ಯಡಿಯೂರಪ್ಪನವರಿಗೆ ನಮ್ಮ ಅವಶ್ಯಕತೆಯಿಲ್ಲ:ಮಠಾಧಿಪತಿಗಳ ಸಮಾವೇಶದ ಬಗ್ಗೆ ಷಡಕ್ಷರಿ ಶ್ರೀ ಹೇಳಿಕೆ
Team Udayavani, Jul 24, 2021, 4:31 PM IST
ಬೆಂಗಳೂರು: ರಾಜ್ಯದ ವಿವಿಧ ಭಾಗಗಳ ಮಠಾಧಿಪತಿಗಳ ಮಹಾ ಸಮಾವೇಶವು ಭಾನುವಾರ ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ ಗೇಟ್ ನಂ 3 ರಲ್ಲಿ ನಡೆಯಲಿದೆ. ಈ ಕುರಿತು ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಪರವಾಗಿ ಈ ಸಮಾವೇಶವೇ ಎಂಬ ಪ್ರಶ್ನೆಗೆ ಉತ್ತರಿಸಿದ ತಿಪಟೂರಿನ ಷಡಕ್ಷರಿ ಮಠದ ಶ್ರೀ ಡಾ. ರುದ್ರಮುನಿ ಮಹಾಸ್ವಾಮಿಗಳು, ‘ಯಡಿಯೂರಪ್ಪನವರಿಗೆ ನಮ್ಮ ಅವಶ್ಯಕತೆಯಿಲ್ಲ. ಅವರ ಕೊಡುಗೆಯಿದೆ, ಅದೇ ಸಾಕು ಅವರಿಗೆ’ ಎಂದರು.
ಸ್ವಾಮೀಜಿಗಳು ಹೋದ ಕೂಡಲೇ ರಾಜೀನಾಮೆ ವಾಪಾಸ್ ಪಡೆಯಲ್ಲ. ನಾವು ಸಾವಿರ ಜನ ಸೇರಿದ ಕೂಡಲೇ ಯಡಿಯೂರಪ್ಪ ಮೇಲಕ್ಕೆ ಬರಲ್ಲ. ನಾವು ಯಾರೂ ಬೇಕಾಗಿಲ್ಲ ಅವರಿಗೆ. ನಾವು ಅವರನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತೇವೆ ಎನ್ನುವುದ ತಪ್ಪು. ಎಲ್ಲಾ ಕ್ಷೇತ್ರಗಳಲ್ಲಿ ಯಡಿಯೂರಪ್ಪನವರ ಕೊಡುಗೆ ದೊಡ್ಡದು. ನಮ್ಮಿಂದ ಅವರು ಎನ್ನುವುದು ಸುಳ್ಳು ಎಂದರು.
ನಾಡಿನ ಹಿತದೃಷ್ಟಿಯಿಂದ ಜೊತೆಗೆ, ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಾಡಿನ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಹತ್ವದ ನಿರ್ಣಯ ಕೈಗೊಳ್ಳುವ ಸದುದ್ದೇಶವೊಂದಿದೆ. ರಾಜ್ಯದ ಎಲ್ಲಾ ಸಮಾಜದ ಮಠಾಧೀಶರು ಭಾಗಿಯಾಗುತ್ತಾರೆ. ಬೇರೆ ರಾಜ್ಯಗಳಿಂದಲೂ ಮಠಾಧೀಶರು ಸೇರಿ, ಸುಮಾರು ಸಾವಿರಕ್ಕೂ ಹೆಚ್ಚು ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ಇದನ್ನೂ ಓದಿ:ಶಿವಮೊಗ್ಗ ಕೃಷಿ ವಿವಿ ಗೆ ಶಿವಪ್ಪ ನಾಯಕ ಕೃಷಿ ವಿವಿ ಎಂದು ನಾಮಕರಣ: ಸಿಎಂ ಘೋಷಣೆ
ಪ್ರಸ್ತುತ ಮಠಗಳ ಪಾತ್ರ, ದೇಶಕ್ಕೆ ಮಠಗಳ ಕೊಡುಗೆ, ಮಠಗಳ ಬಗ್ಗೆ ತಪ್ಪು ಸಂದೇಶದ ಸ್ಪಷ್ಟಿಕರಣ, ಮಠಗಳ ಹಾಗೂ ಭಕ್ತರ ನಡುವಿನ ಭಾಂಧವ್ಯ ವೃದ್ಧಿಸುವುದು, ಯಡಿಯೂರಪ್ಪನವರನ್ನು ಮಠಾಧೀಶರು ಆಶೀರ್ವದಿಸಿ ಬಗ್ಗೆ, ಮುಂಬರುವ ಕೋವಿಡ್ ಮೂರನೇ ಅಲೆಯಯ ಬಗ್ಗೆ ಜಾಗೃತಿ ಮುಂತಾದವುಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.
ಬಾಳೆಹೊಸೂರು ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ, ಕೆಲವು ಸಂಶಯಗಳನ್ನ ಪರಿಹರಿಸಬೇಕಾಗಿದೆ. ಯಾವುದೇ ರಾಜಕೀಯ ಉದ್ದೇಶದಿಂದ ಸಮಾವೇಶ ಹಮ್ಮಿಕೊಂಡಿಲ್ಲ. ಈ ಸಮಾವೇಶಕ್ಕೆ ರಾಜಕಾರಣಿಗಳು, ಸಾರ್ವಜನಿಕರು ಬರುವಂತಿಲ್ಲ, ಇದು ಕೇವಲ ಮಠಾಧೀಶರ ವೇದಿಕೆ ಅಷ್ಟೇ ಎಂದರು.
ಯಡಿಯೂರಪ್ಪ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಪಂಚಮಸಾಲಿ ಸುಮುದಾಯಕ್ಕೆ ಸಿಎಂ ಸ್ಥಾನ ನೀಡುವ ವಿಚಾರದಲ್ಲಿ ಅದು ಅವರವರ ಅಭಿಪ್ರಾಯಗಳು. ಮಠಾಧಿಪತಿಗಳಲ್ಲಿ ವಿಶ್ವಾಸವಿದೆ, ನಾವೆಲ್ಲಾ ಒಂದೇ. ಒಳಪಂಗಡಗಳಲ್ಲಿ ಭಿನ್ನಾಬಿಪ್ರಾಯಗಳಿವೆ ಆದರೆ ದೇಶದ ಹಿತಕ್ಕಾಗಿ ನಾವೆಲ್ಲ ಒಂದೇ. ತಪ್ಪು ಕಲ್ಪನೆಗಳಿಗೆ ಸಮಾವೇಶದಲ್ಲಿ ಉತ್ತರ ನೀಡುತ್ತೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.