ಜಮೀನಿಗೆ ನುಗ್ಗಿದ ಎಚ್.ಎನ್. ವ್ಯಾಲಿ ನೀರು
Team Udayavani, Jul 19, 2021, 8:42 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದಮಳೆಯಿಂದ ಜನ ತತ್ತರಿಸಿದ್ದು, ತಗ್ಗು ಪ್ರದೇಶಗಳುಜಲಾವೃತಗೊಂಡು, ತೋಟಗಳಿಗೆ ಎಚ್.ಎನ್.ವ್ಯಾಲಿನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನಿರ್ಲಕ್ಷ ದಿಂದ ಕೆರೆಗಳಿಗೆ ಹರಿಯಬೇಕಾದ ಹೆಬ್ಟಾಳ-ನಾಗವಾರ ಸಂಸ್ಕರಿತಕೊಳಚೆ ನೀರು ರೈತರಜಮೀನಿಗೆನುಗ್ಗಿ, ತರಕಾರಿ, ಹೂ, ಹಣ್ಣಿನ ಬೆಳೆ ನಾಶವಾಗಿ, ರೈತರುಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.
ಕಾಲುವೆ ನೀರು ಜಮೀನಿಗೆ: ತಾಲೂಕಿನ ಚಲಕಾಯಲಪರ್ತಿ ಗ್ರಾಮದ ರೈತರ ತೋಟಗಳಿಗೆಎಚ್.ಎನ್. ವ್ಯಾಲಿ ನೀರು ನುಗ್ಗಿರುವ ಪರಿಣಾಮಟೊಮೆಟೋ, ದ್ರಾಕ್ಷಿ, ಗುಲಾಬಿ ಹೂವಿನ ಬೆಳೆಜಲಾವೃತಗೊಂಡು, ಕೈಗೆ ಬಂದ ತುತ್ತು ಬಾಯಿಗೆಬರದ ಸ್ಥಿತಿ ನಿರ್ಮಾಣವಾಗಿದೆ. ಕಾಲುವೆಗಳುಮುಚ್ಚಿಹೋಗಿದ್ದರಿಂದ ನೀರು ತೋಟಗಳಿಗೆ ಹರಿದಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ವಿರುದ್ಧ ಕಿಡಿ: ಜಿಲ್ಲಾ ಕೇಂದ್ರದಕಂದವಾರಕೆರೆಗೆ ವ್ಯಾಲಿ ನೀರು ಹರಿದಿದೆ.ಕೆರೆ ಶನಿವಾರರಾತ್ರಿ ಸುರಿದ ಮಳೆಯಿಂದ ಕೋಡಿ ಬೀಳುವ ಅಂಚಿಗೆತಲುಪಿದೆ. ಇದರಿಂದ ಕಾಲುವೆ ಮೂಲಕ ಬೇರೆಕೆರೆಗಳಿಗೆ ನೀರು ಹರಿಯದೆ ಸುತಮ ¤ ುತ್ತಲಿನತೋಟಗಳಿಗೆ ನುಗ್ಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆನಾಶವಾಗಿದೆ. ರೈತರು ಸಣ್ಣ ನೀರಾವರಿ ಇಲಾಖೆಯಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.