ಮುಂಬಯಿಯಲ್ಲಿ ದೇಶದ ಅತೀ ದೊಡ್ಡ ಚಾರ್ಜಿಂಗ್ ಲಾಟ್!
ಪವರ್ ಬ್ಯಾಕ್‌ಅಪ್‌ಗಾಗಿ 40 ಕಿಲೋ ವ್ಯಾಟ್ ವಿದ್ಯುತ್ ಔಟ್‌ಪುಟ್ ನೀಡುವ ಡೀಸೆಲ್ ಜನರೇಟರ್ ಅಳವಡಿಸಲಾಗಿದೆ.
Team Udayavani, Jul 19, 2021, 1:30 PM IST
ಮುಂಬಯಿ: ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ವಿದ್ಯುತ್ ವಾಹನಗಳ ಹೊಸ ಶಕೆ ಆರಂಭಗೊಳ್ಳಲಿದೆ. ಇದನ್ನು ಮನಗಂಡು, ಮುಂಬಯಿ ಮೂಲದ ಮಂಗೇತಾ ಕಂಪೆನಿ, ನವೀ ಮುಂಬಯಿಯಲ್ಲಿ ದೇಶ ದಲ್ಲೇ ಅತೀ ದೊಡ್ಡದಾದ, ಎಲೆಕ್ಟ್ರಿಕ್ ವಾಹನಗಳ ವಿದ್ಯುತ್ ಚಾರ್ಜಿಂಗ್ ಕೇಂದ್ರವನ್ನು ತೆರೆದಿದೆ. ಪಾರ್ಕಿಂಗ್ ಲಾಟ್ ಮಾದರಿಯಲ್ಲಿರುವ “ಚಾರ್ಜಿಂಗ್ ಲಾಟ್’ ಬಗ್ಗೆ ಇಲ್ಲಿದೆ ಸಂಕಿಪ್ತ ಮಾಹಿತಿ.
ಸೌಲಭ್ಯಗಳೇನು?
21 ಚಾರ್ಜಿಂಗ್ ಪಾಯಿಂಟ್‌ಗಳು ಇಲ್ಲಿದ್ದು, ಇದರಲ್ಲಿ 4 ಡಿ.ಸಿ. ಚಾರ್ಜರ್ ಗಳಾಗಿದ್ದು ಪ್ರತಿಯೊಂದು 5 ಕಿಲೋ ವ್ಯಾಟ್‌ನಿಂದ 50 ಕಿ.ವ್ಯಾ. ಸಾಮರ್ಥ್ಯ ವುಳ್ಳವು. ಪೂರ್ತಿ ಡಿಸಾcರ್ಜ್ ಆಗಿದ್ದ ಬ್ಯಾಟರಿಯನ್ನು ಶೂನ್ಯದಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕೇವಲ 45 ನಿಮಿಷಗಳು ಸಾಕು. ಉಳಿದವು ಎ.ಸಿ. (ಅಲ್ಟರ್‌ನೆಟ್ ಕರೆಂಟ್) ಚಾರ್ಜರ್ ಗಳಾಗಿದ್ದು ಪ್ರತೀ ಚಾರ್ಜರ್ 3.5 ಕಿ.ವ್ಯಾಟ್‌ನಿಂದ 7.5 ಕಿ.ವ್ಯಾಟ್ ವರೆಗಿನವು. ಒಂದು ಕಾರಿನ ಬ್ಯಾಟರಿ ಚಾರ್ಜ್‌ಗೆ ಒಂದು ರಾತ್ರಿ ಪೂರ್ತಿ ಬೇಕಾಗುತ್ತದೆ.
ಆ್ಯಪ್ ಸೌಲಭ್ಯ
ಗ್ರಾಹಕರಿಗಾಗಿ “ಚಾರ್ಜ್ ಗ್ರಿಡ್’ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಚಾರ್ಜಿಂಗ್ ಸೌಲಭ್ಯ ಪಡೆಯುವ ಗ್ರಾಹಕರು, ಅದನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ವಾಹನಗಳ ಚಾರ್ಜಿಂಗ್ ಬಗ್ಗೆ ಮಾಹಿತಿ ಪಡೆಯಬಹುದು.
ಬದಲಿ ಸೌಕರ್ಯ
ಸರಕಾರದಿಂದ ವಿತರಿಸಲಾಗುವ ವಿದ್ಯುತ್‌ನಿಂದಲೇ ಈ ಚಾರ್ಜಿಂಗ್ ಲಾಟ್ ಕಾರ್ಯನಿರ್ವಹಿಸುತ್ತದೆ. ವಿದ್ಯುತ್ ನಿಲುಗಡೆ ಮುಂತಾದ ಸಮಸ್ಯೆ ಗಳಾದ ಪವರ್ ಬ್ಯಾಕ್‌ಅಪ್‌ಗಾಗಿ 40 ಕಿಲೋ ವ್ಯಾಟ್ ವಿದ್ಯುತ್ ಔಟ್‌ಪುಟ್ ನೀಡುವ ಡೀಸೆಲ್ ಜನರೇಟರ್ ಅಳವಡಿಸಲಾಗಿದೆ.
ಯಾವ ವಾಹನಗಳಿಗೆ ಸೂಕ್ತ?
ದ್ವಿಚಕ್ರ ವಾಹನಗಳು
ತ್ರಿಚಕ್ರ ವಾಹನಗಳು
ನಾಲ್ಕು ಚಕ್ರಗಳ ವಾಹನಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.