ಯಡಿಯೂರಪ್ಪ ಮುಂದುವರಿಯಲಿ, ಬದಲಾದರೆ ಈಶ್ವರಪ್ಪಗೆ ಅವಕಾಶ ಕೊಡಿ: ಕುರುಬ ಸಮಾಜ ಆಗ್ರಹ
Team Udayavani, Jul 24, 2021, 12:07 PM IST
ವಿಜಯಪುರ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಮಾಡಬೇಡಿ. ಒಂದೊಮ್ಮೆ ಅವರನ್ನು ಸಿಎಂ ಸ್ಥಾನದಿಂದ ಬದಲಿಸಿದರೆ, ಬಿಜೆಪಿ ಕಟ್ಟುವಲ್ಲಿ ಶ್ರಮಿಸಿದ ಕೆ.ಎಸ್. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ನೀಡಬೇಕು ಎಂದು ವಿಜಯಪುರ ಕುರುಬ ಸಮಾಜ ಆಗ್ರಹಿಸಿದೆ.
ಶನಿವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಖಣಾಪೂರ ಸೋಮೇಶ್ವರ ಶ್ರೀಗಳು, ಹುಲಜಂತಿ ಮಾಳಿಂಗರಾಯ ಮಹಾರಾಜರು, ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಅಂಬೇಡ್ಕರ್ ಗೆ ಅತೀ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್: ನಳಿನ್ ಕಟೀಲ್ ವಾಗ್ದಾಳಿ
ಯಡಿಯೂರಪ್ಪ, ಅನಂತ್ ಕುಮಾರ ಹಾಗೂ ಈಶ್ವರಪ್ಪ ಅವರು ಸೈಕಲ್ ಮೇಲೆ ತಿರುಗಿ ಪಕ್ಷ ಕಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರನ್ನು ಬದಲಿಸಿದರೆ ಹಿಂದುಳಿದ ವರ್ಗಗಳ ನಾಯಕರಾಗಿರುವ ಹಿರಿಯ ನಾಯಕರೂ ಆಗಿರುವ ಈಶ್ವರಪ್ಪ ಅವರು ಎಂದೂ ನನ್ನನ್ನು ಮುಖ್ಯಮಂತ್ರಿ ಮಾಡಿ ಕೇಳಿಲ್ಲ. ಹೀಗಾಗಿ ಎರಡು ವರ್ಷದ ಉಳಿಕೆ ಅವಧಿಗೆ ಅವಕಾಶ ನೀಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಆಗ್ರಹಿಸಿದರು.
ಒಂದೊಮ್ಮೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಮಾಡಿದಲ್ಲಿ ಈಶ್ವರಪ್ಪ ಅವರಿಗೆ ಅವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಇಷ್ಟಕ್ಕೂ ಈಶ್ವರಪ್ಪ ಸಿಎಂ ಆಗುವ ಸಮರ್ಥ ನಾಯಕರಾಗಿದ್ದು, ಪಕ್ಷಕ್ಕೆ ದುಡಿದಿರುವರಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು
ಯಡಿಯೂರಪ್ಪ ಅವರ ಸಮಕಾಲೀನ, ಪಕ್ಷದ ನಿಷ್ಠಾವಂತ ನಾಯಕ ಈಶ್ವರಪ್ಪ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ. ತಮಗಿಂತ ಬಿಜೆಪಿ ಪಕ್ಷದಲ್ಲಿ ಕಿರಿಯರಾಗಿದ್ದ ಸದಾನಂದ ಗೌಡ, ಜಗದೀಶ ಶಟ್ಟರ ಸಿಎಂ ಆದರೂ ಪಕ್ಷದಲ್ಲಿ ಹಿರಿಯರಾಗಿದ್ದ ಈಶ್ವರಪ್ಪ ನನ್ನನ್ನು ಸಿಎಂ ಮಾಡಿ ಎಂದು ಕೇಳದೇ ಪಕ್ಷನಿಷ್ಠೆ ತೋರಿದ್ದಾರೆ ಎಂದು ವಿವರಿಸಿದರು.
ಹಾಲಿ ಬಿಜೆಪಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ 17 ಶಾಸಕರಲ್ಲಿ ಎಚ್.ವಿಶ್ವನಾಥ, ಭೈರತಿ ಬಸವರಾಜ, ಆರ್.ಶಂಕರ್, ಎಂ.ಟಿ.ಬಿ.ನಾಗರಾಜ ಹಾಲುಮತ ಸಮಾಜಕ್ಕೆ ಸೇರಿದ್ದು, ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾದರೆ ಲಿಂಗಾಯತರಿಗೆ ಮತ್ತೆ ಆದ್ಯತೆ ನೀಡಿದರೆ ಬಿಜೆಪಿ ಪಕ್ಷಕ್ಕೆ ಶಕ್ತಿ ಬರಲಿದೆ ಎಂದರು.
ಹನುಮಾಪುರ ಅಮರೇಶ್ವರ ಮಹಾರಾಜರು, ಅರಕೇರಿ ಅಮೋಘಸಿದ್ಧೇಶ್ವರ ಮಠದ ಶ್ರೀಗಳು, ಕುರುಬ ಸಮುದಾಯದ ರಾಜು ಕಂಬಾಗಿ, ರಾಜು ಬಿರಾದಾರ, ಶಿಲ್ಪಾ ಕುದರಗೊಂಡ, ಸಾಬು ಮಾಶಾಳ, ರವಿ ಕಿತ್ತೂರ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.