ಈ ಪರಿಸರ ಗೀತೆ ಇಂದಿಗೂ ಪ್ರಸ್ತುತ…


Team Udayavani, Jul 21, 2021, 9:15 AM IST

ಈ ಪರಿಸರ ಗೀತೆ ಇಂದಿಗೂ ಪ್ರಸ್ತುತ…

ರಿಮಿಕ್ಸ್‌ ಸಾಂಗ್ಸ್‌, ಫ್ಯೂಷನ್‌ ಸಾಂಗ್ಸ್‌ ಇವುಗಳ ಮಧ್ಯೆ ಮರೆಯಾಗುತ್ತಿರುವುದು ಸಾಹಿತ್ಯ ಬದ್ಧವಾದ, ಅರ್ಥಗರ್ಭಿತ, ಸುಮಧುರ ಗೀತೆಗಳ ಸಾಲಿನಲ್ಲಿ ಪ್ರಕೃತಿ ಗೀತೆ ಸಹ ಒಂದು. ಶಾಲೆಯ ಪಠ್ಯಪುಸ್ತಕಗಳಲ್ಲಿ ಕೆಲವು ಪ್ರಕೃತಿ ಗೀತೆಗಳನ್ನು ಓದಿರುತ್ತೇವೆ. ನೀವು ದೂರದರ್ಶನವನ್ನು ಸುಮಾರು 90ರ ದಶಕದಲ್ಲಿ ವೀಕ್ಷಿಸಿದ್ದರೆ ಪ್ರಕೃತಿ ಗೀತೆಗಳನ್ನು ಬಹಳಷ್ಟು ಕೇಳಿರುತ್ತಿರಿ. ಎಷ್ಟರ ಮಟ್ಟಿಗೆ ಎಂದರೆ ಆ ಹಾಡುಗಳ ಸಾಹಿತ್ಯ ಬಾಯಿಪಾಠ ಆಗುವ ಅಷ್ಟು. ಉದಾಹರಣೆಗೆ ಗಿಡ ನೆಡಿ, ಗಿಡ ನೆಡಿ, ಗಿಡ ನೆಡಿ ಎಂಬ ಹಾಡು, ನಾ ಹಡೆದವ್ವ, ಹೆಸರು ಪ್ರಕೃತಿ ಮಾತೆ ಎಂಬ ಹಾಡಿರಬಹುದು. ಎಲ್ಲವೂ ಕೇಳುತ್ತಿದಂತೆ ಪ್ರಕೃತಿಯ ಹತ್ತಿರ ಕರೆದೊಯ್ಯುತ್ತಿದೆ ಎಂದೆನಿಸುತ್ತದೆ.

ಇಂದು ನಾನು ಹೇಳ ಹೊರಟಿರುವ ಗೀತೆ ಯಾವು ದೆಂದರೆ ನಾಗತಿಹಳ್ಳಿ ಚಂದ್ರಶೇಖರ್‌ಅವರ ಸಾಹಿತ್ಯ, ವಿಜಯ ಭಾಸ್ಕರ್‌ ಅವರ ಸಂಗೀತ ಸಂಯೋಜನೆಗೆ ಬಿ. ಆರ್‌. ಛಾಯಾ ಅವರ ಸುಶ್ರಾವ್ಯ ಧ್ವನಿಯಲ್ಲಿರುವ ಹಾಡು “ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರೆಂಟು ನನ್ನ ನಲ್ಲ, ಬರಿಯ ನೋವುಗಳಲ್ಲ, ಭಯದ ಆತಂಕಗಳು ಕಾಡುತಿವೆ ವಿಶ್ವವೆಲ್ಲ’ ಈ ಹಾಡಿಗೆ ಕುಂಚದ ಕಲೆ ಕೊಟ್ಟಿರುವವರು ಬಿ. ಕೆ.ಎಸ್‌. ವರ್ಮಾ ಅವರು. ಈ ಹಾಡಿನ ಸಾಹಿತ್ಯದ ವಿಶೇಷ ಎಂದರೆ ಹಾಡಿನುದ್ದಕ್ಕೂ ಅರಣ್ಯದಲ್ಲಿ ಅಕ್ಕ-ಪಕ್ಕ ಬೆಳೆದು ನಿಂತಿರುವ ಬೃಹತ್‌ ಮರಗಳನ್ನು ನಲ್ಲ ನಲ್ಲೆ ಎಂದು ಪ್ರತಿಬಿಂಬಿಸಿ, ಆ ಎರಡು ಮರಗಳು ತಮ್ಮ ನೋವನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಹೋಗುವ ರೀತಿಯನ್ನು ಕವಿಗಳು ತಮ್ಮ ಕವಿತೆಯ ಸಾಲುಗಳಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.

ನೀಲಿ ಗಗನದ ತುಂಬಾ ನೀಲಿಯೇ ಏಕಿಲ್ಲ

ಯಾಕಿಂಥ ಮಲಿನ ಮುಸುಕು

ನಿರ್ಜೀವ ಯಂತ್ರಗಳು ಕಪ್ಪಾದ ಹೊಗೆಚೆಲ್ಲಿ

ನೀಲಿ ಮಾಸಿತು ನನ್ನ ನಲ್ಲೆ ——

ನೀಲಾಕಾಶದಲ್ಲಿ ನೀಲಿಯೇ ಇಲ್ಲದೆ, ಮಲಿನದ ಮುಸುಕೇಕೆ? ಎಂದಾಗ ಕಾರ್ಖಾನೆಗಳಿಂದ ಬರುವ ಕಪ್ಪಾದ ಮಲಿನ ನೀಲಿಯ ಬಾನನ್ನು ಮಾಸಿದಂತೆ ಮಾಡಿದೆ ಎಂಬ ಉತ್ತರ ಎಷ್ಟು ಸೊಗಸಾಗಿದೆ. ಆಗ ಕವಿಗೆ ಈಗಿನ ವಾಹನಗಳಿಂದ ಹೊರಬರುವ ಮಲಿನದ ಮುನ್ಸೂಚನೆ ಇಲ್ಲದಿರಬಹುದು.

ವಾಯುಮಂಡಲದಲ್ಲಿ ಆಮ್ಲಜನಕವು ಎಲ್ಲಿ?

ಜೀವ ಕುಲಕೆ ಯಾಕೆ ಬವಣೆ

ಸಸ್ಯಶ್ಯಾಮಲೆಯನ್ನು ಕೊಚ್ಚಿಕೊಂದರು ನಲ್ಲೆ

ಎಲ್ಲಿ ಬಂದಿತು ಸ್ವತ್ಛ ಗಾಳಿ ——

ಈ ಚರಣ ಭಾಗವಂತೂ ಈಗಿರುವ ಪರಿಸ್ಥಿತಿಗೆ ಹೇಳಿ ಬರೆಸಿರುವ ಹಾಗಿದೆ. ನಲ್ಲೆಯ ಪ್ರಶ್ನೆ “ಜೀವಕುಲಕ್ಕೆ ಆಮ್ಲಜನಕವಿಲ್ಲದೆ ಯಾಕೆ ಈ ರೀತಿಯಾದ ಕಷ್ಟ?’ ಎನ್ನುವುದಕ್ಕೆ ನಲ್ಲನ ಉತ್ತರ, ಗಿಡಮರಗಳನ್ನು ಕಡಿದುದೇ ಈ ಸಮಸ್ಯೆಗೆ ಮೂಲ ಕಾರಣವಾಯ್ತು. ಎಲ್ಲಿ ಬಂದೀತು ಸ್ವತ್ಛ ಗಾಳಿ? ಎಂದು.

ಆನೆ ಸಿಂಹಗಳೆಲ್ಲ ಎಲ್ಲಿ ಹೋದವು ನಲ್ಲ

ಯಾಕೆ ಕೋಗಿಲೆಗೆ ಮೂಕ ನೋವು

ನೆಟ್ಟ ಕಾಡುಗಳೆಲ್ಲಾ ಕೆಟ್ಟ ಕೈಗಳ ಬಲೆಗೆ

ಚಿವುಟಿ ಹೋಯಿತು ನನ್ನ ನಲ್ಲೆ ——

ಅರಣ್ಯಗಳಲ್ಲಿ ನಶಿಸಿ ಹೋಗುತ್ತಿರುವ ವನ್ಯಜೀವಿಗಳನ್ನು ಕುರಿತು ಕೇಳುತ್ತಾ ಕೋಗಿಲೆಯ ಕೂಗು ಸಹ ಮೂಕವಾಗುತ್ತಿದೆಯಲ್ಲ ಎಂದಾಗ ಕಾಡುಗಳು ಕ್ರೂರರ ಕೈಗೆ ಸಿಲುಕಿ ನಾಶವಾಗುತ್ತಾ ಹೋದಂತೆಲ್ಲ ವನ್ಯ ಮೃಗಗಳಿಗೂ ಆಸರೆ ಸಿಗದೆ ಅಳಿವಿನಂಚಿಗೆ ಬರುತ್ತಿದೆ ಎಂಬುದಾಗಿದೆ.

ಶ್ರೀಲಕ್ಷ್ಮೀ

ಬೆಂಗಳೂರು

ಟಾಪ್ ನ್ಯೂಸ್

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.