹಜ ಪ್ರಕ್ರಿಯೆ ಎಂಬುದು ನಿಪುಣರ ಅನಿಸಿಕೆಯಾಗಿದೆ. ಆದರೆ ವಿಚಿತ್ರವೆಂದರೆ ಯಾವುದೇ ಭಯ, ಕಳವಳ ಇಲ್ಲದೆ ಸಹಜವಾಗಿ ಸಾಗುತ್ತಿರುವ ಸಂದರ್ಭಗಳಲ್ಲೇ ನಾವು ಅಭದ್ರತೆಯ ಭಾವದಿಂದ ವ್ಯಾಕುಲರಾಗಿರುತ್ತೇವೆ. ಏನೇನನ್ನೋ ಊಹಿಸಿಕೊಳ್ಳುತ್ತೇವೆ.

ನಿಜವಾಗಿಯೂ ಅಭದ್ರತೆಗೆ ಕಾರಣವಾಗುವ ವಿಷಯಗಳ ಬಗ್ಗೆ ಸ್ಪಂದಿಸುವುದಿಲ್ಲ. ಅಭದ್ರತೆಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಅನಗತ್ಯವಾಗಿ ಕಾಡುವ ಅನುಮಾನಗಳು, ಹಲವು ಸಂದರ್ಭಗಳಲ್ಲಿ ಮಿತಿ ಮೀರುತ್ತವೆ. ನಿಮಗಿಷ್ಟವಾದವರು ನಿಮ್ಮಿಂದ ದೂರವಾಗಿ ಮತ್ಯಾರನ್ನೋ ಪ್ರೇಮಿಸುತ್ತಿದ್ದಾರೆಂದು, ಅವರ ಬೆನ್ನಹಿಂದೆ ಸುತ್ತುತ್ತಿದ್ದಾರೆಂದು, ನಿಮಗಿಂತಲೂ ಸಮರ್ಥನಾದ ವ್ಯಕ್ತಿಯಹುಡುಕಾಟದಲ್ಲಿದ್ದಾರೆಂದು, ನಿಮ್ಮ ಸ್ಥಾನದಲ್ಲಿ ಇನ್ನೋಬ್ಬರಿಗೆ ಅವಕಾಶ ಕೊಡುತ್ತಾರೇನೋ ಎಂಬಂತಹ ಸಂಗತಿಗಳು ನಿಮ್ಮಲ್ಲಿನ ಅಭದ್ರತೆಯ ಭಾವವನ್ನು ಪುಟಿದೆಬ್ಬಿಸುತ್ತದೆ.

ಅಭದ್ರತೆ ಎಂಬುದು ಒಂದು ಭಾವೋದ್ವೇಗದ ಅಲಾರಂ. ಗಡಿಯಾರದಂತೆ. ಸ್ನೇಹಿತರು ಅತಿ ಕಡಿಮೆ ಸಮಯವನ್ನು ನಿಮ್ಮೊಂದಿಗೆ ಕಳೆದಾಗ, ಅಕ್ಕ ಪಕ್ಕದ ಸಹೋದ್ಯೋಗಿಗಳು ನಿಮಗಿಂತಲೂ ಎಲ್ಲ ವಿಧದಲ್ಲೂ ಚೆನ್ನಾಗಿದ್ದರೂ ನಿಮ್ಮಲ್ಲಿನ ಈ ಗಡಿಯಾರವು ಅತ್ತಿಂದಿತ್ತ ಚಲಿಸಲು ಪ್ರಾರಂಭಿಸುತ್ತದೆ.

ಇತಂಹ ಅಭದ್ರತಾ ಭಾವವು ಮನೆ ಮಾಡಿಕೊಳ್ಳಲಿಕ್ಕೆ, ಅದು ಇನ್ನಷ್ಟು ವೃದ್ಧಿಯಾಗಲು ಆತ್ಮವಿಶ್ವಾಸದ ಕೊರತೆಯೇ ಪ್ರಮುಖ ಕಾರಣವಾಗಿರುತ್ತದೆ. ಜೀವನವೆಂದರೆ ಅಭದ್ರತೆಯಿಂದ ಬದುಕುವುದಲ್ಲ. ಸದಾ ನಮ್ಮ ಅಂತರಂಗದ ಮಥನ ಮಾಡಿ ಕೊಳ್ಳಬೇಕು. ನಾವು ಆಳವಾಗಿ ದೃಷ್ಟಿಹಾಯಿಸಿದರೆ ಪ್ರತಿಯೊಂದು ಆನಂದದ ಹಿಂದೆ ಒಂದು ವಿಷಾದ, ಪ್ರತಿಯೊಂದು ವಿಷಾದದ ಪಕ್ಕದಲ್ಲೇ ಒಂದು ಆನಂದ ಇರುತ್ತದೆ. ಇದು ನಿಜವಾದ ಜೀವನ ಎಂಬುದರ ಅರಿವು ಇರಲಿ.

                                                                       ಪ್ರಥ್ವಿನಿ ಡಿಸೋಜ, ಅಲಂಗಾರ್

ಆಳ್ವಾಸ್ ಕಾಲೇಜು, ಮೂಡುಬಿದಿರೆ

ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಆರ್ ಅಶೋಕ್

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.