ಕೆಜಿಎಫ್: ಭಾಷೆ ಹೆಸರಿನಲ್ಲಿ ಪ್ರಚೋದನೆ
Team Udayavani, Jul 21, 2021, 7:15 PM IST
ಕೆಜಿಎಫ್: ಭಾಷೆ ಹೆಸರಿನಲ್ಲಿ ಪ್ರಚೋದನೆ ನಡೆಸಿರುವವರನ್ನು ಪೊಲೀಸ್‌ಇಲಾಖೆಈಗಾಗಲೇ ಗುರ್ತಿಸಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ಹೇಳಿದ್ದಾರೆ.
ನಗರದ ರಾಬರ್ಟಸನ್‌ಪೇಟೆ ನಗರಸಭೆ ಬಸ್‌ನಿಲ್ದಾಣದಲ್ಲಿ ತಮಿಳು ನಾಮಫಲಕ ವಿಚಾರವಾಗಿಉದ್ಬವಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನ್ನುಭೇಟಿ ಮಾಡಿದ ಕನ್ನಡ ಪರ ಸಂಘಟನೆಗಳ ಮುಖಂಡರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಯೂಟ್ಯೂಬ್ ವರದಿಗಾರರಿಗೆ ಸೂಚನೆ:ಈಗಾಗಲೇ ವಿವಾದ ಮುಗಿದಿದೆ. ಇನ್ನೂ ಪ್ರಚೋದನೆಕಾರಿಯಾಗಿ ಮಾತನಾಡುವವರ ವಿರುದ್ಧಕಾನೂನುಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆನೀಡಲಾಗಿದೆ. ಡಿವೈಎಸ್ಪಿ ಮುರಳೀಧರ್ ಅವರುನಗರದ ಯೂಟ್ಯೂಬ್ ವರದಿಗಾರರನ್ನು ಕರೆಯಿಸಿಎಚ್ಚರಿಕೆ ನೀಡಿದ್ದಾರೆ. ಪ್ರಚೋದಿತ ಹೇಳಿಕೆಗಳನ್ನುನೀಡದಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಭಾಷಾ ಸೌಹಾರ್ದತೆಗೆ ಧಕ್ಕೆ ಆಗದಿರಲಿ: ವಾಟಾಳ್ ನಾಗರಾಜ್ ನಗರಕ್ಕೆ 26 ರಂದು ಮುತ್ತಿಗೆಹಾಕುವುದಾಗಿ ಹೇಳಿದ್ದಾರೆ. ಹಿರಿಯ ಅಧಿಕಾರಿಗಳಸೂಚನೆಯಂತೆ ಅವರನ್ನು ಜಿಲ್ಲೆಯೊಳಗೆ ಬಿಡದಂತೆ ನಿರ್ಬಂಧ ಹೇರಲಾಗುವುದು. ಭಾಷಾ ಸೌಹಾರ್ದತೆ ಕುರಿತಂತೆ ಎಲ್ಲಾ ಭಾಷಿಕರ ಸಭೆ ಕರೆಯಬೇಕೆಂದು ಇಚ್ಛಿಸಲಾಗಿದೆ.ಯಾವುದೇಕಾರಣದಿಂದಲೂಭಾಷಾ ಸೌಹಾರ್ದತೆಗೆಧಕ್ಕೆ ಬರದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಕನ್ನಡ ಪರ ಸಂಘಟನೆಗಳ ಮುಖಂಡರಾದ ಎನ್.ಆರ್.ವಿಜಯಶಂಕರ್,ರಾಜಗೋಪಾಲಗೌಡ, ವಿ.ಎಸ್.ಪ್ರಕಾಶ್, ಅಶೋಕ್‌ಲೋಣಿ, ಬಾ.ಹಾ.ಶೇಖರಪ್ಪ ಕೆಜಿಎಫ್ ನಲ್ಲಿ ಕನ್ನಡಭಾಷೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.ವಾಟಾಳ್ ನಾಗರಾಜ್ ಅವರು ಇಲ್ಲಿನಕನ್ನಡ ಪರಸಂಘಟನೆಗಳ ಪ್ರತಿನಿಧಿಗಳಿಗೆ ಯಾವುದೇ ಸೂಚನೆ ನೀಡದೆ,
ಬಂದಿದ್ದಾರೆ. ಅವರಿಗೆ ನಾಮಫಲಕದಕುರಿತು ಯಾವುದೇ ರೀತಿಯ ಬೆಂಬಲ ಇಲ್ಲ. ಅದೇರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಕನ್ನಡಿಗರನ್ನು ಹೀಯಾಳಿಸುವ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಪ್ರಸನ್ನರೆಡ್ಡಿ, ಶ್ರೀನಿವಾಸ್,ಮದಿರಪ್ಪ, ನಂಜುಂಡಪ್ಪ, ಶಿವಪ್ರಕಾಶ್,ವೀರವೆಂಕಟಪ್ಪ, ವಿ.ಬಿ.ದೇಶಪಾಂಡೆಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.