ಕಾಡುಹಂದಿಗಳಿಗೆ ಉರುಳು ಚಿರತೆಗಳ ಕೊರಳಿಗೆ!
Team Udayavani, Jul 21, 2021, 4:42 PM IST
ಬೆಂಗಳೂರು: ಅಧಿಕ ಜನಸಂಖ್ಯೆ ಇರುವಪ್ರದೇಶಗಳಲ್ಲಿ ಚಿರತೆಗಳು ಉರುಳುಗಳಿಂದಅಪಾಯ ಎದುರಿಸುತ್ತಿರುವುದು ವನ್ಯಜೀವಿತಜ್ಞರ ಅಧ್ಯಯನದಿಂದ ಬೆಳಕಿಗೆಬಂದಿದೆ.ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಕಾಡುಹಂದಿ ಮತ್ತಿತರ ಪ್ರಾಣಿಗಳಿಂದ ಬೆಳೆರಕ್ಷಣೆಗೆ ನಿರ್ಮಿಸಲಾದ ಉರುಳುಗಳು ಚಿರತೆಗಳಜೀವಕ್ಕೆ ಎರವಾಗಿ ಪರಿಣಮಿಸುತ್ತಿದ್ದು, ವಾಹನಅಪಘಾತಕ್ಕೆ ಸಾವನ್ನಪ್ಪುವ ಪ್ರಮಾಣಕ್ಕಿಂತ ಈಉರುಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗಿದೆ.
ವನ್ಯಜೀವಿ ತಜ್ಞರಾದ ಡಾ.ಸಂಜಯ್ ಗುಬ್ಬಿ,ಅಪರ್ಣಾ ಕೊಳೆಕರ್ ಮತ್ತು ಡಾ.ವಿಜಯ್‌ಕುಮಾರ್ ಅವರನ್ನು ಒಳಗೊಂಡ ತಂಡ2009ರಿಂದ 2020ರ ಅವಧಿಯಲ್ಲಿ ಕರ್ನಾಟಕಮತ್ತು ದಕ್ಷಿಣ ಭಾರತದ ಆಯ್ದ ಭಾಗಗಳಲ್ಲಿಉರುಳುಗಳಲ್ಲಿ ಸಿಲುಕಿಕೊಂಡ ಮತ್ತುಸಾವಿಗೀಡಾದ ಚಿರತೆಗಳ ಬಗ್ಗೆ ಈ ತಜ್ಞರ ತಂಡಅಧ್ಯಯನ ನಡೆಸಿದ್ದು, ರಾಜ್ಯದಲ್ಲಿ 113 ಇಂತಹಪ್ರಕರಣಗಳು ಪತ್ತೆಯಾಗಿರುವ ಆತಂಕಕಾರಿಅಂಶ ಬೆಳಕಿಗೆ ಬಂದಿದೆ.
ತಂತಿ ಉರುಳಿಗೆ ಸಿಲುಕಿದ 113 ಚಿರತೆಗಳಲ್ಲಿ67 ಚಿರತೆಗಳು ಸಾವನ್ನಪ್ಪಿವೆ. ಇದರಲ್ಲಿ ಬಹುತೇಕಅಂದರೆ ಶೇ. 97.5 ಪ್ರಕರಣಗಳಲ್ಲಿ ಬೆಳೆಗಳನ್ನುತಿನ್ನಲು ಬರುವಕಾಡುಹಂದಿ ಮತ್ತಿತರ ಪ್ರಾಣಿಗಳಬೇಟೆಗೆ ಅಳವಡಿಸಲಾಗಿದ್ದ ತಂತಿ ಉರುಳುಗಳಾಗಿವೆ. ಇನ್ನೂ ವಿಚಿತ್ರವೆಂದರೆ 56ಪ್ರಕರಣಗಳು ಮಳೆಗಾಲದಲ್ಲಿ ದಾಖಲಾಗಿವೆ.ಉಳಿದಂತೆ 35 ಚಳಿಗಾಲದಲ್ಲಿ ಹಾಗೂ 22ಪ್ರಕರಣಗಳು ಬೇಸಿಗೆಯಲ್ಲಿ ದಾಖಲಾಗಿವೆ.
65ಚಿರತೆಗಳ ಲಿಂಗ ಕೂಡ ಪತ್ತೆ ಮಾಡಲಾಗಿದ್ದು, 41ಗಂಡು ಮತ್ತು 24 ಹೆಣ್ಣು ಚಿರತೆಗಳಾಗಿವೆ.ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆಗಳುಉರುಳುಗಳಿಂದ ಅಪಾಯ ಎದುರಿಸುತ್ತಿವೆಎಂದು ಅಧ್ಯಯನ ವರದಿಯಲ್ಲಿಉಲ್ಲೇಖೀಸಲಾಗಿದೆ.ವರ್ಷಕ್ಕೆ ಸರಾಸರಿ 6 ಚಿರತೆಗಳು ಉರುಳಿನಿಂದಸಾಯುತ್ತಿವೆ. 2015ರಲ್ಲಿ ಅತಿ ಹೆಚ್ಚು 13ಪ್ರಕರಣಗಳು ದಾಖಲಾಗಿವೆ.
ಸರಾಸರಿ ಸಾವಿನಸಂಖ್ಯೆ ಮಹತ್ವದ್ದು ಅನಿಸದಿರಬಹುದು. ಆದರೆ,ಚಿರತೆಗಳ ಇತರ ಅಸ್ವಾಭಾವಿಕ ಸಾವುಗಳಾದವಾಹನ ಅಪಘಾತ (ಪ್ರತಿ ವರ್ಷಕ್ಕೆ4.6 ಚಿರತೆಗಳಸಾವು), ಪ್ರತೀಕಾರದಿಂದ ಚಿರತೆಗಳನ್ನುಕೊಲ್ಲುವುದು (ಪ್ರತಿ ವರ್ಷಕ್ಕೆ 3.6 ಚಿರತೆಗಳಸಾವು), ತೆರೆದ ಬಾವಿಗಳಲ್ಲಿ ಬೀಳುವುದು (ಪ್ರತಿವರ್ಷಕ್ಕೆ ಸುಮಾರು 1 ಚಿರತೆ ಸಾವು) ಮತ್ತಿತರಕಾರಣಗಳಿಗಿಂತ ಇದು ಹೆಚ್ಚು.ದಕ್ಷಿಣ ಕನ್ನಡದಲ್ಲೇ ಹೆಚ್ಚು!: ರಾಜ್ಯದ 30ಕಂದಾಯ ಜಿಲ್ಲೆಗಳಿವೆ.
ಆದರೆ, ಪತ್ತೆಯಾದಚಿರತೆ ಉರಳು ಪ್ರಕರಣಗಳಲ್ಲಿ ಶೇ. 77.6ರಷ್ಟುಏಳು ಜಿÇÉೆಗಳÇÉೇ ದಾಖಲಾಗಿವೆ. ಅದರಲ್ಲಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಶೇ. 15) ಅತಿಹೆಚ್ಚುಚಿರತೆಗಳು ಉರುಳಿಗೆ ಸಿಲುಕಿದ್ದರೆ, ಮೈಸೂರು(ಶೇ. 14.2), ಚಿಕ್ಕಮಗಳೂರು ಮತ್ತು ಉಡುಪಿ(ತಲಾ ಶೇ. 11.5), ಹಾಸನ (ಶೇ. 10.6),ತುಮಕೂರು ಮತ್ತು ರಾಮನಗರ (ತಲಾ ಶೇ.7.1) ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.