ಉಳುಮೆ ಭೂಮಿ ಕಬಳಿಕೆಗೆ ಯತ್ನ
Team Udayavani, Jul 25, 2021, 6:37 PM IST
ಬಂಗಾರಪೇಟೆ: ಹಲವು ವರ್ಷಗಳಿಂದಉಳುಮೆ ಮಾಡುತ್ತಿದ್ದ ಭೂಮಿಯನ್ನುಅರಣ್ಯ ಇಲಾಖೆ ಸೋಲಾರ್ ಫೆನ್ಸಿಂಗ್‌ನೆಪದಲ್ಲಿ ಕಸಿದುಕೊಳ್ಳುತ್ತಿದೆ ಎಂದುಪಲಮಡಗು ದಿನ್ನೂರು ಗ್ರಾಮದ ರೈತಮುರುಗೇಶ್ ಆರೋಪಿಸಿದ್ದಾರೆ.
ಗುಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಪಲಮಡಗು ಗ್ರಾಮಕ್ಕೆ ಸೇರಿದ ಸರ್ವೆನಂ.20 ಪಿ.27ರಲ್ಲಿ 3 ಎಕರೆ ಜಮೀನುನನ್ನ ಹೆಸರಲ್ಲಿದೆ. ಅದನ್ನು ಅರಣ್ಯ ಅಧಿಕಾರಿಗಳು ಕಸಿಯಲು ಮುಂದಾಗಿದ್ದಾರೆ.ಆ ಸರ್ವೆ ನಂ.ನಲ್ಲಿ ನೂರಾರು ಎಕರೆಗೋಮಾಳ ಇದೆ. ಅದನ್ನು ಬಿಟ್ಟು ನಮ್ಮಭೂಮಿಯಲ್ಲಿ ಕಾಡಾನೆ ನಿಯಂತ್ರಣಕ್ಕೆತಾವಿಲ್ಲದ ಸಮಯದಲ್ಲಿ ಸೋಲಾರಫೆನ್ಸಿಂಗ್ ಅಳವಡಿಕೆಗೆ ಭೂಮಿ ಸಮತಟ್ಟು ಮಾಡಿದ್ದಾರೆ ಎಂದು ದೂರಿದರು.
ಅರಣ್ಯಾಧಿಕಾರಿಗಳ ದೌರ್ಜನ್ಯ ತಡೆಯಲು ಬಂಗಾರಪೇಟೆ ಸಿವಿಲ್ ಕೋಟ್ìನಲ್ಲಿ ದಾವೆ ದಾಖಲಿಸಿ, ಜಮೀನಿನಿಂದಒಂದು ಕಿ.ಮೀ. ವ್ಯಾಪ್ತಿಯವರೆಗೂರೈತರಿಗೆ ಯಾವುದೇ ತೊಂದರೆ ಕೊಡಬಾರದು ಎಂಬ ತೀರ್ಪು ನೀಡಿತ್ತು.ಅದನ್ನು ಕಡೆಗಣಿಸಿ ಮೇಲ್ಮನವಿ ಅರ್ಜಿಯನ್ನು ಕೆಜಿಎಫ್ ಕೋರ್ಟ್‌ನಲ್ಲಿಇಲಾಖೆ ಸಲ್ಲಿಸಿತ್ತು.
ಅಲ್ಲಿಯೂ ಹಿಂದಿನಆದೇಶವನ್ನೇ ಎತ್ತಿ ಹಿಡಿದಿದೆ ಎಂದುದಾಖಲೆಗಳನ್ನು ಪ್ರದರ್ಶಿಸಿದರು.ಇಷ್ಟಾದರೂ ಸುಮ್ಮನಿರದ ಅರಣ್ಯಇಲಾಖೆಯ ವಿದ್ಯಾ ಹಾಗೂ ಇತರರುಕೋರ್ಟ್ ಆದೇಶ ಉಲ್ಲಂ ಸಿ,ಬೇಸಾಯ ಮಾಡಲು ವಿನಾಕಾರಣತೊಂದರೆ ಕೊಡುತ್ತಿದ್ದಾರೆ.
ನಮ್ಮಜಮೀನಿನಿಂದ ಮೂರ್‍ನಾಲ್ಕುಎಕರೆಯಿಂದ ಕೆಳಭಾಗದಲ್ಲಿ ಕಾಡುಪ್ರಾಣಿಗಳು ಬರದಂತೆ ಗುಂಡಿ ಇತ್ಯಾದಿತೋಡುತ್ತಿದ್ದ ಇಲಾಖೆಯವರು ಈಗಏಕಾಏಕಿ ನಮ್ಮ ಜಮೀನಿನಲ್ಲಿ ಸೋಲಾರ್‌ಫೆನ್ಸಿಂಗ್ ಅಳವಡಿಸಲು ಮುಂದಾಗಿದ್ದಾರೆ. ಈ ಹುನ್ನಾರ ಕೈಬಿಡಬೇಕೆಂದುರೈತ ಮುರುಗೇಶ್ ದಂಪತಿಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.