ಕುದೂರಲ್ಲಿ ಬೀದಿನಾಯಿ, ಕೋತಿಗಳ ಹಾವಳಿ


Team Udayavani, Jul 24, 2021, 5:14 PM IST

street dog problem

ಕುದೂರು: ನಗರದಲ್ಲಿ ಬೀದಿನಾಯಿ ಮತ್ತುಮಂಗಗಳು ಹೆಚ್ಚಾಗಿದ್ದು, ಸ್ಥಳೀಯರುಅಂತಕಕ್ಕೀಡಾಗಿದ್ದಾರೆ. ನಾಯಿಗಳ ಉಪಟಳಕ್ಕೆಪ್ರತಿನಿತ್ಯ ಸಾರ್ವಜನಿಕರು ತಮ್ಮ ಜೀವವನ್ನು ಕೈಯಲ್ಲಿಹಿಡಿದುಕೊಂಡು ರಸ್ತೆಯಲ್ಲಿ ಸಂಚಾರ ಮಾಡಬೇಕಾದಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ಗ್ರಾಮಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳಉಪಟಳಕ್ಕೆ ಕಡಿವಾಣ ಹಾಕಬೇಕಾಗಿ ಸಾರ್ವಜನಿಕರು ಅಗ್ರಹಿಸಿದ್ದಾರೆ.

ಕುದೂರಿನ ವಿವಿಧ ಭಾಗದಬೀದಿಗಳಲ್ಲಿ ನಾಯಿಗಳ ಉಪಟಳ ದಿನೇ ದಿನೆ ಹೆಚ್ಚಾಗುತ್ತಿದೆ. ರಸ್ತೆ ಮೇಲೆಅಲ್ಲಲ್ಲಿ ಮಲಗಿರುತ್ತವೆ ಹಾಗೂ ಓಡಾಡುತ್ತಿರುತ್ತವೆ.ಯಾರಾದರೂ ರಸ್ತೆಯಲ್ಲಿ ಓಡಾಡುತ್ತಿದ್ದರೆ, ಅವರನ್ನುಅಟ್ಟಿಸಿಕೊಂಡು ಹೋಗಿ ಕಚ್ಚುತ್ತವೆ.

ಇನ್ನು ಮಕ್ಕಳುಮನೆಯಿಂದ ಹೊರಗೆ ಬರುವಂತಿಲ್ಲ. ಜನರಿಗೆ ನಾಯಿಕಚ್ಚಿರುವ ಉದಾಹರಣೆಗಳಿವೆ.ಬೈಕ್‌ನಲ್ಲಿ ಯಾರಾದರೂ ಸಂಚರಿಸಿದರೇ ನಾಯಿಗಳು ಅವರನ್ನು ಅಟ್ಟಾಡಿಸಿಕೊಂಡು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಎಷ್ಟೋಚಾಲಕರು ಗಾಬರಿಗೊಂಡು ಬಿದ್ದು ಗಾಯಗಳಾಗಿವೆ.

ಇನ್ನೂ ರಾತ್ರಿ ವೇಳೆ ಯಾರಾದರೂ ಒಂಟಿಯಾಗಿಬಂದರೆ ಸಾಕು ನಾಯಿಗಳು ಅಕ್ರಮಣ ಮಾಡುತ್ತವೆ.ಹತ್ತಾರು ನಾಯಿಗಳು ಒಟ್ಟಿಗೆ ಓಡಾಡುವುದರಿಂದ ಯಾರಾದರೂ ಹೆದರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಕಳೆದ ಎರಡುವರ್ಷಗಳಿಂದ ಬೀದಿ ನಾಯಿಗಳ ಉಪಟಳಉಲ್ಬಣದಿಂದಾಗಿ ಎಲ್ಲೆಲ್ಲೂ ನಾಯಿಗಳು ಹೆಚ್ಚಾಗಿವೆ.ಇದರ ನಿಯಂತ್ರಣವನ್ನು ಅಧಿಕಾರಿಗಳು ಮಾಡದೆಕಣ್ಣಿದ್ದು, ಕುರುಡರಂತೆ ನಾಯಿಗಳ ದಂಡನ್ನುವೀಕ್ಷಿಸುತ್ತಾ ನಿಯಂತ್ರಣ ಮಾಡುವಲ್ಲಿ ಮೀನಮೇಷ ಎಸಗುತ್ತಿದ್ದಾರೆ.

ಕಾಡಿಗೆ ನಾಯಿಗಳು: ಮೂರು ವರ್ಷಗಳ ಹಿಂದೆಗ್ರಾಮ ಪಂಚಾಯಿತಿ ಅಧಿಕಾರಿಗಳು ನಾಯಿಗಳನ್ನುಹಿಡಿದು ಚುಚ್ಚು ಮದ್ದು ನೀಡಿ, ನಾಯಿಗಳನ್ನುಕಾಡಿಗೆಬಿಡುವ ಮೂಲಕ ನಿಯಂತ್ರಣ ಮಾಡಲಾಗಿತ್ತು.ಇತ್ತೀಚೆಗೆ ನಡೆಯುತ್ತಿಲ್ಲ.ರಾತ್ರಿ ನಿದ್ದೆಗೆ ತೊಂದರೆ: ಗ್ರಾಮದೆಲ್ಲೆಡೆ ನಾಯಿಗಳಸಂಖ್ಯೆ ಉಲ್ಬಣಗೊಂಡಿದ್ದು, ಇಡೀ ರಾತ್ರಿಬೊಗಳುವುದರಿಂದ ರಾತ್ರಿ ನಿದ್ದೆ ಮಾಡದೆಪರಿತಪಿಸುವಂತಹ ವಾತಾವರಣ ನಾಯಿಗಳಿಂದ ನಿರ್ಮಾಣವಾಗಿದೆ.

ಮಂಗಗಳ ಹಾವಳಿ: ಮನೆಗಳ ಚಾವಣಿ ಮೇಲೆಹಾರುವ ಮಂಗಗಳು ಅಲ್ಲಿರುವ ಡಿಟಿಎಚ್‌ ಸೆಟ್‌ಗಳನ್ನು ಹಾಳುಮಾಡುತ್ತಿವೆ. ಮನೆ ಹೆಂಚುಗಳನ್ನುಒಡೆದು ಹಾನಿ ಮಾಡುತ್ತಿರುವ ಈ ಮಂಗಗಳ ಉಪಟಳದಿಂದಲೂ ಸ್ಥಳೀಯರು ಬೇಸತ್ತು ಹೋಗಿದ್ದಾರೆ.ಇಂತಹ ಹಲವಾರು ಸಂದರ್ಭದಲ್ಲಿ ದುರ್ಘ‌ಟನೆಗಳು ನಡೆಯುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ಉದಾಸೀನ ತೋರುತ್ತಿದ್ದಾರೆ.

ಇನ್ನು ನಾಯಿಗಳನ್ನು ಕೊಲ್ಲಲುಮುಂದಾದರೆ ಅವರ ಮೇಲೆ ಪ್ರಾಣಿ ದಯಾಸಂಘದವರು ಪ್ರಕರಣ ದಾಖಲಿಸುತ್ತಾರೆ ಎಂದುಇಲಾಖೆ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆಕಡಿವಾಣ ಹಾಕುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.ಕೂಡಲೇ ನಾಯಿಗಳು ಮತ್ತು ಕೋತಿಗಳ ಉಪಟಳಕ್ಕೆಕಡಿವಾಣ ಹಾಕಬೇಕು ಎಂಬುಂದು ಸಾರ್ವಜನಿಕರಅಗ್ರಹವಾಗಿದೆ.

ಕೆ.ಎಸ್‌.ಮಂಜುನಾಥ್‌

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.