ಅಲ್ಪಾವಧಿಯಲ್ಲಿ ಅನೇಕ ಸಾಧನೆ; ಸಚಿವ ಪಾಟೀಲ ಹೆಗ್ಗಳಿಕೆ


Team Udayavani, Jul 20, 2021, 11:19 AM IST

ಅಲ್ಪಾವಧಿಯಲ್ಲಿ ಅನೇಕ ಸಾಧನೆ; ಸಚಿವ ಪಾಟೀಲ ಹೆಗ್ಗಳಿಕೆ

ಸಚಿವ ಸಿ.ಸಿ.ಪಾಟೀಲರು ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುವುದರ ಜತೆಗೆ ಆಯಾ ಇಲಾಖೆಗಳಿಗೆ ಹೊಸ ರೂಪ ನೀಡಿದ್ದಾರೆ. ಕೋವಿಡ್‌ ನಂತಹ ಸಂಕಷ್ಟದ ಸಂದರ್ಭದಲ್ಲೂ ಸರಕಾರಕ್ಕೆ ನೂರಾರು ಕೋಟಿ ರೂ. ರಾಯಧನ ತಂದು ಕೊಟ್ಟಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು.ಆಗ ನರಗುಂದ ಶಾಸಕರಾಗಿದ್ದ ಸಿ.ಸಿ.ಪಾಟೀಲರಿಗೆ ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಲಿದಿತ್ತು. “ಭಾಗ್ಯಲಕ್ಷ್ಮೀ’ ಯೋಜನೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮಹತ್ವಕಾಂಕ್ಷಿ ಯೋಜನೆಯಾಗಿತ್ತು. ಹುಟ್ಟುವಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ 1 ಲಕ್ಷ ರೂ.ನೀಡುವ “ಭಾಗ್ಯಲಕ್ಷ್ಮೀ’ ಬಾಂಡ್‌ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಸಚಿವ ಸಿ.ಸಿ.ಪಾಟೀಲಸಾಕಷ್ಟು ಶ್ರಮ ವಹಿಸಿದ್ದರು. ಬಿಜೆಪಿ ಸರಕಾರದ ಜನಪ್ರಿಯತೆಗೆ ಕಾರಣೀಭೂತರಾದರು.

ಆನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಸರಕಾರ “ಭಾಗ್ಯಲಕ್ಷ್ಮೀ’ ಯೋಜನೆ ಸ್ಥಗಿತಗೊಳಿಸಿತ್ತು.ಆದರೆ ರಾಜ್ಯದಲ್ಲಿ ಮತ್ತೆ ಬಿ.ಎಸ್‌.ಯಡಿಯೂರಪ್ಪ ಸರಕಾರ ಅ ಧಿಕಾರಕ್ಕೆ ಬರುತ್ತಿದ್ದಂತೆ ಈ ಯೋಜನೆಯನ್ನು ಪುನಾರಂಭಿಸಿದೆ. ಲಿಂಗ ಅಸಮಾನತೆ ನಿವಾರಣೆ ಮತ್ತು ಹೆಣ್ಣು ಮಕ್ಕಳ ಅಭಿವೃದ್ಧಿಯತ್ತ ಕ್ರಾಂತಿಕಾರಿಹೆಜ್ಜೆಯಿರಿಸಿದೆ.

ಈ ಬಾರಿ ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದ ಸರಕಾರದಲ್ಲಿ ಅರಣ್ಯ ಇಲಾಖೆ, ಗಣಿ-ಭೂ ವಿಜ್ಞಾನ ಇಲಾಖೆಗಳನ್ನು ನಿರ್ವಹಿಸಿರುವ ಸಚಿವ ಸಿ.ಸಿ.ಪಾಟೀಲ, ಕಪ್ಪತ್ತಗುಡ್ಡ ವನ್ಯಜೀವಿ ಸಂರಕ್ಷಿತ ತಾಣದ ಗಡಿ ಗುರುತಿಸುವ ಕಾರ್ಯ ಜತೆಗೆ ನಾಡಿನ ವನ್ಯಜೀವಿಗಳು, ಅಭಯಾರಣ್ಯಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಬಡವರ ಪರ ಹೊಸ ಮರಳು ನೀತಿ: ಪ್ರಸ್ತುತ ಸರ್ಕಾರದಲ್ಲಿ ಮೊದಲ ಒಂದೂವರೆ ವರ್ಷ ಮುಖ್ಯಮಂತ್ರಿಯವರ ಸಹಕಾರದೊಂದಿಗೆ ಗಣಿ ಮತ್ತು ಭೂ ವಿಜ್ಞಾನಖಾತೆ ನಿಭಾಯಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರ ಚಿಂತನೆಯಿಂದ ಒಡಮೂಡಿದನೂತನ ಮರಳು ನೀತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿದ್ದ ಸಿ.ಸಿ.ಪಾಟೀಲ ಅವರು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. 2020ನೇ ಸಾಲಿನಲ್ಲಿ ಸಾರ್ವಜನಿಕರಿಗೆ ವಾಸಿಸಲು ಕಟ್ಟಡ ನಿರ್ಮಿಸಿಕೊಳ್ಳಲು ಕೈಗೆಟಕುವ ದರದಲ್ಲಿ ಮರಳು ದೊರಕಿಸಿಕೊಡುವುದುನೂತನ ಮರಳು ನೀತಿಯ ಹಿಂದಿನ ಸದುದ್ದೇಶ. ಗಣಿ ಉದ್ಯಮದಲ್ಲಿ ತೊಡಗಿರುವ ಕೈಗಾರಿಕೋದ್ಯಮಿಗಳಬೇಡಿಕೆಗೆ ಅನುಗುಣವಾಗಿ ಹಾಗೂ ರಾಜ್ಯದ ನೈಸರ್ಗಿಕಸಂಪತ್ತು ಉಳಿಸಿಕೊಳ್ಳುವುದರ ಜತೆಗೆ ಆಡಳಿತಾತ್ಮಕವಾಗಿಅವಶ್ಯವಿದ್ದ ಕರ್ನಾಟಕ ಉಪ ಖನಿಜಗಳ ರಿಯಾಯಿತಿ ನಿಯಮಾವಳಿ ಹಾಗೂ ಕರ್ನಾಟಕದಲ್ಲಿ ಕಲ್ಲು ಪುಡಿಮಾಡುವ ಘಟಕಗಳ ನಿಯಮಾವಳಿಗಳಲ್ಲಿ ಸೂಕ್ತ ತಿದ್ದುಪಡಿ ತಂದಿದ್ದಾರೆ.

ಸಾರ್ವಜನಿಕ ಕಟ್ಟಡ ನಿರ್ಮಾಣಕ್ಕೆ ಕೈಗೆಟಕುವ ದರದಲ್ಲಿ ಇಲಾಖೆಯ ಅಧೀನ ರಾಜ್ಯ ಖನಿಜ ನಿಗಮ ನಿಯಮಿತಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತಗಳಮೂಲಕ ಮರಳು ಒದಗಿಸಲು ನೂತನ ಮರಳು ನೀತಿ ಪೂರಕವಾಗಿದೆ. ಅಂತಾರಾಜ್ಯ ಸರಹದ್ದುಗಳಲ್ಲಿಚೆಕ್‌ಪೋಸ್ಟ್‌ ಸ್ಥಾಪಿಸಿ ರಾಜ್ಯದಲ್ಲಿ ಅಕ್ರಮ ಮರಳುಮಾರಾಟ ತಡೆಗೆ ಪ್ರತ್ಯೇಕ ಟಾಸ್ಕ್ಫೋರ್ಸ್‌ ರಚಿಸಿದ್ದಾರೆ.ಮಾರ್ಚ್‌ 2020ರ ಅಂತ್ಯಕ್ಕೆ ಪರವಾನಗಿ ಅವಧಿಮುಗಿದ ಗಣಿ ಗುತ್ತಿಗೆಗಳನ್ನು ಹರಾಜು ಮಾಡುವುದರ ಮೂಲಕ ಕೋವಿಡ್‌ನ‌ ಸಂಕಷ್ಟ ಸಂದರ್ಭದಲ್ಲೂರಾಜ್ಯದ ಬೊಕ್ಕಸಕ್ಕೆ 800 ಕೋಟಿ ರೂ. ಆದಾಯ ತಂದು ಕೊಟ್ಟಿದ್ದಾರೆ.

3 ವರ್ಷದಲ್ಲಿ 5 ಲಕ್ಷ ಉದ್ಯೋಗಾವಕಾಶ ಗುರಿ: ರಾಜ್ಯದ

ಉತ್ತಮ ಭವಿಷ್ಯಕ್ಕಾಗಿ ಹತ್ತು ಹಲವು ಗುರಿ ಹೊಂದಿರುವ ಸಚಿವ ಸಿ.ಸಿ.ಪಾಟೀಲರು ಕಳೆದ 7 ತಿಂಗಳಿಂದ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಹೊಂದಿದ್ದು ಅಲ್ಪಾವಧಿ ಯಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಸಣ್ಣ ಕೈಗಾರಿಕಾವಲಯ ಎಂಬ ಖ್ಯಾತಿ ಪಡೆದ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮೂಲ ಸೌಲಭ್ಯಗಳಅಭಿವೃದ್ಧಿಗೆ ಮುಖ್ಯಮಂತ್ರಿಗಳ ಮೂಲಕ 100 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಉತ್ಪಾದನಾ ವಲಯಆಕರ್ಷಿಸಲು ಪೀಣ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪಿಸಲು ಉದ್ದೇಶಿಸಿದ್ದಾರೆ.

ಬೆಂಗಳೂರು-ಮುಂಬೈ, ಬೆಂಗಳೂರು-ಚೆನ್ನೈಕೈಗಾರಿಕಾ ಕಾರಿಡಾರ್‌ಗಳಲ್ಲಿ ಲಭ್ಯವಿರುವ ಅವಕಾಶ ಬಳಸಿಕೊಂಡು 2 ಕಡೆ ತಲಾ ಕನಿಷ್ಟ 500 ಎಕರೆ ಜಾಗದಲ್ಲಿ ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್‌ಶಿಪ್‌ಗ್ಳನ್ನು ಸ್ಥಾಪಿಸಲಾಗುವುದು. KSIIDC ಮತ್ತು KSSIDC ವತಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಟೌನ್‌ಶಿಪ್‌ಗಳಿಂದ ಮುಂದಿನ 3 ವರ್ಷಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳ ಖಾಸಗಿ ಬಂಡವಾಳ ಆಕರ್ಷಿಸುವಮೂಲಕ 5 ಲಕ್ಷ ಉದ್ಯೋಗವಕಾಶ ಸೃಷ್ಟಿಸುವ ಗುರಿಹೊಂದಲಾಗಿದೆ. ಈ ಯೋಜನೆ ತ್ವರಿತ ಅನುಷ್ಠಾನಕ್ಕೆ ಪ್ರಕ್ರಿಯೆಗಳು ಚಾಲನೆ ಪಡೆದಿವೆ.

ಕೈಗಾರಿಕೆಗಳಿಗೆ ಸರಕಾರದ ನೆರವು: ಕೋವಿಡ್‌ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ್ದರಿಂದ MSME ಕೈಗಾರಿಕೆಗಳಿಗೆ 2021ರಮೇ ಮತ್ತು ಜೂನ್‌ ತಿಂಗಳ ವಿದ್ಯುತ್‌ ನಿಗದಿತ ಶುಲ್ಕದಲ್ಲಿವಿನಾಯ್ತಿ ಒದಗಿಸಿದೆ. ಕರ್ನಾಟಕ ಕೃಷಿ ವಾಣಿಜ್ಯಮತ್ತು ಆಹಾರ ಸಂಸ್ಕರಣಾ ನೀತಿ-2015ರಡಿ ಬಾಕಿ ಇರುವ 247.02 ಕೋಟಿ ರೂ. ಸಹಾಯಧನವನ್ನು ಕೃಷಿ ಇಲಾಖೆ ಬಿಡುಗಡೆ ಮಾಡಬೇಕಿದ್ದು, ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರ 147 ಕೋಟಿ ರೂ.ಗಳನ್ನು ಮಾರ್ಚ್‌ 10, 2021ರಂದು ಬಿಡುಗಡೆ ಮಾಡಿದೆ. ಈ ಸಹಾಯಧನವನ್ನು 27 ಜಿಲ್ಲೆಗಳ 521 ಘಟಕಗಳಿಗೆ ಬಿಡುಗಡೆ ಮಾಡಲಾಗಿದೆ.

ಸರ್ಕಾರ 2018-19 ಮತ್ತು 2019-20ನೇ ಸಾಲಿನಲ್ಲಿ ಅನುಮೋದಿಸಿರುವ KSSIDC ಕೈಗಾರಿಕಾ ವಸಾಹತುಗಳ ಕ್ರಿಟಿಕಲ್‌ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು 6-3-2021ರಂದು 4370.00 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದೆ.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಖಾದಿ ಸೊಸೈಟಿಗಳಿಗೆ 2015-16ರಿಂದ 2019-20ರವರೆಗೆ ಬಾಕಿ ಪಾವತಿಸಬೇಕಿದ್ದ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ 2593.00 ಲಕ್ಷ ರೂ. ಮತ್ತು ಪ್ರೋತ್ಸಾಹ ಮಜೂರಿ ಬಾಕಿ 4991.00 ಲಕ್ಷ ರೂ. ಸೇರಿ ಒಟ್ಟು 7584.00 ಲಕ್ಷ ರೂ.ಗಳನ್ನು ಪಾವತಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಕೊರೊನಾ ಸಂಕಷ್ಟಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಳೆದ ವರ್ಷ ಎಂಎಸ್‌ ಎಂಇ ಉದ್ದಿಮೆಗಳು ಪಾವತಿಸಬೇಕಾದ 2 ತಿಂಗಳ ಸ್ಥಿರ ಶುಲ್ಕ ಮನ್ನಾ ಮಾಡಿದೆ.

ಪ್ರಗತಿಯಲ್ಲಿವೆ ಸ್ಮಾರಕಗಳ ನಿರ್ಮಾಣ: ಐದು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕನ್ನಡ ಚಿತ್ರರಂಗದ ಬಹುಕಾಲದ ಕನಸು ಸಾಕಾರಗೊಳಿಸುವತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 2021-22ರಆಯವ್ಯಯದಲ್ಲಿ ಮಂಡಿಸಿರುವ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಗರಿಯನ್ನು ಮೈಸೂರು ಜಿಲ್ಲೆಯ ಹಿಮ್ಮಾವು ಪ್ರದೇಶದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮೈಸೂರಿನಲ್ಲಿ 11 ಕೋಟಿ ರೂ.ಮೊತ್ತದಲ್ಲಿ ಹಿರಿಯ ನಟ ಡಾ|ವಿಷ್ಣುವರ್ಧನ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿದೆ. ಬೆಂಗಳೂರಿನ ಶ್ರೀ ಕಂಠೀರವ ಸ್ಟುಡಿಯೋದಲ್ಲಿ ನಟಸಾರ್ವಭೌಮ ಡಾ|ರಾಜಕುಮಾರ, ಹಿರಿಯ ನಟ ಅಂಬರೀಷ್‌ ಸ್ಮಾರಕಗಳು ನಿರ್ಮಾಣ ಹಂತದಲ್ಲಿವೆ.

ನೆರೆ ಸಂಕಷ್ಟ ತ್ವರಿತ ಸ್ಪಂದನೆ :

2019-20ನೇ ಸಾಲಿನಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಬಟ್ಟೆ-ಬರೆ ಮತ್ತು ಗೃಹೋಪಯೋಗಿ ವಸ್ತುಗಳ ಹಾನಿಗೆ ವಿಪತ್ತು ನಿರ್ವಹಣೆ ಸೂತ್ರದಡಿ ತಲಾ 3,800 ರೂ. ಬದಲಾಗಿ ರಾಜ್ಯ ಸರ್ಕಾರ ತನ್ನ ಪಾಲನ್ನು ಹೆಚ್ಚುವರಿಯಾಗಿ ಸೇರಿಸಿ ಪ್ರತಿ ಕುಟುಂಬಕ್ಕೆ ತಲಾ 10,000 ರೂ.ಗಳಂತೆ ಒಟ್ಟು 10,229 ಸಂತ್ರಸ್ಥಕುಟುಂಬಗಳಿಗೆ ಒಟ್ಟು 10.23 ಕೋಟಿ ರೂ. ಪರಿಹಾರ ವಿತರಿಸಿದೆ.ಅದರಂತೆ 2020-21ನೇ ಸಾಲಿನಲ್ಲಿ ತಲಾ 10,000 ರೂ.ಗಳಂತೆ214 ನೆರೆ ಸಂತ್ರಸ್ಥ ಕುಟುಂಬಗಳಿಗೆ 21.40 ಲಕ್ಷ ರೂ. ಪರಿಹಾರವಿತರಿಸಿದೆ. ನೆರೆ ಪೀಡಿತ 10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್‌ ವಿತರಿಸಲಾಗಿದೆ.

ವೈದ್ಯಕೀಯ ಸೇವೆಗಳು ಮೇಲ್ದರ್ಜೆಗೆ :

ಗದಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ.ಸಿ.ಪಾಟೀಲ ಕೋವಿಡ್‌ ಸಂಕಷ್ಟ ಕಾಲದಲ್ಲಿ ನಾವಿಕನಂತೆ ಜಿಲ್ಲೆಯನ್ನು ಮುನ್ನಡೆಸುತ್ತಿದ್ದಾರೆ. ಮೊದಲನೇ ಅಲೆಯ ಅನುಭವಗಳನ್ನು ಆಧರಿಸಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು 2ನೇ ಅಲೆಯ ತೀವ್ರತೆ ತಡೆಯುವಲ್ಲಿ ಫಲಿಸಿವೆ. 2ನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌, ಆಕ್ಸಿಜನ್‌ ಕೊರತೆ ಸೇರಿದಂತೆ ಸಾಲು ಸಾಲು ಸಮಸ್ಯೆಗಳುಎದುರಾದರೂ, ಕಾಲಕಾಲಕ್ಕೆ ಅಗತ್ಯ ಕ್ರಮ ಕೈಗೊಂಡು ಜಿಲ್ಲೆಯನ್ನು ಕೋವಿಡ್‌ ಕೆನ್ನಾಲಿಗೆಯಿಂದತಪ್ಪಿಸಿವೆ. ಸಚಿವ ಸಿ.ಸಿ.ಪಾಟೀಲರ ಪ್ರಯತ್ನದಿಂದ ಜಿಲ್ಲೆಯು ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಸರಕಾರಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸರಕಾರದಿಂದ 50 ವೆಂಟಿಲೇಟರ್‌ ಒದಗಿಸಿದ್ದು, ಆಕ್ಷಿಜನ್‌ ವಿತ್‌ ವೆಂಟಿಲೇಟರ್‌ ಹಾಸಿಗೆಗಳನ್ನು 110ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಆಕ್ಸಿಜನ್‌ ವಿತ್‌ ವೆಂಟಿಲೇಟರ್‌ ಹೊಂದಿರುವ ಸರಕಾರಿ ಆಸ್ಪತ್ರೆಯಾಗಿರುವುದು ಇದರ ವಿಶೇಷ.

ಆಕ್ಸಿಜನ್‌ ಉತ್ಪಾದನೆಯತ್ತ ಕ್ರಾಂತಿಕಾರಿ ಹೆಜ್ಜೆ  :

ಕೊರೊನಾ 2ನೇ ಅಲೆಯಲ್ಲಿ ಎಲ್ಲೆಡೆ ಪ್ರಾಣವಾಯು ಮತ್ತು ವೆಂಟಿಲೇಟರ್‌ಗಳ ಕೂಗು ದೊಡ್ಡಮಟ್ಟದಲ್ಲಿತ್ತು. ಆದರೆ ಜಿಮ್ಸ್‌ನಲ್ಲಿ 13 ಕೆಎಲ್‌ ಸಾಮರ್ಥ್ಯದ ಸಂಗ್ರಹ ಘಟಕ ಇದ್ದಿದ್ದರಿಂದ ಹೆಚ್ಚಿನ ಸಮಸ್ಯೆ ಕಂಡು ಬರಲಿಲ್ಲ.ಆದರೂ ಭವಿಷ್ಯದ ಹಿತದೃಷ್ಟಿಯಿಂದ ಸಚಿವ ಸಿ.ಸಿ.ಪಾಟೀಲ ನಡೆಸಿದ ವಿಶೇಷ ಪ್ರಯತ್ನದಿಂದ ಜಿಲ್ಲೆಗೆ ಒಟ್ಟು 5000 ಎಲ್‌ಪಿಎಂ ಸಾಮರ್ಥ್ಯದ ಘಟಕಗಳು ಮಂಜೂರಾಗಿವೆ. ಶೀಘ್ರವೇ 3 ಸಾವಿರ ಎಲ್‌ಪಿಎಂ ಘಟಕಗಳು ಕಾರ್ಯಾರಂಭಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ಪೈಕಿ ನರಗುಂದದ 390 ಎಲ್‌ಪಿಎಂ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ. ಬಲ್ದೋಟಾ ಕಂಪನಿಯಿಂದ ಒಂದು ಐಸಿಯು ಸಹಿತ ಆಂಬ್ಯುಲೆನ್ಸ್‌ನು° ಜಿಮ್ಸ್‌ಗೆ ಒದಗಿಸಿದೆ. ಜಿಲ್ಲೆಗೆ ನಾಲ್ಕು ಐಸಿಯು ಸಹಿತ ಆಂಬ್ಯುಲೆನ್ಸ್‌ ಒದಗಿಸಲು ಹಟ್ಟಿಚಿನ್ನದ ಗಣಿ ಕಂಪನಿ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ಸಚಿವ ಸಿ.ಸಿ.ಪಾಟೀಲರ ಪ್ರಯತ್ನ ಅಲ್ಲಗೆಳೆಯುವಂತಿಲ್ಲ.

300 ಅಪೌಷ್ಟಿಕ ಮಕ್ಕಳಿಗೆ ಲಸಿಕೆ :

ಸಂಭವನೀಯ ಕೋವಿಡ್‌ 3ನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದಬಳಲುತ್ತಿರುವ 300ಕ್ಕೂ ಹೆಚ್ಚು ಮಕ್ಕಳಿಗೆ ಸಚಿವಸಿ.ಸಿ.ಪಾಟೀಲ ತಮ್ಮ ಮೊಮ್ಮಗಳ ಜನ್ಮದಿನ ಪ್ರಯುಕ್ತ ಇನ್‌ಫ್ಲೂಯೆಂಜಾ ಲಸಿಕೆ ಕಲ್ಪಿಸಿದ್ದಾರೆ.ಅದಕ್ಕೆ ತಗುಲಿದ ಎಲ್ಲ ವೆಚ್ಚವನ್ನೂ ಸ್ವಂತ ಖರ್ಚಿನಲ್ಲಿ ಬರಿಸಿದ್ದಾರೆ.

ಕ್ಷೇತ್ರದ ಜನತೆಗೆ ಸಿಸಿಪಿ ಸಹಾಯ ಹಸ್ತ :

ಎರಡು ಇಲಾಖೆಗಳು ಹಾಗೂ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಮಧ್ಯೆಯೂ ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಯನ್ನು ಸಿ.ಸಿ.ಪಾಟೀಲರು ಯಾವತ್ತೂ ಮರೆತಿಲ್ಲ. ಕೋವಿಡ್‌ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕ್ಷೇತ್ರದ 6 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದ್ದಾರೆ.ತಮ್ಮ ಚುನಾವಣಾ ಪ್ರಚಾರ ವಾಹನಮೂಲಕ ಕೋವಿಡ್‌ ಲಸಿಕೆ ಪಡೆಯುವಂತೆ ಜನಜಾಗೃತಿ ನಡೆಸಿ ಕೋವಿಡ್‌ ವಿರುದ್ಧ ಸಮರ ಸಾರಿದ್ದಾರೆ.

ಟಾಪ್ ನ್ಯೂಸ್

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.