ಯಡಿಯೂರಪ್ಪ ಸ್ವಾರ್ಥಕ್ಕಾಗಿ ಎಂದೂ ಯೋಚಿಸಿದವರಲ್ಲ: ರಾಘವೇಂದ್ರ
Team Udayavani, Jul 21, 2021, 3:18 PM IST
ಶಿವಮೊಗ್ಗ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮಾಧ್ಯಮಗಳಲ್ಲಷ್ಟೆ ಚರ್ಚೆಯಾಗುತ್ತಿದೆ. ಈ ಬಗ್ಗೆ ತಮ್ಮ ನಡುವೆ ಯಾವುದೇ ಚರ್ಚೆಯಾಗಿಲ್ಲ ಎಂದು ಬಿಎಸ್ ವೈ ಪುತ್ರ, ಸಂಸದ ರಾಘವೇಂದ್ರ ಸ್ಪಷ್ಪಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಡಿಯೂರಪ್ಪ ತಮ್ಮ ಪುತ್ರರಿಗೆ ಸ್ಥಾನ ಭದ್ರಪಡಿಸಲು ಯತ್ನಿಸುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಆರ್ ಎಸ್ಎಸ್ ಪ್ರಚಾರಕರಾಗಿ ಶಿಕಾರಿಪುರಕ್ಕೆ ಆಗಮಿಸಿದ ಬಿಎಸ್ ವೈ ಲಕ್ಷಾಂತರ ಕಾರ್ಯಕರ್ತರನ್ನು ಹುಟ್ಟುಹಾಕಿದ್ದಾರೆ. ಅವರು ತಮ್ಮ ಸ್ವಾರ್ಥಕ್ಕಾಗಿ ಎಂದೂ ಯೋಚಿಸಿದವರಲ್ಲ. ಸಂಘಟನೆಗಾಗಿ ಕೆಲಸ ಮಾಡಿದ ಅವರು ಎಂದೂ ಸಂಕುಚಿತರಾಗಿ ಯೋಚನೆ ಮಾಡಿಲ್ಲ ಎಂದು ಹೇಳಿದರು.
ವಿಜಯೇಂದ್ರ ಅವರನ್ನು ಸಚಿವರನ್ನಾಗಿ ಮಾಡುತ್ತಾರೆ, ರಾಘವೇಂದ್ರ ಅವರಿಗೆ ಯಾವುದೋ ಸ್ಥಾನ ಕೊಡಿಸುತ್ತಾರೆ ಅನ್ನುವುದೆಲ್ಲ ಸುಳ್ಳು. ನಾವು ಕೂಡ ಸಂಘಟನೆಯ ಮೂಲಕ ಕಾರ್ಯಕರ್ತರಾಗಿ ಬೆಳೆದಿದ್ದೇವೆ. ನಾಲ್ಕನೇ ಬಾರಿ ಸಿಎಂ ಅಗಿ ಅಭಿವೃದ್ಧಿಯ ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಶ್ರೀರಾಮುಲುಗೆ ಹೈಕಮಾಂಡ್ ಬುಲಾವ್: ಏನಿದು ಹೊಸ ಟ್ವಿಸ್ಟ್?
ಪಕ್ಷದ ನಾಯಕರ ಹೇಳಿಕೆ ಬಗ್ಗೆ ಸಂಘಟನೆಯ ಮುಖಂಡರೇ ಈಗಾಗಲೇ ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಹುಣಸೆಹಣ್ಣು ಹಿಂಡುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ತಲೆಕಡೆಸಿಕೊಳ್ಳದೆ ಕೆಲಸ ಮಾಡುವುದಕ್ಕೆ ಗಮನ ಕೊಡುತ್ತೇವೆ ಎಂದು ರಾಘವೇಂದ್ರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.