ರಬಕವಿ-ಬನಹಟ್ಟಿ ಜಾಕವೆಲ್‌ಗೆ ಹೋಗುವ ರಸ್ತೆ ಜಲಾವೃತ
ಹಿಪ್ಪರಗಿ ಜಲಾಶಯದ ಹಿನ್ನಿರಿನಿಂದಾಗಿ ಬೆಳೆ ಜಲಾವೃತ
Team Udayavani, Jul 24, 2021, 7:11 PM IST
ಬನಹಟ್ಟಿ : ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ರಕ್ಕಸ ಮಳೆಯಿಂದಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ಹಿಪ್ಪಗಿಯ ಹಿನ್ನಿರಿನ ಒತ್ತಿನಿಂದಾಗಿ ರಬಕವಿ-ಬನಹಟ್ಟಿ ನಗರಕ್ಕೆ ನೀರು ಸರಬರಾಜು ಮಾಡುವ ಜಾಕವೆಲ್‌ಗೆ ಹೋಗುವ ರಸ್ತೆ ಬಂದ ಆಗಿದೆ. ಈ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿ ಪೌರಾಯುಕ್ತ ಶ್ರೀನಿವಾಸ ಜಾಧವ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೇ ಕೆಲವು ದಿನಗಳಿಂದ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಬಾರಿ ಸೆಳೆತದಿಂದ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸೇತುವೆಯಾಗಿದ್ದ ಬೋಟ ಸೇವೆಯನ್ನು ಕಳೆದ ಎರಡು ಮೂರು ದಿನಗಳಿಂದ ಬಂದ ಮಾಡಲಾಗಿದೆ.
ಬೆಳೆ ಜಲಾವೃತ : ಕೃಷ್ಣಾ ನದಿಗೆ ಇಂದು ಕೂಡಾ ಬಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಹಿಪ್ಪರಗಿ ಜಲಾಶಯದ ಹಿನ್ನಿರಿನ ಒತ್ತು ಹೆಚ್ಚಾಗುತ್ತಿರುವುದರಿಂದ ಕೃಷ್ಣಾ ನದಿ ದಂಡೆಯ ತಮದ್ಡಡಿ, ಹಳಿಂಗಳಿ, ಮದನಮಟ್ಟಿ, ಆಸಂಗಿ, ಕುಲಹಳ್ಳಿ, ಅಸ್ಕಿ, ಹಿಪ್ಪರಗಿ ಗ್ರಾಮದ ಸಮೀಪದ ಹೊಲ ಗದ್ದೆಗಳಿಗೆ ನೀರು ಬರಲಾರಂಭಿಸಿದೆ. ಮತ್ತೋಮ್ಮೆ ಮಹಾಪ್ರವಾಹದ ಮುನ್ಸೂಚನೆ ಇದಾಗಿದೆ ಎಂದು ಜನ ಆಡಿಕೊಳ್ಳುತ್ತಿದ್ದು ಇದು ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದು ಕಾದು ನೋಡಬೇಕಷ್ಟೇ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.