ಇಂದು ದ್ವಿತೀಯ ಏಕದಿನ : ಸರಣಿ ಸವಾರಿಗೆ ಸಜ್ಜಾಗಿದೆ ಯಂಗ್ ಇಂಡಿಯಾ
Team Udayavani, Jul 20, 2021, 7:10 AM IST
ಕೊಲಂಬೊ: ಭಾರತೀಯ ಕ್ರಿಕೆಟಿನ ಮೀಸಲು ಸಾಮರ್ಥ್ಯವೇನು, ಲಂಕೆಯ ಪ್ರಧಾನ ತಂಡದ ಬಲ ಎಷ್ಟು ಎಂಬುದು ರವಿವಾರ ಒಂದು ಹಂತದಲ್ಲಿ ಸಾಬೀತಾಗಿದೆ. ಇತ್ತಂಡಗಳ ನಡುವೆ ಮಂಗಳವಾರ ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಭಾರತವೇ ನೆಚ್ಚಿನ ತಂಡವಾಗಿ ಗೋಚರಿಸಿದೆ. “ಯಂಗ್ ಇಂಡಿಯಾ’ ಎಂದೇ ಗುರುತಿಸಲ್ಪಡುವ ದ್ರಾವಿಡ್ ಮಾರ್ಗದರ್ಶನದ ಧವನ್ ಬಳಗ ಸರಣಿ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಆತಿಥೇಯರ ಮೇಲೆ ಒತ್ತಡ ತೀವ್ರಗೊಂಡಿದೆ.
ಕೊಲಂಬೋದ “ಆರ್. ಪ್ರೇಮದಾಸ ಸ್ಟೇಡಿಯಂ’ ಬ್ಯಾಟಿಂಗಿಗೆ ಹೆಸರುವಾಸಿ. ತಿರುವು ಪಡೆಯುವು ದರಿಂದ ಸ್ಪಿನ್ ಸ್ನೇಹಿಯೂ ಹೌದು. ಈ ಎರಡೂ ಅಂಶಗಳನ್ನು ಭಾರತ ಮೊದಲ ಪಂದ್ಯದಲ್ಲಿ ಸಾಬೀತುಪಡಿಸಿದೆ. ಬಹುಶಃ ಮಂಗಳವಾರ ಇದರ ಮುಂದುವರಿದ ಭಾಗವನ್ನು ಕಾಣಲಿಕ್ಕಿದೆ.
ಮೀಸಲು ಸಾಮರ್ಥ್ಯ ಸಾಬೀತು
ಭಾರತ ಮೊದಲ ಪಂದ್ಯದಲ್ಲಿ ಸರ್ವಾಂಗೀಣ ಪ್ರದ ರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಲಂಕೆ ಯನ್ನು 250ರ ಗಡಿಯೊಳಗೆ ನಿಲ್ಲಿಸಬಹುದಿತ್ತು ಎಂದೆನಿಸಿದರೂ ಬಹಳ ಬೇಗ ಚೇಸಿಂಗ್ ಮುಗಿಸಿ ಇದೇನೂ ಸವಾಲಿನ ಮೊತ್ತವಲ್ಲ ಎಂಬುದನ್ನು ಸಾಬೀತುಪಡಿಸಿತು.
ಮುನ್ನುಗ್ಗಿ ಬೀಸುವ ಛಾತಿಯ ಪೃಥ್ವಿ ಶಾ, ಚೊಚ್ಚಲ ಪಂದ್ಯದಲ್ಲೇ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ ರವಿವಾರದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾಗಿ ಮೂಡಿಬಂದಿದ್ದರು. ಇಬ್ಬರೂ ಐಪಿಎಲ್ ಮೂಡ್‌ನಲ್ಲಿದ್ದಂತಿತ್ತು! ಹಾಗೆಯೇ ಮೊದಲ ಸಲ ಭಾರತ ತಂಡವನ್ನು ಮುನ್ನಡೆಸಿದ ಶಿಖರ್ ಧವನ್ ಇದನ್ನು ಬಹಳ ಶಾಂತ ರೀತಿಯಲ್ಲಿ ನಿಭಾಯಿಸಿದರು. ಬ್ಯಾಟಿಂಗ್‌ನಲ್ಲೂ ಹೆಚ್ಚು ಪ್ರಬುದ್ಧರಾದಂತಿತ್ತು. ತಾನು ಆಡುವ ಜತೆಗೆ ಜತೆಗಾರರನ್ನೂ ಆಡಿಸಿ ಅಜೇಯರಾಗಿ ಉಳಿದರು. ಇದು ದ್ರಾವಿಡ್ ಪಾಠ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ!
ಭಾರತದ ಬೌಲಿಂಗ್ ವಿಭಾಗ ಭರವಸೆಯ ಪ್ರದರ್ಶನವನ್ನೇ ನೀಡಿದೆ. ಚಹಲ್, ಕುಲದೀಪ್ ಅವರನ್ನೊಳಗೊಂಡ ತ್ರಿವಳಿ ಸ್ಪಿನ್ ದಾಳಿ ಸಾಕಷ್ಟು ಹರಿತವಾಗಿಯೇ ಇತ್ತು. ಆದರೆ ಭುವನೇಶ್ವರ್‌ಗೆ ಏನಾಗಿದೆ ಎಂಬುದು ಯೋಚಿಸಬೇಕಾದ ಪ್ರಶ್ನೆ!
ಸರಣಿ ಸಮಬಲ ಸುಲಭವಲ್ಲ
80ರ ದಶಕದ ತನ್ನ ಅಂತಾರಾಷ್ಟ್ರೀಯ ಕ್ರಿಕೆಟಿನ ಆರಂಭಿಕ ದಿನಗಳಲ್ಲಿ, 1996ರ ವಿಶ್ವಕಪ್ ಕಾಲದಲ್ಲಿ, ಬಳಿಕ ಮುರಳಿ-ಜಯವರ್ಧನ-ಸಂಗಕ್ಕರ ಜಮಾ ನಾದಲ್ಲಿ ವಿಶ್ವದ ಅತ್ಯಂತ ಬಲಿಷ್ಠ ತಂಡವಾಗಿದ್ದ ಶ್ರೀಲಂಕಾ ಈಗ ಆ ಚಾರ್ಮ್ ಸಂಪೂರ್ಣ ಕಳೆದುಕೊಂಡಿದೆ. ಸೋಲು ಸರಾಗವಾಗಿ ಈ ತಂಡದ ಮೇಲೆ ಸವಾರಿ ಮಾಡುತ್ತಿದೆ. ಕಳೆದ ಕೆಲವು ಸರಣಿಗಳಲ್ಲಿ ಇದು ನಿಚ್ಚಳವಾಗುತ್ತ ಬಂದಿದೆ. ಭಾರತದೆದುರಿನ ಸರಣಿ ಇದಕ್ಕೊಂದು ಹೊಸ ಸೇರ್ಪಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಸರಣಿಯನ್ನು ಸಮಬಲಕ್ಕೆ ತರುವುದು ಲಂಕೆಗೆ ಅಷ್ಟು ಸುಲಭವಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.