ಕ್ಷುಲ್ಲಕ ರಾಜಕೀಯಕ್ಕೆ ಸಂಸತ್ ಕಲಾಪ ಬಲಿಯಾಗದಿರಲಿ
Team Udayavani, Jul 20, 2021, 6:45 AM IST
ದೇಶ ಒಂದು ಕಡೆಯಲ್ಲಿ ಕೊರೊನಾ ಕಷ್ಟ ಅನುಭವಿಸುತ್ತಿದೆ. ಮತ್ತೂಂದು ಕಡೆ ದೇಶಾದ್ಯಂತ ವರುಣನ ರುದ್ರ ನರ್ತನವೇ ಆಗುತ್ತಿದೆ. ಈ ಎರಡೂ ಸಂಕಷ್ಟಗಳ ಮಧ್ಯೆ ಸೋಮವಾರವಷ್ಟೇ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಕಲಾಪ ಗದ್ದಲಕ್ಕೆ ಬಲಿಯಾಗಿದೆ.
ಪ್ರತೀ ಬಾರಿಯೂ ಸಂಸತ್ ಕಲಾಪಕ್ಕೆ ಒಂದಿಲ್ಲೊಂದು ಘಟನೆಗಳು ಅಡ್ಡಿಯಾಗುತ್ತಲೇ ಇವೆ. ಈ ಮೂಲಕ ಕಲಾಪ ಫಲಪ್ರದವಾಗಿ ನಡೆಯಲು ಸಾಧ್ಯವಾಗುತ್ತಲೇ ಇಲ್ಲ. ಇಲ್ಲಿ ರಾಜಕಾರಣಿಗಳು ತಮ್ಮ ರಾಜಕಾರಣಕ್ಕಿಂತ ಜನರ ಹಿತಾಸಕ್ತಿಗೆ ಹೆಚ್ಚಿನ ಬೆಲೆ ಕೊಡದಿರುವುದೇ ಇದಕ್ಕೆ ಕಾರಣ.
ಕಲಾಪದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಸಚಿವರ ಪರಿಚಯ ಮಾಡಿಕೊಡುತ್ತಿದ್ದರು. ಆದರೆ ವಿಪಕ್ಷಗಳು ಇದಕ್ಕೆ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ಮೊದಲ ದಿನದ ಕಲಾಪ ಆಹುತಿಯಾಯಿತು. ಸಂಸತ್‌ನ ಸಂಪ್ರದಾಯಕ್ಕೆ ಅನುಗುಣವಾಗಿ ಪ್ರಧಾನಿಗಳು, ನೂತನ ಸಚಿವರನ್ನು ಸದನಕ್ಕೆ ಪರಿಚಯ ಮಾಡಿಕೊಡುವುದು ಸಾಮಾನ್ಯ. ಆದರೆ ಇದಕ್ಕೂ ಅವಕಾಶ ಮಾಡಿಕೊಡದೆ ಸದನಕ್ಕೆ ಅಡ್ಡಿಪಡಿಸಿರುವುದು ಸತ್ಸಂಪ್ರದಾಯವಲ್ಲ.
ಇದಕ್ಕೆ ಮಿಗಿಲಾಗಿ ಈ ಬಾರಿಯ ಸಂಸತ್ ಅಧಿವೇಶನದ ವೇಳೆ ವಿಪಕ್ಷಗಳು ಮತ್ತು ಸರಕಾರ ಒಟ್ಟಿಗೆ ಕುಳಿತು ಕೊರೊನಾ ಸಂಕಷ್ಟದ ಬಗ್ಗೆ ಚರ್ಚೆ ಮಾಡಲೇಬೇಕು. ಈ ವಿಚಾರದಲ್ಲಿ ಗದ್ದಲ ಎಬ್ಬಿಸುವುದಕ್ಕಿಂತ ಈಗ ಏನಾಗಿದೆ. ಮುಂದೇನಾಗಬೇಕು ಎಂಬ ಬಗ್ಗೆ ಚರ್ಚೆಯಾಗಬೇಕು. ಕೊರೊನಾ 2ನೇ ಅಲೆ ವೇಳೆ ದೇಶಾದ್ಯಂತ ಹಾಸಿಗೆ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಹೆಚ್ಚಾಗಿಯೇ ಕಾಣಿಸಿಕೊಂಡಿತ್ತು. ಸದ್ಯದಲ್ಲೇ ಮೂರನೇ ಅಲೆ ಬರಲಿದೆ ಎಂಬ ಆತಂಕದ ಭವಿಷ್ಯವಾಣಿ ಇದೆ. ಹೀಗಾಗಿ ಈ ಕಲಾಪದ ವೇಳೆ ಚರ್ಚಿಸಿ, ಇದಕ್ಕೊಂದು ಪರಿಹಾರ ಕಾಣಬೇಕು. ಇದರಿಂದ ಬಿಜೆಪಿ, ಕಾಂಗ್ರೆಸ್ ಅಷ್ಟೇ ಅಲ್ಲ, ಇತರ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂಬುದನ್ನು ಮನಗಾಣಬೇಕು.
ಇನ್ನು ಈಗಷ್ಟೇ ಮುಂಗಾರು ಮಳೆ ಇಡೀ ದೇಶಕ್ಕೆ ವ್ಯಾಪಿಸಿದೆ. ಇಂಥ ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುವುದುಂಟು. ಇದರ ಬಗ್ಗೆಯೂ ಸಂಸತ್ ನಲ್ಲಿ ಚರ್ಚೆಯಾಗಬೇಕು. ಹಾಗೆಯೇ ಕಳೆದ ನವೆಂಬರ್-ಡಿಸೆಂಬರ್ ನಿಂದಲೂ ರೈತರು ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿಕೊಂಡು ಬರುತ್ತಲೇ ಇದ್ದಾರೆ. ಇವರ ಬಳಿ ಚರ್ಚಿಸಿ, ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲು ಕೇಂದ್ರ ಸರಕಾರ ಮುಂದಾಗಬೇಕು. ಏಕೆಂದರೆ ಈ ಅಧಿವೇಶನದ ವೇಳೆ, ದಿನವೂ ಸಂಸತ್ ಭವನದ ಬಳಿಗೆ ಬಂದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಇವರ ಸಮಸ್ಯೆಯನ್ನು ಕೇಳಿ ಅದನ್ನು ಬಗೆಹರಿಸಿದರೆ ಉತ್ತಮ.
ಇದರ ಜತೆಯೇ ದಿನದಿಂದ ದಿನಕ್ಕೆ ತೈಲೋತ್ಪನ್ನ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳ ದರವೂ ಹೆಚ್ಚಾಗಿದೆ. ಈ ಸಂಬಂಧವೂ ವಿಪಕ್ಷಗಳು ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದರೆ ಉತ್ತಮ. ಏನೇ ಆಗಲಿ, ಸಂಸತ್ ಕಲಾಪ ಸುಖಾಸುಮ್ಮನೆ ವ್ಯರ್ಥವಾಯಿತು ಎಂದು ಕಡೆಗೆ ಅಂದುಕೊಳ್ಳುವುದು ಬೇಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.