ಮನೆಮನದೊಳಗಿನ ಸುಂದರ ಜಗತ್ತಿನ ಅರಿವಿರಲಿ

ಕಾಡುಗಳಲ್ಲಿರುವ ಹಣ್ಣುಗಳನ್ನು ಅಪರೂಪದ ವಸ್ತುವಿನಂತೆ ನೋಡಿದರೇ ಆಹಾ, ಎಂತಹ ಸುಂದರ ಅನುಭೂತಿ.

Team Udayavani, Jul 21, 2021, 3:32 PM IST

ಮನೆಮನದೊಳಗಿನ ಸುಂದರ ಜಗತ್ತಿನ ಅರಿವಿರಲಿ

ಮನಸು ಕಿಟಕಿಯಾದರೆ ತಲೆ ಬೆಳಕಂತೆ, ಹೃದಯ ಮಾತಿಗಿಳಿದರೆ ಕಿವಿ ಕೇಳುಗನಂತೆ… ಈಗ ಯಾಕೆ ಈ ಮಾತು ಅಂತಿದ್ದೀರಾ ? ಕೊರೊನಾ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ನಮಗೂ ಈಗ ವರ್ಕ್‌ ಫ್ರಮ್‌ ಹೋಮ್‌ ಮಾಡಿ ಅಭ್ಯಾಸ ಆಗಿದೆ. ಎಷ್ಟೋ ಜನ ಮನೆಯನ್ನೇ ಆಫೀಸು ಮಾಡಿಕೊಂಡಿದ್ದಾರೆ. ಮುಂದೆ ಮತ್ತೆ ಮಾಮೂಲಿಯ ಜಗತ್ತಿಗೆ ಹೋಗಲೇಬೇಕು.

ಆದರೆ ಯೋಚಿಸಿ, ಮನೆಯಲ್ಲಿ ಇದ್ದಾಗ ನಮ್ಮ ಮನೆಯ ಹಿರಿಯರು, ಕೆಲಸದವರು, ನೆರೆಹೊರೆಯವರನ್ನು ಮಾತನಾಡಿಸಿದಾಗ ನಾವು ಹೇಳುವ ಕೆಲವು ಸಂಗತಿಗಳನ್ನು ಕೇಳಿ ಹೌದಾ ! ಎಂದು ಆಶ್ಚರ್ಯದಿಂದ ಕೇಳಿದಾಗ, ಅಲ್ಲೇ ಇರುವ ನಮ್ಮವರು ಹೆಮ್ಮೆಯಿಂದ ನಮ್ಮತ್ತ ಒಮ್ಮೆ ನೋಡಲಿಲ್ಲವೇ ? ಮೊನ್ನೆ ಹೀಗೆ ವಾಟ್ಸಪ್‌ನಲ್ಲಿ ಒಂದು ಜೋಕ್‌ ಹರಿದಾಡುತ್ತಿತ್ತು. ವರ್ಕ್‌ ಫ್ರಮ್‌ ಹೋಮ್‌ ಬಿಟ್ಟು ಹೋಮ್‌ ವರ್ಕ್‌ ಕೊಟ್ಟರೆ ಒಳ್ಳೆಯದಿತ್ತು ಅಂತ.

ನಿಜವೇ ಅಲ್ವಾ ? ಗೊಂದಲಗಳ ಗೂಡಾದ ಮೆದುಳಿಗೆ ಒಂದು ಕಪ್‌ ಚಹಾ ತಂದು ಕೊಡುವ ಅಮ್ಮನ ಕೈ, ಮಕ್ಕಳು ಅವರವರೇ ಮಾತಾನಾಡಿಕೊಳ್ಳುವ ಮಾತುಗಳು ನಮ್ಮನ್ನು ಒಂದು ಕ್ಷಣದ ಚಿಂತೆಗೆ ದೂಡಿರುವುದು ಸುಳ್ಳಲ್ಲ. ಬದುಕು ಹಾಗೆ…ಎಣಿಸಿದಂತೆ ಹೋಗದಿದ್ದರೇ ನಾವೇ ಅಲ್ಲಿಗೆ ಹೋಗಬೇಕಾಗುತ್ತದೆ. ಈಗ ನಮಗೆ ಬಂದ ಪರಿಸ್ಥಿತಿ ಇದೆ. ಒಂದು ಹಂತದ ಮೇಲೇರಿ ನಿಂತು ಕೆಳಗೆ ನೋಡಿದಾಗ ಜೀವನ ಇಲ್ಲಿಯೇ ಚಂದವೆಂದು ಕಾಣುತ್ತದೆ. ಅದೇ ಇನ್ನೊಂದು ಮೆಟ್ಟಿಲೇರಿ ನೋಡಿದಾಗ ಮೊದಲಿನ ಸ್ಟೆಪ್‌ಗಿಂತ ಕೊನೆಯದೇ ಬೆಸ್ಟ್ ಅನಿಸುತ್ತದೆ.

ಅದೇ ವ್ಯತಿರಿಕ್ತ ಪರಿಣಾಮ ಬೀರಿದರೇ ಈಗನಿಸುವುದಿಲ್ಲವೇ ಮೊದಲಿನ ಕರೊನಾ ಲಾಕ್‌ಡೌನ್‌ ಒಳ್ಳೆಯದಿತ್ತು. ಈಗಿನಂತೆ ಅನಿಶ್ಚಿತತೆ ಇರಲಿಲ್ಲ. ಸ್ವಭಾವಜನ್ಯ ಮೆಂಟಾಲಿಟಿ ಇದು. ನೆಗೆಟಿವ್‌ ತೆಗೆದು ಒಂದಿಷ್ಟು ಪಾಸಿಟಿವ್‌ ಅಂಶಗಳಿಂದ ಈ ಕೊರೊನಾ ತೆಗೆದುಕೊಂಡು ನೋಡಿದರೆ ಆರ್ಥಿಕ ಹೊಡೆತ ಬಿಟ್ಟರೆ ಹಲವಾರು ವರ್ಷಗಳಿಂದ ಕಡಿದು ಹೋದ ಸಂಬಂಧಗಳು, ಸ್ನೇಹಿತರು, ಹೊಸ ಸಂಬಂಧ ಸಿಕ್ಕಲಿಲ್ಲವೇ? ಭಾರತೀಯ ಸಂಸ್ಕೃತಿ ಅದನ್ನೇ ಹೇಳುತ್ತಿದೆ, ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಮಾತುಗಳು ಇವೇ.

ಯುದ್ಧ ನಡೆಯುತ್ತಿದ್ದಾಗ, ಅರ್ಜುನ ತನ್ನವರನ್ನೇ ಕೊಲ್ಲಬೇಕಲ್ಲವೇ ಎಂಬ ಭಾವನೆಯಿಂದ ತನ್ನ ತೊಳಲಾಟ ಹೇಳಿದಾಗ ಕೃಷ್ಣ ಅರ್ಜುನ ನಿನ್ನ ತೊಳಲಾಟ ಸರಿ, ಆದರೆ ಒಳ್ಳೆಯದು ಜಗತ್ತಿಗೆ ಆಗುತ್ತದೆ ಅಂದಾಗ ನಿನ್ನ ಕರ್ತವ್ಯ ನೀನು ಮಾಡಲೇಬೇಕು. ಇದನ್ನು ನಾವು ಕೊರೊನಾದಿಂದ ಮಾನಸಿಕ ಒತ್ತಡದಿಂದ ಜರ್ಜರಿತವಾದವರಿಗೆ ಹೀಗೆ ಹೇಳಿದರೇ…ಇಷ್ಟು ವರ್ಷ ಹೇಗೋ ಹಣ, ಹುದ್ದೆ, ಆರ್ಥಿಕ ಸಫ‌ಲತೆ ಅಂತೆಲ್ಲ ಹೋಗಿ ಆಗಿದೆ. ಈಗ ನಮಗೊಂದು ಅವಕಾಶ ದೇವರು ಒದಗಿಸಿದ್ದಾನೆ.

ಮನೆಯವರೊಂದಿಗೆ ಕುಳಿತುಕೋ, ಮಾತಾನಾಡು, ನಗಿಸು, ನಗೆಯಾಡು, ಬಾಲ್ಯದ ತುಣುಕುಗಳನ್ನು, ಹಳೆ ಮನೆಯ ವಿನ್ಯಾಸವನ್ನು, ನಮ್ಮೂರಿನ ರಸ್ತೆಗಳನ್ನು, ಕಾಡುಗಳಲ್ಲಿರುವ ಹಣ್ಣುಗಳನ್ನು ಅಪರೂಪದ ವಸ್ತುವಿನಂತೆ ನೋಡಿದರೇ ಆಹಾ, ಎಂತಹ ಸುಂದರ ಅನುಭೂತಿ.

ಯಾರೋ ಒಬ್ಬ ಹೇಳಿದ್ದ ಅಂತೆ ಇದ್ದಾಗ ಏನೂ ಪ್ರಾಮುಖ್ಯತೆ ಪಡೆಯದ ವಸ್ತು ಇಲ್ಲದಿರುವಾಗ ಕಾಡುತ್ತದೆ. ನಿಜವೇ ಅಲ್ಲವೇ, ಈಗಲೂ ಕಾಲ ಮಿಂಚಿಲ್ಲ. ಮನೆಯಲ್ಲಿ ಕೆಲಸ ಮಾಡಿದರೂ ನಿಂತಲ್ಲಿ, ಕೂತಲ್ಲಿ, ಕೆಲಸವೇ ಕಾಡಿದರೂ ಮೊದಲು ನೀವು ಮಾಡುವುದು ಮನೆಯ ಹಿರಿಯರನ್ನು,ಮುಳ್ಳು ತುಂಬಿದ ರಸ್ತೆಗಳಲ್ಲಿ ಹೋಗಿ ಬರುವ ಅವರ ಕಾಲುಗಳನ್ನು. ನಿರ್ಜೀವ ರಸ್ತೆಗಳು ಅವರ ಪಾಲಿಗೆ ಹೇಗೆ ಸಜೀವ ವಸ್ತು ಆಯ್ತು ಎಂಬುದು ಅರ್ಥ ಆದಾಗ, ನಮಗೆ ಕುಟುಂಬದಿಂದ
ಜೀವನ ಮಾನಸಿಕ ಸದೃಢತೆ ಕೊಡುತ್ತದೆ ಎಂಬ ಅಂಶ ತಿಳಿಯುತ್ತದೆ.

ಹಲವರಲ್ಲಿ ಕುಟುಂಬ ಅಥವಾ ಪರಿವಾರ ಚಿಕ್ಕದಿದ್ದರೇ ಏನು ಮಾಡುವುದು? ಆಲೋಚನೆ ಬಂದರೇ ! ಸಿಂಪಲ್‌ ಅಕ್ಕಪಕ್ಕದವರನ್ನು, ಸಂತೆಯಲ್ಲಿ ಸಿಕ್ಕಿದವರನ್ನು ಮಾತಾನಾಡಿಸಿ. ಒಬ್ಬ ರಸ್ತೆ ಗುಡಿಸುವವನನ್ನು ಮಾತಾಡಿಸಿದರೇ ಒಂದು ಕಥೆ ತಿಳಿಯುತ್ತದೆ. ಇದರಿಂದ ನಮ್ಮ ಮಾನಸಿಕ ಒತ್ತಡ ಕಡಿಮೆ ಆಗಿ, ಕುಟುಂಬ ಸಣ್ಣದಿದ್ದರೂ ತೃಪ್ತವಾದ ಭಾವನೆ ನಮ್ಮೊಳಗೆ ಮೂಡುತ್ತದೆ.ಒಬ್ಬರ ಆಗಮನ ಇನ್ನೊಬ್ಬರ ನಿರ್ಗಮನಕ್ಕೆ ಕಾರಣವಾಗಿರುತ್ತದೆ. ಅರಿತರೇ ಜೀವನ ಸುಲಭ,
ಸರಳವಾಗಿರುತ್ತದೆ ಮಾತ್ರವಲ್ಲ ಸಂಭ್ರಮವನ್ನು ಕೊಡುತ್ತದೆ.
– ಶಾರದಾ ಭಟ್‌

ಟಾಪ್ ನ್ಯೂಸ್

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

1

Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

7

Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.