ಪಿಯುಸಿ ಬಳಿಕ ಸೃಜನಶೀಲ ಅವಕಾಶ : ದೃಶ್ಯಕಲಾ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳು


Team Udayavani, Jul 24, 2021, 6:40 AM IST

ಪಿಯುಸಿ ಬಳಿಕ ಸೃಜನಶೀಲ ಅವಕಾಶ : ದೃಶ್ಯಕಲಾ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳು

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದೇನು? ಎಂಬುದು ಹೆತ್ತವರಿಗೆ ದೊಡ್ಡ ಸವಾಲು.ಆದರೆ ಹೆತ್ತವರು ಹಾಗೂ ವಿದ್ಯಾರ್ಥಿಗಳು ಸೃಜನಶೀಲವಾದ ಪ್ರಾಯೋಗಿಕ ಶಿಕ್ಷಣದ ಆಯ್ಕೆ ಮಾಡಿದಲ್ಲಿ ಸ್ವಾವಲಂಬಿ ಬದುಕು, ನಿರಂತರ ಜೀವನೋತ್ಸಾಹದ ಶಿಕ್ಷಣ, ಅಂಕಗಳ ಪ್ರಾಧಾನ್ಯದಿಂದ ಹೊರತಾದ, ಸಾಂಪ್ರದಾಯಿಕ ಶಿಕ್ಷಣದ ಸಮಾಜದ ನಡುವೆ ವೈಯಕ್ತಿಕವಾಗಿ ಸಾಧಿಸುವ, ಗುರುತಿಸಿಕೊಳ್ಳುವ ಸೃಜನಾತ್ಮಕವಾದ ಜೀವನ ರೂಪಿಸಿಕೊಳ್ಳುವಲ್ಲಿ ದೇಶಾತೀತ, ಭಾಷಾತೀತ ಚಿತ್ರಕಲಾ ಶಿಕ್ಷಣ ಭರವಸೆಯನ್ನು ಮೂಡಿಸಬಲ್ಲದು.

ಬೇರೆ ಎಲ್ಲ ಕೋರ್ಸ್‌ಗಳಲ್ಲಿ ಇಂತಿಷ್ಟೇ ಅಂಕಗಳು ಹಾಗೂ ಇಂತಹ ದರ್ಜೆ ಗಳಿಸಲೇಬೇಕಾದುದು ಅನಿವಾರ್ಯವಾಗಿದ್ದರೆ ಇಲ್ಲಿ ವಿದ್ಯಾರ್ಥಿಗೆ ಅಂಕಗಳ ಹಂಗಿಲ್ಲದೆ ಅವರ ಸೃಜನಶೀಲತೆಗೆ ಹೆಚ್ಚು ಮಹತ್ವವಿದೆ. ಅಲ್ಲದೆ ವೃತ್ತಿಗೆ ಅಯ್ಕೆಗೊಳ್ಳಲು ಪಾಸ್‌/ಫೇಲ್‌ಗಿಂತ ಅವರ ಸೃಜನಶೀಲತೆಗೆ ಹೆಚ್ಚು ಮಹತ್ವವಿರುವುದರಿಂದ ವಿದ್ಯಾರ್ಥಿಗೆ ಆಕಾಶವೇ ಅವಕಾಶವಾಗಿದೆ.
ಭಾರತ ಸರಕಾರ ಹೊಸ ಶಿಕ್ಷಣ ನೀತಿ ಸಂಹಿತೆಯಲ್ಲಿ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತನ್ನು ನೀಡಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಚಿತ್ರಕಲೆಯನ್ನು ಒಂದು ಅಧ್ಯಯನ ವಿಷಯವಾಗಿ ಪರಿಗಣಿಸಿ ಈ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದೆ.
ಸಾಮಾನ್ಯ ಪದವಿಯಂತೆಯೇ ದೃಶ್ಯಕಲಾ (ಚಿತ್ರಕಲಾ ಪದವಿ) ಪದವಿ ಕೂಡ ಇದಾಗಿದೆ.

ಈ ದೃಶ್ಯಕಲಾ ಪದವಿ (ಬಿ.ವಿ.ಎ/ಬಿ.ಎಫ್.ಎ) ಅನೌಪಚಾರಿಕ ಶಿಕ್ಷಣವಾಗಿದ್ದು ಎಂಟು ವಿಭಾಗಗಳ ಅಡಿಯಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ.ಇದರಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌.ಡಿ. ತನಕ ಶಿಕ್ಷಣ ಲಭ್ಯವಿದೆ.

ಪಿಯುಸಿ ಪಾಸಾದ ಸೃಜನಶೀಲ ವಿದ್ಯಾರ್ಥಿಗಳಿಗೆ ಬಿ.ವಿ.ಎ ( ದೃಶ್ಯಕಲಾ ಪದವಿ) ಅವಧಿ 4 ವರ್ಷ ( 1 ವರ್ಷದ ದೃಶ್ಯಕಲಾ ಫೌಂಡೇಶನ್‌ ಸೇರಿ)

ಪ್ರವೇಶ ಅರ್ಹತೆ
ಪಿಯುಸಿ ಅಥವಾ 10+2 ತತ್ಸಮಾನ /ಡಿಪ್ಲೊಮಾ, ಅಥವಾ ಐಟಿಐ ಪಾಸಾಗಿರಬೇಕು

ವಿಭಾಗಗಳು
ಚಿತ್ರಕಲಾ ವಿಭಾಗ ಶಿಲ್ಪಕಲಾ ವಿಭಾಗ ಅನ್ವಯಿಕ ಕಲಾ ವಿಭಾಗ ಗ್ರಾಫಿಕ್‌ ಕಲಾ ಇತಿಹಾಸ ಫೋಟೋಗ್ರಫಿ ವಾಸ್ತು ಶಿಲ್ಪ ಟೆಕ್‌ಸ್ಟೆಲ್‌ ಸಿರಾಮಿಕ್‌ ಮುಂತಾದವುಗಳು.

ಹೆಚ್ಚಿನ ಶಿಕ್ಷಣ
ಎಂ.ವಿ.ಎ/ಎಂ.ಎಫ್.ಎ ಸ್ನಾತ್ತಕೋತ್ತರ ಪದವಿ- ಪಿಎಚ್‌.ಡಿ./ ಡಿ.ಲಿಟ್‌ ತನಕ ಅವಕಾಶ ದೃಶ್ಯಕಲಾ ಪದವಿ (ಬಿ.ವಿ.ಎ/ಬಿ.ಎಫ್.ಎ) ಪಾಸಾಗಿರಬೇಕು.

ಸೌಲಭ್ಯಗಳು
ಸರಕಾರದಿಂದ ಹಾಗೂ ಇತರ ಶಿಕ್ಷಣಕ್ಕೆ ದೊರೆಯುವ ಎಲ್ಲ ಮೂಲಭೂತ ಸೌಲಭ್ಯಗಳು ಲಭ್ಯ ಹಾಸ್ಟೆಲ್, ವಿದ್ಯಾರ್ಥಿ ವೇತನ, ಬಸ್‌ಪಾಸ್‌, ಫೆಲೋಶಿಪ್‌ ಇತ್ಯಾದಿಗಳು ಲಭ್ಯ. ವಿಶೇಷಚೇತನರಿಗೆ ( ಕಿವುಡ/ ಮೂಗ) ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಪದವಿ ತನಕ ಅವಕಾಶ. ವಿಶೇಷ ಚೇತನರಿಗೆ ಭಾಷಾ ವಿಷಯ ಹಾಗೂ ಥಿಯರಿ (ಸಿದ್ಧಾಂತದ) ಬದಲಿಗೆ ಕೇವಲ ಪ್ರಾಯೋಗಿಕ ಪರೀಕ್ಷೆಗಳಿರುತ್ತವೆ.

ಅನಿಮೇಶನ್‌ ( ಡಿಜಿಟಲ್‌ ಸೆಂಟರ್‌)
ಕರ್ನಾಟಕ ಸರಕಾರದ ಐಟಿ, ಬಿಟಿ ಇಲಾಖೆ , ಎಸ್‌ ಟಿ ಹಾಗೂ ಅಭಯ್‌ ಸಂಸ್ಥೆಯ ಮುಖಾಂತರ ಗ್ರಾಮಾಂತರ ಸೃಜನಶೀಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯದ ಗುಣಮಟ್ಟ ಆಧಾರಿತ 31 ಜಿಲ್ಲೆಗಳಲ್ಲಿ 27 ದೃಶ್ಯಕಲಾ ಕಾಲೇಜಿಗೆ ಅನಿಮೇಶನ್‌ ಡಿಜಿಟಲ್‌ ಸೆಂಟರ್‌ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಅನಿಮೇಶನ್‌ ತಂತ್ರಜ್ಞಾನದ ಶಿಕ್ಷಣವನ್ನು ಜೊತೆಗೆ ನೀಡುತ್ತಿದೆ. ಕೆಲವು ವಿದ್ಯಾಲಯಗಳು ಹೀಗಿವೆ:
– ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ – ಚಿಕ್ಕಮಗಳೂರು
– ಶ್ರೀ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯ-ಮೈಸೂರು
– ಮಹಾಲಸ ಚಿತ್ರಕಲಾ ಮಹಾವಿದ್ಯಾಲಯ-ಮಂಗಳೂರು
– ರವೀಂದ್ರ ಕಲಾನಿಕೇತನ, ತುಮಕೂರು
– ಶ್ರೀ ರವಿವರ್ಮ ಚಿತ್ರಕಲಾ ಶಾಲೆ – ಮೈಸೂರು
– ಶ್ರೀ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ- ಹುಮನಾಬಾದ್‌
– ಕರ್ನಾಟಕ ಚಿತ್ರಕಲಾ ಪರಿಷತ್‌, ಬೆಂಗಳೂರು
– ದಾವಣಗೆರೆ ಚಿತ್ರಕಲಾ ಮಹಾವಿದ್ಯಾಲಯ ಹಾಗೂ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಚಿತ್ರಕಲಾ ಕಾಲೇಜುಗಳಿವೆ.

ಅನಿಮೇಶನ್‌ ಶಿಕ್ಷಣ
– 2ಡಿ, ಡಿಜಿಟಲ್‌ ಆರ್ಟ್‌, ಇಲಸ್ಟ್ರೇಶನ್‌, ಆ್ಯಪ್‌ ಡಿಸೈನ್‌, ವೆಬ್‌ ಡಿಸೈನ್‌, ಮ್ಯಾಟ್‌ ಆರ್ಟ್‌ ಗ್ರಾಫಿಕ್‌ ಡಿಸೈನ್‌ ಯು ಐ, ಯುಎಕÕ… ಕಲಿಸಲಾಗುತ್ತಿದೆ.
– 3ಡಿ, 3ಡಿ ಮಾಡಲಿಂಗ್‌ , 3ಡಿ ಆರ್ಕಿಟೆಕ್ಚರಲ್‌ ವಿನ್ಯಾಸ
– ಕ್ಯಾರೆಕ್ಟರ್‌ ಡಿಸೈನ್‌
– ಅನಿಮೇಶನ್‌ ಪೂರಕ ವಿನ್ಯಾಸಗಳ ಕಲಿಕೆ
– ವಿ ಎಫ್.ಎಕ್ಸಾಮ್, ಚಲನಚಿತ್ರ ಆಧಾರಿತ ಎಡಿಟಿಂಗ್‌, ವೀಡಿಯೋ ಎಫೆಕr…
– ಅನಿಮೇಶನ್‌ ಪೂರಕವಾದ ಎಡಿಟಿಂಗ್‌ ಮುಂತಾದವು .

ಉದ್ಯೋಗಾವಕಾಶಗಳು
ಬಿವಿಎ ಪದವಿ ಪಡೆದ ಅಭ್ಯರ್ಥಿಗಳು ಆರ್ಟ್‌ ಸ್ಟುಡಿಯೋಗಳು, ವಸ್ತು ಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು, ಚಲನಚಿತ್ರೋದ್ಯಮ, ದೂರದರ್ಶನ ಉದ್ಯಮ, ಫೋಟೋ ಸ್ಟುಡಿಯೋಗಳು, ಬಟ್ಟೆ ಉದ್ಯಮ ಮುಂತಾದ ಸ್ಥಳಗಳಲ್ಲಿ ಅಪಾರ ಉದ್ಯೋಗಾವಕಾಶಗಳನ್ನು ಹೊಂದಿದ್ದಾರೆ. ಆಸಕ್ತ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಕೂಡಾ ಮಾಡಬಹುದು ಮತ್ತು ವಿವಿಧ ಆರ್ಟ್‌ ಗ್ಯಾಲರಿಗಳು ಮತ್ತು ಸ್ಟುಡಿಯೋಗಳಲ್ಲಿ ತಮ್ಮ ಕೆಲಸವನ್ನು ಪ್ರದರ್ಶಿಸಬಹುದು.

ಚಿತ್ರಕಲಾ ಕ್ಷೇತ್ರದ ಯಾವುದೇ ಪದವಿ ಪಡೆದರೂ ಸೃಜನ ಶೀಲವಾದ ಕ್ಷೇತ್ರವಾಗಿರುವುದರಿಂದ 150ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಇವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕಲಾ ನಿರ್ದೇಶಕ, ವಿಶುವಲ್‌ ಆರ್ಟಿಸ್ಟ್, ವಿಶುವಲ್‌ ಡಿಸೈನರ್‌, ಆರ್ಟ್‌ ಕನ್ಸರ್ವೇಟರ್‌, ಕಲಾ ವಿಮರ್ಶಕ, ವರ್ಣಚಿತ್ರಕಾರ, ಗ್ರಾಫಿಕ್‌ ಡಿಸೈನರ್‌, ವ್ಯಂಗ್ಯಚಿತ್ರಕಾರ ಮುಂತಾದ ಹುದ್ದೆಗಳನ್ನು ಪಡೆಯಬಹುದು.

ಅನಿಮೇಶನ್‌ ( ಡಿಜಿಟಲ್‌ ಸೆಂಟರ್‌)
ಪದವಿ ಪೂರ್ಣಗೊಳಿಸಿದ ಬಳಿಕ ಮಲ್ಟಿಮೀಡಿಯಾ ಆರ್ಟಿಸ್ಟ್, ಆರ್ಟ್‌ ಡೈರೆಕ್ಟರ್‌, ಆರ್ಟ್‌ ಟೀಚರ್‌, ಡೈರೆಕ್ಟರ್‌, ಪೇಂಟರ್‌, ಕ್ರಾಫ್ಟ್ ಆರ್ಟಿಸ್ಟ್, ಕ್ರಿಯೇಟಿವ್‌ ಡೈರೆಕ್ಟರ್‌, 3ಡಿ ಆರ್ಟಿಸ್ಟ್ ಅಥವಾ ಗ್ರಾಫಿಕ್ಸ್ ಡಿಸೈನರ್‌ ಆಗಬಹುದು. ಇದರ ಜತೆಗೆ ಮ್ಯೂಸಿಯಂ, ಆರ್ಟ್‌ ಗ್ಯಾಲರಿ, ಥಿಯೇಟರ್‌, ಪ್ರೊಡಕ್ಷನ್‌ ಹೌಸ್‌, ಜಾಹೀರಾತು ಸಂಸ್ಥೆ, ಪ್ರಕಾಶನ, ಮೀಡಿಯಾ ಹೌಸ್‌ ಮೊದಲಾದ ಕಡೆ ಕೂಡ ಕೆಲಸ ಮಾಡಬಹುದಾಗಿದೆ. ಬಹು ವಿಷಯಗಳಲ್ಲಿ ಸ್ಪೆಷಲೈಸೇಶನ್‌ ಪಡೆಯಲು ವಿದ್ಯಾರ್ಥಿಗಳು ಪದವಿಯ ಜೊತೆಗೆ ಅನಿಮೇಶನ್‌ನಲ್ಲಿ ಡಿಪ್ಲೊಮಾ ಅಥವಾ ಸರ್ಟಿಫಿಕೆಟ್‌ ಕೋರ್ಸ್‌ ಮಾಡಬಹುದಾಗಿದೆ. ಅನಿಮೇಶನ್‌ನಲ್ಲಿ ಬ್ಯಾಚುಲರ್‌ ಡಿಗ್ರಿ ಪೂರ್ಣಗೊಳಿಸಿದ ಬಳಿಕ ಟೆಕ್ಸcರ್‌ ಆರ್ಟಿಸ್ಟ್, ಕ್ಯಾರೆಕ್ಟರ್‌ ಮಾಡ್ಯುಲರ್‌, ಕ್ಯಾರೆಕ್ಟರ್‌ ಅನಿಮೇಟರ್‌, ಸ್ಟೋರಿ ಬೋರ್ಡ್‌ ಆರ್ಟಿಸ್ಟ್, ಕಾನ್ಸೆಪುcವಲ್‌ ಇಲಸ್ಟ್ರೇಟರ್‌, ವಿಎಫ್ಎಕ್ಸ್ ಅನಿಮೇಟರ್‌, ವೀಡಿಯೋ ಗೇಮಿಂಗ್‌, ಪೊ›ಡಕ್ಷನ್‌ ಹೌಸ್‌, ಮೊಬೈಲ್‌ ಆ್ಯಪ್‌ ಡೆವಲಪರ್‌ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ.

ಕಮರ್ಷಿಯಲ್‌ ಆರ್ಟ್ಸ್ನಲ್ಲಿ ಬಿ.ವಿ.ಎ ಮಾಡಿದರೆ ಡಿಸೈನಿಂಗ್‌ ಮತ್ತು ಅಡ್ವರ್ಟೆçಸಿಂಗ್‌ ಮಿಶ್ರಣ ಕಲಿಕೆ ಮಾಡಬೇಕಾಗುತ್ತದೆ. ಕಮ್ಯೂನಿಕೇಶನ್‌ ಡಿಸೈನ್‌, ಬ್ರಾಂಡಿಂಗ್‌, ವಿಷ್ಯುವಲ್‌ ಕಮ್ಯುನಿಕೇಶನ್‌ ಮತ್ತು ಫೋಟೋಗ್ರಫಿ ಇದರಲ್ಲಿ ಸೇರಿರುತ್ತದೆ. ಇನ್ನು ಪೇಂಟಿಂಗ್‌ ಕಲಿಯ ಬಯಸುವ ವಿದ್ಯಾರ್ಥಿಗಳಲ್ಲಿ ಕ್ರಿಯೇಟಿವಿಟಿ ಹೆಚ್ಚಿರಬೇಕು. ಅದರಲ್ಲೂ ಮುಖ್ಯವಾಗಿ ಸುಂದರವಾಗಿ ಚಿತ್ರ ಬಿಡಿಸುವ ಸಾಮರ್ಥ್ಯ ಅವರಿಗೆ ಇನ್ನಷ್ಟು ಲಾಭ ತಂದುಕೊಡುತ್ತದೆ.

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.