ಪತ್ನಿ, ಮಗನೆದುರೇ ರೌಡಿಶೀಟರ್ ಬರ್ಬರ ಹತ್ಯೆ
Team Udayavani, Jul 20, 2021, 9:24 AM IST
ಬೆಂಗಳೂರು: ನಗರದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಎಂಟು ಮಂದಿ ದುಷ್ಕರ್ಮಿಗಳು ಹಳೇ ದ್ವೇಷಕ್ಕೆ ಹಾಡಹಗಲೇ ಪತ್ನಿ, ಮಗನ ಎದುರೇ ರೌಡಿಯೊಬ್ಬನನ್ನು ಅಟ್ಟಾಡಿಸಿಕೊಂಡು ಬ್ಯಾಂಕ್ ವೊಂದರಲ್ಲಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕೋರಮಂಗಲ ನಿವಾಸಿ ಜೋಸೆಫ್ ಅಲಿಯಾಸ್ ಬಬ್ಲಿ(40) ಕೊಲೆಯಾದ ರೌಡಿಶೀಟರ್. ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ನಾಲ್ವರು ಶಂಕಿತ ರನ್ನು ಕೋರಮಂಗಲ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಆಡುಗೋಡಿ ಠಾಣೆಯ ರೌಡಿ ಶೀಟರ್ ಆಗಿರುವ ಬಬ್ಲಿ ಸೋಮ ವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಪತ್ನಿ, ಮಗನ ಜತೆ ಕೋರಮಂಗಲದ 8ನೇಬ್ಲಾಕ್‌ನಲ್ಲಿನಯೂನಿಯನ್ ಬ್ಯಾಂಕ್ ಶಾಖೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಎಂಟು ಮಂದಿ ಮುಸುಕುಧಾರಿಗಳು ಹಿಂಬಾಲಿಸುತ್ತಿರುವುದನ್ನು ಅರಿತ ಬಬ್ಲಿ, ವೇಗವಾಗಿ ಹೋಗಿ ಬ್ಯಾಂಕ್ ಮುಂದೆ ವಾಹನ ನಿಲ್ಲಿಸಿ ಬ್ಯಾಂಕ್‌ನೊಳಗೆ ಓಡಿದಿ ದ್ದಾನೆ. ಆದರೂ ಬಿಡದ ಆರೋಪಿಗಳು ಬ್ಯಾಂಕ್‌ನಮ್ಯಾನೇಜರ್ ಕೊಠಡಿಗೆ ನುಗ್ಗಿದ ಬಬ್ಲಿ ಮೇಲೆ ಮಾರ ಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು.
ಆಗ ಪತ್ನಿ ಪತಿಯ ನೆರವಿಗೆ ಧಾವಿಸಿದರೂ ಬಿಡದಆರೋಪಿಗಳು, ಆಕೆಯನ್ನು ಕೊಠಡಿಯಿಂದ ಹೊರ ದಬ್ಬಿ ಬರ್ಬರವಾಗಿ ಹತ್ಯೆಗೈದು, ಸಾರ್ವಜನಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಪರಾರಿಯಾಗಿದ್ದಾರೆ. ಈಘಟನೆ ವೇಳೆ ಬಬ್ಲಿ ಪತ್ನಿಯ ಕೈ ಬೆರಳುಗಳು ತುಂಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮುಖಕ್ಕೆ ಬಟ್ಟೆ ಕಟ್ಟಿದ್ದರು: ಹಂತಕರು ಮುಖ ಚಹರೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಹತ್ಯೆ ಮಾಡಿದ್ದಾರೆ. ಬ್ಯಾಂಕ್ ಒಳಗೆ ಹಾಗೂ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳು ಬಂದಿದ್ದ ಬೈಕ್‌ಗಳ ನಂಬರ್ ಪತ್ತೆ ಹಚ್ಚಲಾಗುತ್ತಿದೆ. ಅನುಮಾನದ ಮೇರೆಗೆ ನಾಲ್ವರನ್ನು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಹಳೇ ದ್ವೇಷವೇ ಕಾರಣ: ಆಡುಗೋಡಿಯ ರೌಡಿಶೀಟರ್ ಆಗಿರುವ ಬಬ್ಲಿ ಈ ಹಿಂದೆ ವಿವೇಕನಗರ ರೌಡಿಶೀಟರ್ ಜಾರ್ಜ್, ಕೋರಮಂಗಲ ರೌಡಿಶೀಟರ್ ರಾಜೇಂದ್ರ, ಅಶೋಕನಗರದ ರೌಡಿಯೊಬ್ಬನ ಕೊಲೆಯಲ್ಲಿ ಭಾಗಿಯಾಗಿದ್ದ. ಇದೇ ದ್ವೇಷಕ್ಕೆ ಕೊಲೆಯಾಗಿದೆ ಎಂದು ಹೇಳಲಾಗಿದೆ.
ಕಳೆದ ಆರೇಳು ವರ್ಷಗಳಿಂದ ಅಪರಾಧ ಜಗತ್ತಿನಿಂದ ಸ್ವಲ್ಪ ದೂರ ಉಳಿದಿದ್ದ ಈತ, ಗುತ್ತಿಗೆದಾರನ ಕೆಲಸ ಮಾಡಿಕೊಂಡುಕುಟುಂಬದ ಜತೆ ವಾಸವಾಗಿದ್ದಈತ, ಕೊಳಚೆ ಪ್ರದೇಶದಲ್ಲಿ ಕಚೇರಿಯೊಂದನ್ನು ತೆರೆದು ಮೂರು ಲಕ್ಷ ರೂ. ಪಡೆದು ಕೆಲವರನ್ನು ಮತಾಂತರ ಮಾಡುತ್ತಿದ್ದ ಎಂದು ಸ್ಥಳೀಯರು ಹೇಳುತಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್, ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹ ದೇವ ಜೋಷಿ, ಮಡಿವಾಳ ಉಪವಿಭಾಗದ ಎಸಿಪಿಸುಧೀರ್ ಹೆಗಡೆ ಹಾಗೂ ಕೋರಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರೌಡಿಶೀಟರ್ ಬಬ್ಲಿಯನ್ನು ಬ್ಯಾಂಕ್‌ನೊಳಗೆ ಹತ್ಯೆಗೈದಿದ್ದು, ಹಂತಕರುಕೊಲೆಗೈಯುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸದ್ಯಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. –ಎಸ್. ಮುರುಗನ್, ಹೆಚ್ಚುವರಿ ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.