ಸ್ವಾತಂತ್ರ್ಯ ನಿಜವಾದ ಸಮಾನತೆಯೇ


Team Udayavani, Jul 20, 2021, 3:34 PM IST

ಸ್ವಾತಂತ್ರ್ಯ ನಿಜವಾದ ಸಮಾನತೆಯೇ

ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಸಿದ್ಧಲಿಂಗಯ್ಯನವರ ಬಹು ಪ್ರಸಿದ್ಧ ಬರೆಹದ ಸಾಲುಗಳು ಇಂದಿಗೂ ಜೀವಂತಿಕೆಯಿಂದ ಕೂಡಿವೆ. ಬ್ರಿಟಿಷರಿಂದ ಸ್ವಾತಂತ್ರ್ಯ ನಮಗೆ ದಕ್ಕಿದ್ದರೂ ನಾವು ಸಂಪೂರ್ಣ ಸ್ವತಂತ್ರರಲ್ಲ. ಅದರಲ್ಲೂ ಮಹಿಳೆಯರಿಗೆ ಸ್ವಾತಂತ್ರ್ಯ ಹೆಸರಿಗೆ ಮಾತ್ರ ಸೀಮಿತವೆಂಬಂತಿದೆ. ಕೆಲಸ ಮಾಡೋ ಮಹಿಳೆಯರು ಅಂದರೆ ಅಂಥವರ ಬಗ್ಗೆ ಈ ಸಮಾಜ ಎರಡು ಗುಂಪುಗಳಾಗಿ ಮಾತನಾಡುತ್ತದೆ.  ಒಂದು ಗುಂಪು ಅವಳನ್ನು, ಅವಳು ಮಾಡುತ್ತಿರುವ ಕೆಲಸವನ್ನು ಗೌರವಿಸಿ ಆಕೆಯ ಸ್ವಾತಂತ್ರ್ಯಕ್ಕೆ ಬೆಲೆ ಕೊಟ್ಟರೆ ಮತ್ತೂಂದು ಗುಂಪು ಅವಳ ಸ್ವಾತಂತ್ರ್ಯವನ್ನು ಹರಣಮಾಡಿ ಮನೆಗೆ ಸೀಮಿತಗೊಳಿಸುತ್ತದೆ.

ಹೆಣ್ಣಿಗೂ ತನ್ನವರನ್ನು ತಾನೇ ದುಡಿದು ನೋಡಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಹಾಗೇ ಯಾರ ಮುಂದೆಯೂ ಕೈಚಾಚದೆ ತನ್ನ ಜೀವನವನ್ನ ತಾನೇ ರೂಪಿಸ‌ಬೇಕೆಂಬ ಸ್ವಾಭಿಮಾನವು ಇರುತ್ತದೆ.  ಇಂತಹ ಸ್ವಾಭಿಮಾನವನ್ನು ಕೆಲವರು ಅಹಂಕಾರವೆಂದು ದೂಷಿಸುತ್ತಾರೆ. ಹೆಣ್ಣು ಕೆಲಸ ಮಾಡಲಿಚ್ಛಿಸುವುದು ತಪ್ಪು ಎಂಬ ಭಾವನೆಯನ್ನು ಬಲವಂತವಾಗಿ ಹೇರಿ, ಆಕೆಯನ್ನು ಅಸಹಾಯಕ ಸ್ಥಿತಿಗೆ ತುಳ್ಳುತ್ತಾರೆ. ನೀನು ಮನೆಯಿಂದ ಆಚೆಹೋಗಿ ಹೇಗೆ ಕೆಲಸಮಾಡಬಲ್ಲೆ,  ಹೇಗೆ ಒಬ್ಬಳೆ ಇರಬಲ್ಲೆ ಎಂದು ಅವಳ ಆತ್ಮಸ್ಥೈರ್ಯವನ್ನು  ಕುಗ್ಗಿಸಿ ಬಿಡುತ್ತಾರೆ. ಮುಂದೆ ಅವಳ ಪೋಷಕರು ಆಕೆಗೊಂದು ಮದುವೆ ಮಾಡಿ ತಮ್ಮ ಜವಾಬ್ದಾರಿಯಿಂದ ಮುಕ್ತಿಹೊಂದುತ್ತಾರೆ.  ಮದುವೆಯಾದ ಅನಂತರ ಗಂಡನ ಮನೆಯ ಜವಾಬ್ದಾರಿಯನ್ನು ಹೊತ್ತು ತನ್ನ ಕೆಲಸಕ್ಕೆ ಸೇರುವ ಆಸೆಯನ್ನ ತನ್ನಲ್ಲೇ ಸಾಯಿಸಿಕೊಂಡು ತನ್ನ ಸ್ವಾತಂತ್ರ್ಯದ ಜತೆ ತನ್ನ ಅಸ್ತಿತ್ವವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾಳೆ.

ವಿಧವೆಯಾದವಳು ಕೆಲಸಕ್ಕೆ ಸೇರಿ ತನ್ನ ಜೀವನವನ್ನು ತಾನೇ ಯಾರ ಸಹಾಯವನ್ನು ಪಡೆಯದೆ ನಡೆಸುತ್ತಿದ್ದರೆ ಅಂತಹವನ್ನು ನಮ್ಮ ಸಮಾಜ ನೋಡುವ ರೀತಿ ಬೇರೆಯೇ ಆಗಿರುತ್ತದೆ. ತನ್ನ ಜೀವನ ಹೇಗಿರಬೇಕೆಂದು ನಿರ್ಧಾರ ಮಾಡುವ ಸ್ವಾತಂತ್ರ್ಯ ಆಕೆಗಿದೆ ಎಂದು ಯಾರು ಯೋಚಿಸುವುದೇ ಇಲ್ಲ. ಅವಳ ತಂದೆಯ ಮನೆಯವರನ್ನು ಅಥವಾ ಅವಳ ಗಂಡನ ಮನೆಯವರನ್ನು ಅವಲಂಬಿತವಾಗಿ ಜೀವನ ನಡೆಸಬೇಕೆಂದು ನಮ್ಮ ಸಮಾಜ ಸ್ವಯಂ ಘೋಷಿಸಿಬಿಡುತ್ತದೆ. ಇವುಗಳನೆಲ್ಲಾ ಧಿಕ್ಕರಿಸಿ ಹೆಣ್ಣು ಸ್ವತಂತ್ರಳಾಗ ಬಯಸಿದರೆ ಆಕೆಗೆ ಬೇರೆಯದೇ ಪಟ್ಟಿ ಕಟ್ಟಿ ತನ್ನ  ಕಟುನುಡಿಗಳಿಂದ  ಹಿಂಸಿಸಿಬಿಡುತ್ತದೆ ಈ ಸಮಾಜ.

ಹಾಗಾದರೆ ಸಂವಿಧಾನ ಎಲ್ಲರಿಗೂ ಸಮಾನವಾಗಿ ಕೊಟ್ಟ ಸ್ವಾತಂತ್ರ್ಯದ ಹಕ್ಕು ಬರೀ ಗಂಡಸರಿಗೆ ಮಾತ್ರ ಸೀಮಿತವೇ ಅಥವಾ ಹೆಣ್ಣು ಈ ಹಕ್ಕಿಂದ ವಂಚಿತಳೇ? ಕಾಲ ಬದಲಾಗುತ್ತಿದೆ. ಹಳೇ ಬೇರಲ್ಲಿ ಹೊಸ ಚಿಗುರು ಚಿಗುರಲೇಬೇಕು. ಆದರೆ ಮನುಷ್ಯ ತನ್ನ ಆಲೋಚನೆಗಳನ್ನ ಈ ವಿಷಯದಲ್ಲಿ  ಬದಲಾಯಿಸಿ ಕೊಳ್ಳುತ್ತಿಲ್ಲ, ಅದಕ್ಕೆ ಏನೋ ಚಿಗುರು ಚಿಗುರುವ ಮುನ್ನವೇ ಚಿವುಟುತ್ತಿದ್ದಾನೆ. ಇನ್ನೂ ಸಹ ಹೆಣ್ಣು ಎಂದರೆ ಕೇವಲ ಮನೆ ಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಮನಃಸ್ಥಿತಿ ಬದಲಾಯಿಸುತ್ತಿಲ್ಲ. ಗಂಡು ಮಾತ್ರ ಕೆಲಸಕ್ಕೆ ಸೀಮಿತ, ಹೆಣ್ಣಲ್ಲ ಎನ್ನುವ ಮನಃಸ್ಥಿತಿ ಬದಲಾಗಬೇಕು.  ಎಲ್ಲಿಯವರೆಗೆ ಈ ವಿಷಯದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಸಿಗಲಾರದು.

ಹರ್ಷಿತಾ ಎಂ.

ಮಾನಸಗಂಗೋತ್ರಿ, ಮೈಸೂರು

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.