ಅಶ್ಲೀಲ ಚಿತ್ರ ನಿರ್ಮಾಣದಿಂದ ರಾಜ್ ಕುಂದ್ರಾಗೆ ದಿನಕ್ಕೆ 7 ಲಕ್ಷ ರೂ. ಆದಾಯ!
ವಿವಿಧ ಬ್ಯಾಂಕ್‌ಗಳಲ್ಲಿದ್ದ ಸುಮಾರು 7.31 ಕೋಟಿ ರೂ. ಗಳನ್ನು ಜಪ್ತಿ ಮಾಡಿದ್ದಾರೆ.
Team Udayavani, Jul 22, 2021, 11:52 AM IST
ಮುಂಬೈ: ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸುವ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ದಿನಕ್ಕೆ 7 ಲಕ್ಷ ರೂ. ಆದಾಯವಿತ್ತು ಎಂಬ ಹೊಸ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ವರಿಷ್ಠರ ತೀರ್ಮಾನವೇ ಅಂತಿಮ: ಸ್ವಾಮೀಜಿಗಳ ಭೇಟಿ ವೇಳೆ ಯಡಿಯೂರಪ್ಪ ಹೇಳಿಕೆ
ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಂಬೈನ ಸಹಾಯಕ ಪೊಲೀಸ್ ಆಯುಕ್ತ ಮಿಲಿಂದ್ ಭ್ರರಾಂಬೆ, ಕುಂದ್ರಾ ಅವರು ಕೇವಲ 18 ತಿಂಗಳ ಹಿಂದಷ್ಟೇ ಅಶ್ಲೀಲಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದರು. ಇವರ ಈ ವ್ಯಾಪಾರ ಲಾಕ್‌ಡೌನ್ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿತ್ತು. ದಿನವೊಂದಕ್ಕೆ ಇವರ ಗಳಿಕೆ 7ರಿಂದ 8 ಲಕ್ಷ ರೂ. ಇತ್ತು ಎಂದು ತಿಳಿಸಿದ್ದಾರೆ.
ಇನ್ನು, ತನಿಖೆಯು ಪ್ರಗತಿಯಲ್ಲಿರುವಂತೆ, ಕುಂದ್ರಾ ಅಶ್ಲೀಲ ಸಿನಿಮಾಗಳನ್ನು, ಲಂಡನ್‌ನಲ್ಲಿರುವ ಕೆನ್ರಿನ್ ಎಂಬ ಕಂಪನಿಯೊಂದಕ್ಕಾಗಿ ಸೃಷ್ಟಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಕೆನ್ರಿನ್ ಕಂಪನಿಯ ಮಾಲಿಕ ಪ್ರದೀಪ್ ಭಕ್ಷಿ, ಕುಂದ್ರಾ ಅವರ ಭಾವ ಎನ್ನುವುದು ಇನ್ನೊಂದು ಆರೋಪ. ಈ ಸಂಸ್ಥೆ,ಕೆನ್ರಿನ್ ಹಾಟ್‌ಶಾಟ್ಸ್ ಎಂಬ ಆ್ಯಪ್ ಹೊಂದಿದೆ. ಕುಂದ್ರಾ ತಯಾರಿಸುತ್ತಿದ್ದ ಅಶ್ಲೀಲ ಚಿತ್ರಗಳು, ಕೆನ್ರಿನ್ ಆ್ಯಪ್ ಮತ್ತಿತರ ಆ್ಯಪ್ ಗಳ ಮೂಲಕ ಬಿತ್ತರಗೊಳ್ಳುತ್ತಿದ್ದವು ಎನ್ನಲಾಗಿದೆ.
ಈ ಕುರಿತು ಇಬ್ಬರ ನಡುವೆ ನಡೆದವಾಟ್ಸ್‌ಆ್ಯಪ್ ಸಂಭಾಷಣೆ, ಹಣಕಾಸು ರವಾನೆಗಳ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕುಂದ್ರಾಗೆ ಸಂಬಂಧಿಸಿದ ವಿವಿಧ ಬ್ಯಾಂಕ್‌ಗಳಲ್ಲಿದ್ದ ಸುಮಾರು 7.31 ಕೋಟಿ ರೂ. ಗಳನ್ನು ಜಪ್ತಿ ಮಾಡಿದ್ದಾರೆ.
ಪ್ಲ್ರಾನ್ ಬಿ ಕೂಡಾ ಇತ್ತು!: ರಾಜ್ ಕುಂದ್ರಾ ತಮ್ಮ ಬಂಧನವಾದರೆ ಇರಲಿ ಎಂದು ” ಪ್ಲ್ಯಾನ್ ಬಿ’ಯನ್ನು ಹೊಂದಿದ್ದರು. ಅಂದರೆ ಈ ಕೃತ್ಯದಲ್ಲಿ ಸಿಕ್ಕಿಬಿದ್ದರೆ, ತಮ್ಮ ನೀಲಿಚಿತ್ರಗಳು ಸರಾಗವಾಗಿ ಓಡಲಿ ಎಂದು ಬಾಲಿಫೇಮ್ ಎಂಬ ಹೆಸರಿನ ಇನ್ನೊಂದು ಆ್ಯಪ್ ಕುಂದ್ರಾ ಹೊಂದಿದ್ದರು ಎಂದು ಹೇಳಲಾಗಿದೆ.
ಇದೇ ವೇಳೆ ಈ ಅಶ್ಲೀಲ ಚಿತ್ರಗಳೊಂದಿಗೆ ಸಂಬಂಧ ಹೊಂದಿದ್ದಾರೆನ್ನಲಾಗಿರುವ ರೂಪದರ್ಶಿಗಹನಾವಶಿಷ್ಠ, “ಕುಂದ್ರಾ ನಿರ್ಮಿಸಿದ ಚಿತ್ರಗಳು ಅಶ್ಲೀಲವಲ್ಲ, ಇದರಲ್ಲಿ ನಟಿಸಿರುವವರಿಗೆ ಯಾವುದು ಸರಿ, ತಪ್ಪು ಎಂಬ ಅರಿವಿದೆ. ಈ ಚಿತ್ರಗಳು ಕೇವಲ ಬಿಚ್ಚುಮನವನ್ನು ಹೊಂದಿವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.