ಕನ್ನಡದ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ ಇನ್ನಿಲ್ಲ

Team Udayavani, Jul 26, 2021, 8:58 AM IST

jayanti

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಎಂದೇ ಹೆಸರಾಗಿದ್ದ ಜಯಂತಿ ಇಂದು ನಿಧನರಾಗಿದ್ದಾರೆ. 76 ವರ್ಷ ಪ್ರಾಯದ ಜಯಂತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.

ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿಯಾಗಿದ್ದ ಜಯಂತಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿಯ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿಯಾಗಿದ್ದರು.

ಇದನ್ನೂ ಓದಿ:ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಜಯಂತಿಯವರನ್ನು ತಮ್ಮ `ಜೇನುಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದ್ದು ಪುಟ್ಟಸ್ವಾಮಿಯವರೇ. ಜಯಂತಿಯವರು ಡಾ.ರಾಜ್ ಕುಮಾರ್ ಜೊತೆ ದಾಖಲೆಯ 45 ಚಿತ್ರಗಳಲ್ಲಿ ನಟಿಸಿದ್ದಾರೆ.

ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದರು.

ಜಯಂತಿ ಅಭಿನಯದ ಪ್ರಮುಖ ಚಿತ್ರಗಳು: 

“ಜೇನುಗೂಡು’, “ಶ್ರೀರಾಮಾಂಜನೇಯ ಯುದ್ಧ’, “ಕಲಾವತಿ’, “ಚೆಂದವಳ್ಳಿಯ ತೋಟ’, “ಪತಿಯೇ ದೈವ’, “ತುಂಬಿದ ಕೊಡ’, “ಬೆಟ್ಟದ ಹುಲಿ’, “ಮಿಸ್‌. ಲೀಲಾವತಿ’, “ವಾತ್ಸಲ್ಯ’, “ಎಂದೂ ನಿನ್ನವನೆ’, “ಕಿಲಾಡಿ ರಂಗ’, “ಮಂತ್ರಾಲಯ ಮಹಾತ್ಮೆ’, “ಮಮತೆಯ ಬಂಧನ’, “ಮಹಾಶಿಲ್ಪಿ’, “ಅನುರಾಧ’, “ಇಮ್ಮಡಿ ಪುಲಿಕೇಶಿ’, “ಕಲ್ಲು ಸಕ್ಕರೆ’, “ಚಕ್ರತೀರ್ಥ’, “ದೇವರ ಗೆದ್ದ ಮಾನವ’, “ನಕ್ಕರೆ ಅದೇ ಸ್ವರ್ಗ’, “ಲಗ್ನ ಪತ್ರಿಕೆ’, “ಜೇಡರ ಬಲೆ’, “ಎರಡು ಮುಖ’, “ಗೃಹಲಕ್ಷ್ಮೀ’, “ಚೂರಿ ಚಿಕ್ಕಣ್ಣ’, “ಪುನರ್ಜನ್ಮ’, “ಭಲೇ ರಾಜ’, “ದೇವರ ಮಕ್ಕಳು’, “ನನ್ನ ತಮ್ಮ’, “ಪರೋಪಕಾರಿ’, “ಬಾಳು ಬೆಳಗಿತು’, “ಶ್ರೀಕೃಷ್ಣ ದೇವರಾಯ’, “ಸೇಡಿಗೆ ಸೇಡು’, “ಕಸ್ತೂರಿ ನಿವಾಸ’, “ಕುಲ ಗೌರವ’, “ತಂದೆ ಮಕ್ಕಳು’, “ನಾಗರ ಹಾವು’, “ವಿಷಕನ್ಯೆ’, “ಎಡಕಲ್ಲುಗುಡ್ಡದ ಮೇಲೆ’, “ಕಸ್ತೂರಿ ವಿಜಯ’, “ತುಳಸಿ’, “ದೇವರು ಕೊಟ್ಟ ವರ’, “ಬಹದ್ದೂರ್‌ ಗಂಡು’, “ದೇವರ ದುಡ್ಡು’, “ಶ್ರೀಮಂತನ ಮಗಳು’, “ಎಡೆಯೂರು ಶ್ರೀಸಿದ್ಧಲಿಂಗೇಶ್ವರ ಮಹಾತ್ಮೆ’, “ನಾಗ ಕಾಳ ಭೈರವ’, “ಸಿಂಹದಮರಿ ಸೈನ್ಯ’, “ಕಲ್ಲುವೀಣೆ ನುಡಿಯಿತು’, “ಕೆರಳಿದ ಹೆಣ್ಣು’, “ಬೆಂಕಿ ಬಿರುಗಾಳಿ’, “ಶುಭ ಮುಹೂರ್ತ’, “ಮಸಣದ ಹೂವು’, “ಅಗ್ನಿಪರೀಕ್ಷೆ’, “ಆನಂದ್‌’, “ಉಷಾ’, “ತಾಯಿಯೇ ನನ್ನ ದೇವರು’, “ಏನ್‌ ಸ್ವಾಮಿ ಅಳಿಯಂದ್ರೆ’, “ನ್ಯಾಯಕ್ಕಾಗಿ ನಾನು’, “ಶ್ರೀಸತ್ಯನಾರಾಯಣ ಪೂಜಾಫ‌ಲ’, “ಸುಂದರಕಾಂಡ’, “ಬೆಳ್ಳಿ ಮೋಡಗಳು’, “ಜನ ಮೆಚ್ಚಿದ ಮಗ’, “ಮೇಘಮಾಲೆ’, “ರಸಿಕ’, “ಗಾಜನೂರ ಗಂಡು’, “ನಮ್ಮೂರ ಹುಡುಗ’, “ಟುವ್ವಿ ಟುವ್ವಿ ಟುವ್ವಿ’, “ನನ್ನಾಸೆಯ ಹೂವೇ’, “ಪಟೇಲ’, “ಸಾವಿರ ಮೆಟ್ಟಿಲು’.

ಕನ್ನಡದ ಮೊದಲ ಗ್ಲಾಮರಸ್‌ ನಟಿ :

ಕನ್ನಡ ಚಿತ್ರರಂಗದ ಮೊದಲ ಗ್ಲಾಮರಸ್‌ ಹಾಗೂ ಬೋಲ್ಡ್‌ ನಟಿ ಯಾರೆಂದರೆ ಅದಕ್ಕೆ ಉತ್ತರ ಜಯಂತಿ. ಆಗಿನ ಸಮಯಕ್ಕೆ ನಟಿಯರು ಮಡಿವಂತಿಕೆ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದರು. ಆದರೆ ಜಯಂತಿ ಅವರು ಬೋಲ್ಡ್‌ ಆಗಿ, ರೊಮ್ಯಾಂಟಿಕ್‌ ಪಾತ್ರಗಳಲ್ಲಿಯೂ ಲವಲವಿಕೆಯಿಂದ ಅಭಿನಯಿಸಿದ್ದರು. 1965ರಲ್ಲಿ “ಮಿಸ್‌ ಲೀಲಾವತಿ’  ಸಿನಿಮಾದಲ್ಲಿ ಜಯಂತಿಯವರು ಗ್ಲಾಮರ್‌ ಬೊಂಬೆಯಾಗಿ ನಟಿಸಿದ್ದರು. ಮೊದಲ ಬಾರಿಗೆ ಅವರು ಸ್ವಿಮ್‌ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಕೇವಲ ಒಂದೇ ತೆರನಾದ ಪಾತ್ರಗಳಿಗೆ ಅಂಟಿಕೊಳ್ಳದೇ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವರ ತುಡಿತ ಅವರನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಿತು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.