ಕೋವಿಡ್ ನಿಂದ ಬಳಲಿದ ಜಗತ್ತಿಗೆ ಟೋಕಿಯೋ ಒಲಿಂಪಿಕ್ಸ್ ಆಶಾವಾದದ ಸಂದೇಶವಾಗಲಿ : ಟೆಡ್ರೊಸ್
Team Udayavani, Jul 21, 2021, 12:28 PM IST
ಟೋಕೊಯೋ, ಜಪಾನ್ : ಜಗತ್ತು ಕೋವಿಡ್ 19 ಸೋಂಕನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದ ಕಾರಣದಿಂದಾಗಿ ಟೋಕಿಯೋ ಒಲಂಪಿಕ್ 2020 ನನ್ನು ಮುಂದೂಡಬೇಕಾಗಿ ಬಂತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಟೋಕಿಯೊದ ಐಷಾರಾಮಿ ಹೋಟೆಲ್ನಲ್ಲಿ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದಲ್ಲಿ ಮಾತನಾಡಿದ ಟೆಡ್ರೊಸ್, ಕೋವಿಡ್ ಸಾಂಕ್ರಾಮಿಕದಿಂದ ಬಳಲಿದ ಜಗತ್ತಿಗೆ ಒಲಿಂಪಿಕ್ಸ್ 2020 ‘ಆಶಾವಾದದ ಸಂದೇಶ’ವಾಗಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಇಂದೂ ಮುಂದುವರೆದ ಸ್ವಾಮೀಜಿಗಳ ಸಿಎಂ ಭೇಟಿ: ಕಾವೇರಿ ನಿವಾಸದಲ್ಲಿ ಕಾವೇರಿದ ಚರ್ಚೆ
ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಇಡೀ ಜಗತ್ತು ಬಳಲಿದೆ. ನಾಲ್ಕು ಮಿಲಿಯನ್ ಗಿಂತಲೂ ಅಧಿಕ ಮಂದಿ ಸೋಂಕಿನಿಂದ ವಿಶ್ವದಾದ್ಯಂತ ಮೃತ ಪಟ್ಟಿದ್ದಾರೆ. ಇನ್ನೂ ಸೋಂಕು ಮುಗಿದಿಲ್ಲ. ನಿತ್ಯ ನಿರಂತರವಾಗಿ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಕಳೆದ ವರ್ಷದ ಸಾವಿನ ಸಂಖ್ಯೆಗಿಂತ ಈ ವರ್ಷ ದುಪ್ಪಟ್ಟಾಗಿದೆ. ಇದು ಎಚ್ಚರಿಕೆ ಕರೆ ನಮಗೆ ಎಂದು ಅವರು ಹೇಳಿದ್ದಾರೆ.
ಸೋಂಕು ಇರುವವರೆಗೆ ಭೀತಿ ಇದ್ದೇ ಇರುತ್ತದೆ. ಸೋಂಕು ಮುಕ್ತಾಯವಾಗಿದೆ, ಸೋಂಕು ಇಲ್ಲ ಎಂದು ಅಲ್ಲಗಳೆಯುವವರು ಮೂರ್ಖರು ಎಂದು ಹೇಳಿದ್ದಾರೆ.
ಕೇವಲ 10 ದೇಶಗಳಲ್ಲಿ 75 ಪ್ರತಿಶತದಷ್ಟು ಲಸಿಕೆಗಳನ್ನು ನೀಡಲಾಗಿದೆ. 2022 ರ ಮಧ್ಯಭಾಗದಲ್ಲಿ ವಿಶ್ವದ ಪ್ರತಿ ದೇಶದಲ್ಲಿ 70 ಪ್ರತಿಶತದಷ್ಟು ಜನಸಂಖ್ಯೆಗೆ ಲಸಿಕೆ ನೀಡಬೇಕೆಂದು ಅವರು ಕರೆ ನೀಡಿದರು.
“ಈ ಒಲಿಂಪಿಕ್ಸ್ ಕ್ರೀಡಾ ಕೂಟ ಜಗತ್ತನ್ನು ಒಂದುಗೂಡಿಸುವ ಕ್ಷಣವಾಗಲಿ, ಮತ್ತು ಸಾಂಕ್ರಾಮಿಕ ರೋಗವನ್ನು ನಾವು ಒಟ್ಟಿಗೆ ಕೊನೆಗೊಳಿಸಬೇಕಾದ ಒಗ್ಗಟ್ಟನ್ನು ಮತ್ತು ದೃಢ ನಿಶ್ಚಯವನ್ನು ಈ ಕ್ರೀಡಾಕೂಟದ ಮುಖೇನ ಮಾಡಬೇಕಿದೆ” ಎಂದು ಅವರು ಹೇಳಿದರು. ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಹಿಂಸಾಚಾರದ ವಿರುದ್ಧ ನಾಳೆ ರಾಜ್ ಘಾಟ್ ನಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಭಟನೆ : ಘೋಷ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.